ತುಮಕೂರು : ಭಾರೀ ಕುತೂಹಲ ಕೆರಳಿಸಿದ್ದ ತುಮಕೂರು ಡಿಸಿಸಿ (DCC) ಬ್ಯಾಂಕ್ (Bank) ಚುನಾವಣೆಯಲ್ಲಿ (Elections) ಮಾಜಿ ಸಹಕಾರಿ ಸಚಿವ ಕೆ.ಎನ್.ರಾಜಣ್ಣ (KN Rajanna) ಅವರು ಅಧಿಪತ್ಯ ಸಾಧಿಸಿದ್ದಾರೆ. ಇಂದು (ಆ.24) ನಡೆದ 6 ತಾಲೂಕುಗಳ ಚುನಾವಣೆಯಲ್ಲಿ ಎಲ್ಲಾ 6 ಕಡೆ ಕೆ ಎನ್ ರಾಜಣ್ಣ ಬೆಂಬಲಿಗರು ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ರಾಜಣ್ಣ ಮತ್ತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಲಿದ್ದಾರೆ. ರಾಜಣ್ಣ ಬರೋಬ್ಬರಿ ಐದು ಬಾರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ. ಇದೀಗ 6ನೇ ಬಾರಿ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ. ಇದರೊಂದಿಗೆ ಸತತ 25 ವರ್ಷಗಳಿಂದ ಡಿಸಿಸಿ ಬ್ಯಾಂಕ್ನಲ್ಲಿ ಹೊಂದಿದ್ದ ಹಿಡಿತವನ್ನು ರಾಜಣ್ಣ ಮುಂದುವರೆಸಿಕೊಂಡು ಬಂದಂತಾಗಿದೆ. ‘ಎ’ ವರ್ಗ ತುಮಕೂರು ತಾಲೂಕಿನಿಂದ ಏಕೈಕ ಅಭ್ಯರ್ಥಿಯಾಗಿ ಕಣದಲ್ಲಿದ್ದ ಮಾಜಿ ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದರು. ಮತ್ತೊಮ್ಮೆ ಡಿಸಿಸಿ ಬ್ಯಾಂಕ್ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಅವರು ಸತತ 6 ಬಾರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗ್ತಿರೋ ದಾಖಲೆ ಹೊಂದಿದ್ದಾರೆ.
8 ನಿರ್ದೇಶಕರು ಅವಿರೋಧ ಆಯ್ಕೆ
‘ಎ’ ವರ್ಗದಿಂದ ತುಮಕೂರು ತಾಲೂಕಿನಿಂದ ರಾಜಣ್ಣ, ಮಧುಗಿರಿ ತಾಲೂಕಿನಿಂದ ಜಿ.ಜಿ. ರಾಜಣ್ಣ, ಕೊರಟಗೆರೆಯಿಂದ ಎಸ್. ಹನುಮಾನ್ ಹಾಗೂ ತುರುವೇಕೆರೆಯಿಂದ ಎಂ. ಸಿದ್ದಲಿಂಗಪ್ಪ ಅವಿರೋಧ ಆಯ್ಕೆಯಾಗಿದ್ದಾರೆ. ‘ಬಿ’ ವರ್ಗದಿಂದ 10 ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘಗಳ ಪ್ರತಿನಿಧಿಯಾಗಿ ರಾಜಣ್ಣ ಪುತ್ರ ರಾಜೇಂದ್ರ, ‘ಸಿ’ ವರ್ಗದಿಂದ ಪಟ್ಟಣ ಸಹಕಾರ ಸಂಘಗಳ ಪ್ರತಿನಿಧಿ ಎಸ್.ಲಕ್ಷ್ಮೇನಾರಾಯಣ್, ‘ಡಿ’ ವರ್ಗದಿಂದ ಹಾಲು ಉತ್ಪಾದಕರ ಸಂಘಗಳ ಕ್ಷೇತ್ರದಿಂದ ಮಧುಗಿರಿಯ ಬಿ. ನಾಗೇಶ್ ಬಾಬು ಹಾಗೂ ಡಿ-1 ವರ್ಗದ ಮಹಿಳಾ ಸಂಘಗಳ ಪ್ರತಿನಿಧಿಯಾಗಿ ಮಾಲತಿ ಅವಿರೋಧ ಆಯ್ಕೆಯಾಗಿದ್ದಾರೆ.