ರಾಜಕೀಯ ನಡೆಯಬೇಕಿರುವುದು ಚುನಾವಣಾ ಕಣದಲ್ಲಿ, ಅದಕ್ಕೆ ನೀವೇಕೆ ಬಳಕೆಯಾಗುತ್ತಿದ್ದೀರಿ ಎಂದು ಸುಪ್ರೀಂ ಕೋರ್ಟ್ ಜಾರಿ ನಿರ್ದೇಶನಾಲಯವನ್ನು ಪ್ರಶ್ನಿಸಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಪತ್ನಿ ಬಿ.ಎಂ. ಪಾರ್ವತಿ ವಿರುದ್ಧದ ಮುಡಾ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಇಡಿ ಸಲ್ಲಿಸಿದ ಮೇಲ್ಮನವಿಯನ್ನು ಸಿಜೆಐ ಬಿ.ಆರ್. ಗವಾಯಿ ನೇತೃತ್ವದ ಪೀಠವು ವಿಚಾರಣೆ ನಡೆಸುವಾಗ ಈ ಪ್ರಶ್ನೆಯನ್ನು ಕೇಳಿದೆ.
“ದಯವಿಟ್ಟು ನಾವು ಬಾಯಿ ತೆರೆಯುವಂತೆ ಮಾಡಬೇಡಿ ಮಿಸ್ಟರ್ ರಾಜು, ಹಾಗೊಂದು ವೇಳೆ ನಾವು ಮಾತನಾಡಬೇಕಾಗಿ ಬಂದರೆ ನಿಮ್ಮ ವಿರುದ್ಧ ನಾವು ಕಠಿಣವಾದ ಹೇಳಿಕೆಯನ್ನು ನೀಡಬೇಕಾಗಿ ಬರುತ್ತದೆ. ದುರದೃಷ್ಟವಶಾತ್ ಈ ವಿಷಯದ ಕುರಿತು ನನಗೆ ಮಹಾರಾಷ್ಟ್ರದಲ್ಲೇ ಅನುಭವವಾಗಿದೆ. ನೀವು ಈಗ ಆ ಹಿಂಸಾಚಾರವನ್ನು ದೇಶಾದ್ಯಂತ ಹರಡಬೇಡಿ. ರಾಜಕೀಯವೆನ್ನುವುದು ಚುನಾವಣಾ ಕಣದಲ್ಲಿ ನಡೆಯ ಬೇಕು. ಅದಕ್ಕೆ ನಿಮ್ಮನ್ನೇಕೆ ಬಳಸಲಾಗುತ್ತಿದೆ?”ಎಂದು ಸಿಜೆಐ ಬಿ ಆರ್ ಗವಾಯಿ ಇಡಿ ಪರ ವಕೀಲರನ್ನು ಪ್ರಶ್ನಿಸಿದರು.
ಇದರ ನಂತರ ಸುಪ್ರೀಕೋರ್ಟ್ ಇಡಿಯ ಮನವಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿತು.
https://x.com/LiveLawIndia/status/1947172092002316709