ಮಂಗಳೂರು: ಮಂಗಳೂರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ(ಕೆಎಸ್‌ಆರ್‌ಟಿಸಿ) ವಿಭಾಗವು ದಕ್ಷಿಣ ಕನ್ನಡದ ಪ್ರಮುಖ ದೇವಾಲಯಗಳಿಗೆ ಸಂಪರ್ಕ ಕಲ್ಪಿಸಲು ಉದ್ದೇಶದಿಂದ ವಾರಾಂತ್ಯದಲ್ಲಿ ಪ್ಯಾಕೇಜ್ ಟೂರ್‌ಗಳನ್ನು ಪರಿಚಯಿಸಲಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಎಂ. ಚಂದ್ರಪ್ಪ ಅವರು ಹೇಳಿದರು.
ಈ ಕುರಿತು ಮಾಹಿತಿ ನೀಡಿರುವ ಅವರು, ಮಂಗಳೂರು ಮತ್ತು ದಸರಾ ದರ್ಶನ ಪ್ಯಾಕೇಜ್ ಟೂರ್‌ನ ಯಶಸ್ಸಿನಿಂದ ಉತ್ತೇಜಿತವಾಗಿರುವ ಕೆಎಸ್‌ಆರ್‌ಟಿಸಿ ವಿಭಾಗವು ವಾರಾಂತ್ಯದ ಪ್ರವಾಸದ ಪ್ಯಾಕೇಜ್‌ಗಳ ವಿಧಾನಗಳ ಕುರಿತು ಕೆಲಸ ಮಾಡಲು ತಿಳಿಸಿದೆ. ಈ ಹಿನ್ನಲೆಯಲ್ಲಿ ಪುತ್ತೂರು ವಿಭಾಗಕ್ಕೆ ಅಂತಹ ಬೇಡಿಕೆ ಬಂದರೆ ಆ ಭಾಗದಲ್ಲೂ ಟೂರ್ ಪ್ಯಾಕೇಜ್ ಗಳನ್ನೂ ಪರಿಚಯಿಸುತ್ತೇವೆ ಎಂದು ವಿಭಾಗ ತಿಳಿಸಿದೆ ಎಂದು ಹೇಳಿದರು.
ಈ ಹಿನ್ನೆಯಲ್ಲಿ ಪ್ಯಾಕೇಜ್ ಟೂರ್ ಅಡಿಯಲ್ಲಿ ಕನಿಷ್ಠ ಐದರಿಂದ 10 ಕೆಎಸ್‌ಆರ್‌ಟಿಸಿ ಬಸ್‌ಗಳು ಕಾರ್ಯನಿರ್ವಹಿಸಲಿದ್ದು, ಸಾರ್ವಜನಿಕರಿಂದ ಬೇಡಿಕೆ ಹೆಚ್ಚಾದಲ್ಲಿ ಹೆಚ್ಚಿನ ಬಸ್‌ಗಳನ್ನು ರಸ್ತೆಗಿಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಮಂಗಳೂರು ದಸರಾ ದರ್ಶನ ಪ್ಯಾಕೇಜ್ ಮಾದರಿಯಂತೆ ಅಕ್ಟೋಬರ್ 21 ರಿಂದ 27 ರವರೆಗೆ ‘ದೀಪಾವಳಿ’ಗೆ ಟೂರ್ ಪ್ಯಾಕೇಜ್ ಪರಿಚಯಿಸಲಾಗುವುದು. ಈ ಪ್ಯಾಕೇಜ್‌ನಲ್ಲಿ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಕೊಲ್ಲೂರು ಶ್ರೀಗಳನ್ನು ಒಳಗೊಂಡಂತೆ ಕುಂದಾಪುರ ಮತ್ತು ಉಡುಪಿಯನ್ನು ಸಹ ಪ್ರವಾಸ ಪ್ಯಾಕೇಜ್‌ನ ಅಡಿಯಲ್ಲಿ ಸೇರಿಸಲಾಗುತ್ತದೆ. ಇದಲ್ಲದೆ, ಚಿತ್ರದುರ್ಗ ಮತ್ತು ಮಂಗಳೂರು ನಡುವೆ ಹೆಚ್ಚಿನ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಪರಿಚಯಿಸಲಾಗುತ್ತದೆ ಎಂದು ಹೇಳಿದರು.