Home ಜನ-ಗಣ-ಮನ ಕಲೆ – ಸಾಹಿತ್ಯ ಕ ಸಾ ಪ ಚುನಾವಣೆ ಇಂದು ಹಣಕ್ಕೆ ಸಿಲುಕಿದೆ – ಮೇಟಿಕೇರಿ ಹಿರಿಯಣ್ಣ

ಕ ಸಾ ಪ ಚುನಾವಣೆ ಇಂದು ಹಣಕ್ಕೆ ಸಿಲುಕಿದೆ – ಮೇಟಿಕೇರಿ ಹಿರಿಯಣ್ಣ

ಚನ್ನರಾಯಪಟ್ಟಣ: ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಅಸ್ಮಿತೆಯ ಧ್ವನಿಯಾಗಿದ್ದು ಇಂತಹ ಜಾಗಕ್ಕೆ ಕನ್ನಡ ಮನಸುಗಳನ್ನು ಸೆಳೆಯುವ ಸಂಘಟನಾ ಚಾತುರ್ಯ ಇರುವ ಹೋರಾಟದ ಹಿನ್ನೆಲೆ ಇಂದ ಬಂದಂತವರು ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಗೊಂಡರೆ ಪರಿಷತ್ ನಿಂತ ನೀರಾಗದೆ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಹಿರಿಯ ಸಾಹಿತಿ ಮೇಟಿಕೇರಿ ಹಿರಿಯಣ್ಣ ಅಭಿಪ್ರಾಯಪಟ್ಟರು.

ಪಟ್ಟಣದ ಡಾ. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಾದಿಗೆ ಪ್ರಬಲ ಆಕಾಂಕ್ಷಿಯಾಗಿರುವ ಸಾಮಾಜಿಕ ಹೋರಾಟಗಾರ ಕಾಳೇನಹಳ್ಳಿ ಆನಂದ್ ಅವರ ಹಿತೈಷಿಗಳ ಚಿಂತನಾಸಭೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪರಿಷತ್ ಚುನಾವಣೆಗಳು ರಾಜಕೀಯ ಚುನಾವಣೆಗಳ ರೀತಿ ಹಣದ ಹೊಳೆಯನ್ನು ಹರಿಸುವ ಮಟ್ಟಕ್ಕೆ ಬಂದಿರುವುದು ಸಂಗತಿ ಕನ್ನಡ ಸಾಹಿತ್ಯ ಪರಿಷತ್ತು ಎಂದರೆ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸುವ ತುಡಿತ ಇರುವ ವ್ಯಕ್ತಿಯನ್ನು ಆರಿಸಿ ಕಳಿಸುವಂತಹ ಒಂದು ವ್ಯವಸ್ಥೆ ಆದರೆ ಇಂದು ಉದ್ಯಮಿಗಳು ರಾಜಕೀಯ ಹಿನ್ನಡೆಯುಳ್ಳವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದು ಚುನಾವಣೆಗಳಲ್ಲಿ ನಿಜವಾದ ಕನ್ನಡದ ಕಟ್ಟಾಳುಗಳು ಹಿಮ್ಮುಖವಾಗಲು ಕಾರಣವಾಗಿದೆ ಎಂದರು.

ಆನಂದ್ ಕಾಳೇನಹಳ್ಳಿ ಚಿಕ್ಕಂದಿನಿಂದಲೂ ಸಂಘಟನಾ ಚತುರತೆ ಇರುವ ವ್ಯಕ್ತಿಯಾಗಿದ್ದು ಅವರಿಗೆ ಕನ್ನಡಕ್ಕಾಗಿ ಕೆಲಸ ಮಾಡುವ ಅವಕಾಶ ಸಿಗಲಿ ಎಂದು ಹಾರೈಸಿದರು.

ಈ ಸಭೆಯಲ್ಲಿ ನಾಡಪ್ರಭು ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಕಾಳೇನಹಳ್ಳಿ ಆನಂದ್ ಕುಮಾರ್, ಕರ್ನಾಟಕ ಸಹಕಾರ ಮಾರಾಟ ಮಂಡಳಿಯ ನಿರ್ದೇಶಕರಾದ ಸಿ ಎನ್ ಪುಟ್ಟಸ್ವಾಮಿಗೌಡ, ಟಿ ಎ ಪಿ ಸಿ ಎಂ ಎಸ್ ಅಧ್ಯಕ್ಷರಾದ ಮೆಡಿಕಲ್ ವೆಂಕಟೇಶ್, ಮಾಜಿ ಅಧ್ಯಕ್ಷರಾದ ಕುಂಬಾರಹಳ್ಳಿ ರಮೇಶ್, ಮಾಜಿ ಉಪಾಧ್ಯಕ್ಷರಾದ ಸಿ ಜೆ ಜಗದೀಶ್, ಪುರಸಭಾ ಮಾಜಿ ಅಧ್ಯಕ್ಷರಾದ ಸಿ ನಾಗರಾಜು,ಕೋಟೆ ಮೋಹನ್, ಹಿರಿಯ ಸಾಹಿತಿಗಳಾದ ಮೇಟಿಕೆರೆ ಹಿರಿಯಣ್ಣ, ಪ್ರೊಫೆಸರ್ ಸಿದ್ದೇಗೌಡ,ಹೊನ್ನಶೆಟ್ಟಿಹಳ್ಳಿ ಗಿರಿರಾಜ್, ಶ್ರೀಮತಿ ಜಯಂತಿ ಚಂದ್ರಶೇಖರ್,ಕಾಳೇನಹಳ್ಳಿ ಚಂದ್ರು, ಹರಿಕಥೆ ವಿದ್ವಾಂಸರಾದ ಲೋಕೇಶ್ ದಾಸ್, ಮಕ್ಕಳ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಸಿ ಎನ್ ಅಶೋಕ್, ನವೋದಯ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಮುರಾಜಿ ಮಂಜಣ್ಣ, ಕಾರ್ಯದರ್ಶಿಗಳಾದ ಕೆಂಬಾಳು ಶರತ್, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ನಾಗರತ್ನ, ಉಪಾಧ್ಯಕ್ಷರಾದ ಪ್ರೇಮಮ್ಮ, ಸಮಾಜ ಸೇವಕರುಗಳಾದ ಗಜಾನನ ಮನೋಹರ್, ಅಬ್ದುಲ್ ಅಝೀಮ್, ಮಹದೇವ್, ಸಿದ್ದೇಶ್, ಕನ್ನಡ ಪರ ಹೋರಾಟಗಾರ ಜನಿವಾರ ಶರತ್, ರಾಜಕುಮಾರ, ಉಪನ್ಯಾಸಕರಾದ ಎಂ ಜೆ ರತ್ನಾಕರ್, ಹನುಮಂತಪ್ಪ,ಯಶವಂತ ಕುಮಾರ್, ಸೇರಿದಂತೆ ಇತರರು ಹಾಜರಿದ್ದರು.

You cannot copy content of this page

Exit mobile version