Home ಬ್ರೇಕಿಂಗ್ ಸುದ್ದಿ ಖ್ಯಾತ ವಿಜ್ಞಾನಿ ಸಮೀರ್‌ ಕಾಮತ್‌ ಡಿಆರ್‌ಡಿಒ ಮುಖ್ಯಸ್ಥರಾಗಿ ನೇಮಕ

ಖ್ಯಾತ ವಿಜ್ಞಾನಿ ಸಮೀರ್‌ ಕಾಮತ್‌ ಡಿಆರ್‌ಡಿಒ ಮುಖ್ಯಸ್ಥರಾಗಿ ನೇಮಕ

0

ನವದೆಹಲಿ: ಖ್ಯಾತ ವಿಜ್ಞಾನಿ ಸಮೀರ್‌ ವಿ.ಕಾಮತ್‌ ಅವರು ರಕ್ಷಣಾ ಸಂಶೊಧನೆ ಮತ್ತು ಅಭಿವೃದ್ದಿ ಸಂಸ್ಥೆಯ(DRDO) ಮುಖ್ಯಸ್ಥ ಹಾಗೂ ರಕ್ಷಣಾ ಸಂಶೋಧನೆ ಮತು ಅಭಿವೃದ್ದಿ ವಿಭಾಗದ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

ಈ ಮೊದಲು ಕಾಮತ್‌ ಅವರು ಡಿಆರ್‌ಡಿಒದ ನೌಕಾ ವ್ಯವಸ್ಥೆ ಮತ್ತು ಸರಕು ವಿಭಾಗದ ಮಹಾ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಡಿಆರ್‌ಡಿಒ ಮುಖ್ಯಸ್ಥರಾಗಿದ್ದ ಸತೀಶ್‌ ರೆಡ್ಡಿ ಅವರನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ವೈಜ್ಞಾನಿಕ ಸಲಹೆಗಾರರನ್ನಾಗಿ ನೇಮಿಸಲಾಗಿತ್ತು. ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಕಾಮತ್‌ ನೇಮಕಗೊಂಡಿದ್ದಾರೆ.

ಸಂಪುಟದ ನೇಮಕಾತಿ ಸಮಿತಿಯು ಕಾಮತ್‌ ಅವರ ನೇಮಕಕ್ಕೆ ಒಪ್ಪಿಗೆ ಸೂಚಿಸಿದೆ. ಅಧಿಕಾರ ಸ್ವೀಕರಿಸಿದ ದಿನದಿಂದ 60 ವರ್ಷ ವಯಸ್ಸಾಗುವವರೆಗೂ ಕಾಮತ್‌ ಅವರು ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

You cannot copy content of this page

Exit mobile version