ಬೆಂಗಳೂರು : ಕಿಚ್ಚ ಸುದೀಪ್ ಭೇಟಿಯಲ್ಲಿ ಯಾವುದೇ ರಾಜಕೀಯ ಇಲ್ಲ, ಶೂಟಿಂಗ್ ಗೆ ಯಾವುದೋ ಜಾಗದ ವಿಚಾರಕ್ಕೆ ಮಾತಾಡಲು ಬಂದಿದ್ದರು ಎಂದು ಡಿಕೆಶಿ ಸ್ಪಷ್ಟನೆ ನೀಡಿದರು.ಬೆಂಗಳೂರಲ್ಲಿ ಮಾತಾಡಿದ ಅವರು, ಸುದೀಪ್ ಭೇಟಿ ಖಾಸಗಿಯಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಹೇಳಿದರು.
ಡಿಕೆ ಶಿವಕುಮಾರ್‌ಗೆ ಸಿಸಿಎಲ್ ಪಂದ್ಯಕ್ಕೆ ಆಹ್ವಾನ ನೀಡಲು ನಟ ಸುದೀಪ್ ಆಗಮಿಸಿದ್ದರು ಎನ್ನಲಾಗಿದೆ. ಫೆ. 8. 9ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಎಲ್ ಪಂದ್ಯಗಳು ನಡೆಯಲಿದೆ. ಫೆಬ್ರವರಿ 8 ರಂದು ಹೈದರಾಬಾದ್ ವಿರುದ್ದ ಮೊದಲ ಪಂದ್ಯ ಆಡಲಿರುವ ಕರ್ನಾಟಕ ಬುಲ್ಡೋಜರ್ ತಂಡ ಮ್ಯಾಚ್ಗೆ ರೆಡಿಯಾಗುತ್ತಿದೆ.ಡಿಸಿಎಂ ನಿವಾಸದಿಂದ ತೆರಳಿದ ನಟ ಸುದೀಪ್ ಅವರ ಕಾರಲ್ಲೇ ನಲಪಾಡ್ ಕೂಡಾ ತೆರಳಿದ್ದಾರೆ ಎಂದು ಗೊತ್ತಾಗಿದೆ. ಸಿಸಿಎಲ್ ಉದ್ಘಾಟನೆಗೆ ಆಹ್ವಾನಿಸಲು ಡಿಕೆಶಿ ಮನೆಗೆ ಕಿಚ್ಚ ಬಂದಿದ್ದರು ಎನ್ನಲಾಗುತ್ತಿದೆ.
ಕುಮಾರಸ್ವಾಮಿಗೆ ಟಾಂಗ್ !
ಮಂತ್ರಿಯಾದ ತಕ್ಷಣ ಮೇಕೆದಾಟು ಯೋಜನೆಗೆ ಪಿಎಂ ಕೈಯಲ್ಲಿ ಸಹಿ ಹಾಕಿಸುತ್ತೇವೆ ಎಂದು ಕುಮಾರಸ್ವಾಮಿ ಭರವಸೆ ನೀಡಿದ್ದರು. ಆ ಬಗ್ಗೆ ಮಾತಾಡಲಿ ಇಲ್ಲಸಲ್ಲದ ಆರೋಪಗಳನ್ನು ನಿಲ್ಲಿಸಲಿ ಎಂದು ಡಿಕೆಶಿ ಟಾಂಗ್ ನೀಡಿದರು.