ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್ ಶೋ ಪರಿಣಾಮ ಯಲಹಂಕ ಭಾಗದಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿದ್ದು, ಕಿಲೋಮೀಟರ್ ಗಟ್ಟಲೆ ದೂರ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಟ್ರಾಫಿಕ್ ಪೊಲೀಸರು ಸಂಚಾರ ದಟ್ಟಣೆ ನಿವಾರಿಸಲು ಹರಸಾಹಸ ಪಡುತ್ತಿದ್ದಾರೆ. ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್ ಶೋಗೆ ಇಂದು ಕೊನೆಯ ದಿನವಾಗಿದೆ. ಪರಿಣಾಮ ತೀವ್ರವಾಗಿ ಸಂಚಾರದ ಸಮಸ್ಯೆ ಎದುರಾಗಿದೆ.
ಬೆಂಗಳೂರಿನಲ್ಲಿ ಏರ್ ಶೋ ಆರಂಭವಾಗಿದ್ದು, ರ್ ಶೋ ಹಿನ್ನೆಲೆ ಯಲಹಂಕ ಫ್ಲೈ ಓವರ್ ನಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. ಬೆಳಗ್ಗೆ ಕೆಲಸಕ್ಕೆ ಹೋಗುವ ಜನರು ಪರದಾಟ ನಡೆಸಿದ್ದಾರೆ. ಸರ್ವೀಸ್ ರಸ್ತೆಯಲ್ಲೇ ವಾಹನ ಸವಾರರು ಸಿಲುಕಿಕೊಂಡಿದ್ದಾರೆ. ಜೊತೆಗೆ ಆಂಬ್ಯುಲೆನ್ಸ್ ಸಹ ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿದೆ.