Monday, January 13, 2025

ಸತ್ಯ | ನ್ಯಾಯ |ಧರ್ಮ

ಧರ್ಮದರ್ಮಗಳ ಬಡಿದಾಟ, ವೈಮನಸ್ಸುಗಳ ಸ್ಥಿತಿ ಮೊದಲು ನಿಲ್ಲಲಿ: ಬಾನಮ್ ಲೋಕೇಶ್

ಹಾಸನ: ಜಾಗತೀಕ ಕಾಲದಲ್ಲಿ ಬಹಳಷ್ಟು ದೇಶಗಳಲ್ಲಿ ಮಾನವ ಹಕ್ಕುಗಳಿಗೆ ಚ್ಯುತಿ ಬರುವುದನ್ನು ನೋಡುತ್ತಿದ್ದೇವೆ. ಧರ್ಮದರ್ಮಗಳ ಬಡಿದಾಟ, ವೈಮನಸ್ಸುಗಳ ಸ್ಥಿತಿ ಉದ್ಭವ ಆಗುತ್ತಿದ್ದು, ಇದು ನಿಲ್ಲಬೇಕಾಗಿದೆ ಎಂದು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಾನಮ್ ಲೋಕೇಶ್ ತಿಳಿಸಿದರು.

ನಗರದ ಸಂಗಮೇಶ್ವರ ಬಡಾವಣೆ, ಜವೇನಹಳ್ಳಿ ಕೆರೆ ಬಳಿ ಇರುವ ಹಿರಿಯ ನಾಗರೀಕರ ಸಭಾಂಗಣದಲ್ಲಿ ಕರ್ನಾಟಕ ಮಾನವ ಹಕ್ಕುಗಳ ಜನಸೇವಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಸಮಿತಿಯ ನೂತನ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಜೀವನ ಮಾಡುವುದಕ್ಕೆ ಪ್ರಮುಖವಾದುದ್ದು ಎಂದರೇ ವ್ಯಕ್ತಿಯ ಹಕ್ಕು ಮತ್ತು ಕರ್ತವ್ಯಗಳು. ನಾವು ಎಲ್ಲಾರು ಕೂಡ ಮಾನವರೇ ಪ್ರಪಂಚದಲ್ಲಿ ಇರುವ ಬುದ್ದಿ ಜೀವಿಗಳೆ ಎನ್ನಿಸಿಕೊಂಡಿರುವವರು ಕೂಡ ಮಾನವರೇ ಆದರೇ ಅವರ ಹಕ್ಕುಗಳ ಉಳಿಸಿಕೊಳ್ಳಲು ಕೂಡ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರೇ ಆಲೋಚನೆ ಮಾಡಬೇಕಾಗಿದೆ ಮಾನವನ ಸ್ಥಿತಿ ಎಲ್ಲಿಗೆ ಹೋಗಿದೆ ಎಂದು ಬೇಸರವ್ಯಕ್ತಪಡಿಸಿದರು. ೧೯೪೮ನೇ ಸಾಲಿನಲ್ಲಿ ಇದೊಂದು ಮಾನವ ಹಕ್ಕಗಳ ಆಯೋಗ ಸ್ಥಾಪನೆ ಆಗಿದ ನಂತರ ಹಲವಾರು ಸಂಘ ಸಂಸ್ಥೆಗಳು ಮಾನವ ಹಕ್ಕುಗಳ ವಿಚಾರವಾಗಿ ಮಾನವನಿಗಿರುವ ಹಕ್ಕುಗಳಿಗಾಗಿ ಹುಟ್ಟಿಕೊಂಡಿದೆ. ಹಾಸನದಲ್ಲೂ ಕೂಡ ಮಾನವ ಹಕ್ಕುಗಳ ಜನಸೇವಾ ಸಮಿತಿ ಜನ್ಮತಾಳಿದೆ. ಏನಾದನರೂ ಸಮಸ್ಯೆ ಇದ್ದರೇ ನಮ್ಮ ಸಂಸ್ಥೆಗಳ ಪದಾಧಿಕಾರಿಗಳಿಗೆ ತಿಳಿಸಿದರೇ ಸ್ಪಂದಿಸುವ ಕೆಲಸ ಮಾಡಲಾಗುವುದು ಎಂದರು. ಜಾಗತೀಕ ಕಾಲದಲ್ಲಿ ಬಹಳಷ್ಟು ದೇಶಗಳಲ್ಲಿ ಮಾನವ ಹಕ್ಕುಗಳಿಗೆ ಚ್ಯುತಿ ಬರುವುದನ್ನು ನೋಡುತ್ತಿದ್ದೇವೆ. ಧರ್ಮದರ್ಮಗಳ ಬಡಿದಾಟ, ವೈಮನಸ್ಸುಗಳ ಸ್ಥಿತಿ ಉದ್ಭವ ಆಗುತ್ತಿದ್ದು, ಇದು ನಿಲ್ಲಬೇಕಾಗಿದೆ. ಮಾನವ ಅಂದರೇ ಲಿಂಗತಾರತಮ್ಯ ಹೋರಾಟ ಬರಬಾರದು. ಇಡೀ ಮನುಕುಲದಲ್ಲಿ ಇರುವುದು ಮಾನವರೆಲ್ಲರು ಒಂದೆ. ಅದೆ ಮಾನವ ಧರ್ಮ ಎಂದು ಕಿವಿಮಾತು ಹೇಳಿದರು. ಯಾರು ಮಾನವ ಧರ್ಮ ಪಾಲನೆ ಮಾಡುತ್ತಾರೆ, ಯಾರು ಮಾನವೀಯ ಗುಣಗಳನ್ನು ಮತ್ತು ಮೌಲ್ಯಗಳನ್ನು ಬೆಳೆಸಿಕೊಂಡಿರುತ್ತಾರೆ ಅವರೆಲ್ಲರೂ ಕೂಡ ನಿಜ ಮಾನವರು ಎಂದು ಸಲಹೆ ನೀಡಿದರು. ಮಾನವ ಮಾನವಾಗಿರು ಮನುಕುಲ ತೊರೆಯದಿರು. ತೊರೆದರೇ ಮಾನವರಲ್ಲ. ದಾನವಗುಣ ಬೆಳೆಸಿ ಮಾನವ ಗುಣ ಅಳವಡಿಸಿಕೊಳ್ಳಿ ಎಂದು ಹೇಳಿದರು.

ರಾಜ್ಯ ರೈತ ಹಾಗೂ ಹಸಿರು ಜನಜಾಗೃತಿ ಸಂಘಟನೆ ರಾಜ್ಯಾಧ್ಯಕ್ಷೆ ಸಿ.ಎಂ. ನಾಗರತ್ನ ಮಾತನಾಡಿ, ಮಾನವ ಹಕ್ಕುಗಳನ್ನು ನಾವು ಎಂದು ಸಹಿಸುವುದಿಲ್ಲ. ಇವತ್ತು ನಡೆಯುತ್ತಿರುವುದೇ ಭ್ರಷ್ಠಾಚಾರ. ಇನ್ನು ಹೆಣ್ಣು ಮಕ್ಕಳಿಗೆ ಸೇಫ್ಟಿಯೇ ಇಲ್ಲ. ಯಾವಾಗ ನಡುರಾತ್ರಿಯಲ್ಲಿ ಹೆಣ್ಣು ಮಗಳು ಓಡಾಡುತ್ತಾಳೋ ಅವತ್ತು ದೇಶಕ್ಕೆ ಸ್ವಾತಂತ್ರ್ಯ. ನಮ್ಮನ್ನೆಲ್ಲಾ ಕಾಯುತ್ತಿರುವುದು ಆರಕ್ಷಕರು. ಕೆಲ ದಿನಗಳ ಹಿಂದೆ ಹೆಣ್ಣು ಮಗಳು ಪೊಲೀಸ್ ಠಾಣೆಗೆ ದೂರು ಕೊಡಲು ಬಂದರೇ ಅತ್ಯಚಾರದ ಪ್ರಕರಣ ನಡೆದಿದೆ. ರಕ್ಷಣೆ ಕೊಡುವವರೇ ಭಕ್ಷಕರಾದರೇ ಹೇಗೆ ನಮ್ಮ ದೇಶ ಉದ್ದಾರವಾಗುತ್ತದೆ ಎಂದು ತುಮಕೂರಿನಲ್ಲಿ ಪೊಲೀಸ್ ಅಧಿಕಾರಿಯಿಂದ ನಡೆದ ದೌರ್ಜನ್ಯದ ಬಗ್ಗೆ ಆಕ್ರೋಶವ್ಯಕ್ತಪಡಿಸಿದರು. ಚಿಕ್ಕ ಮಕ್ಕಳ ಮೇಲೆ ಉಪಾಧ್ಯಯರೇ ಅತ್ಯಾಚಾರ ಮಾಡುತ್ತಾರೆ. ಅಕ್ಕಪಕ್ಕದ ಮನೆಯವರು ಚಿಕ್ಕ ಮಕ್ಕಳ ಮೇಲೆ ಅತ್ಯಚಾರ ಎಸಗುತ್ತಿರುವುದು ನಮ್ಮ ದೇಶದ ದೊಡ್ಡ ದುರಂತ ಎಂದು ಬೇಸರವ್ಯಕ್ತಪಡಿಸಿದರು. ಅತ್ಯಚಾರ ಮಾಡಿದವನ ಕಡೆಗೂ ರಾಜಕೀಯ ಸಹಕಾರ ಕೊಡುತ್ತದೆ, ಸತ್ತವನಿಗೂ ರಾಜಕೀಯ ಸಹಕಾರ ಕೊಡುತ್ತದೆ. ಎಲ್ಲಿ ಅತ್ಯಚಾರಿಯನ್ನು ಕಂಡಲ್ಲಿ ಗುಂಡು ಎಂದು ಕಾನೂನು ತರುವವರಿಗೂ ಈ ಒಂದು ಭ್ರಷ್ಠಾಚಾರ ಮತ್ತು ಹೆಣ್ಣು ಮಕ್ಕಳ ಮೇಲಿನ ಅತ್ಯಚಾರ ನಿಲ್ಲುವುದಿಲ್ಲ ಎಂದರು. ದೇಶ ಕಾಯುವ ಸೈನಿಕ ಎಷ್ಟು ಮುಖ್ಯವೋ ಎಲ್ಲಾರ ಹೊಟ್ಟೆ ತುಂಬಿಸುವ ರೈತನು ಕೂಡ ಅಷ್ಟೆ ಮುಖ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಮಾನವ ಹಕ್ಕುಗಳ ಜನಸೇವಾ ಸಮಿತಿ ಗೌರವಾಧ್ಯಕ್ಷ ಎ.ಎಸ್. ಸುರೇಶ್, ಜಿಲ್ಲಾಧ್ಯಕ್ಷ ರಘುಗೌಡ, ವಕೀಲರಾದ ಯೋಗೀಶ್, ಸಿ.ಎಸ್. ರವಿಕಿರಣ್, ಜಿಲ್ಲಾಧ್ಯಕ್ಷೆ ಹೆಚ್.ಎಸ್. ಪ್ರತಿಮಾ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page