ಹಾಸನ : “ಅಸೂಯೆಯಿಂದ ಈ ರೀತಿ ನಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ದೇವೇಗೌಡರ ಕುಟುಂಬದಿಂದ ಬಂದವರು ಅದರ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಅವರು ವೈದ್ಯರಾಗಿದ್ದವರು, ಇಷ್ಟು ಸಣ್ಣತನದ ರಾಜಕಾರಣ ಮಾಡುತ್ತಿದ್ದಾರೆ. ಈಗಾಗಲೇ ಜನ ಬುದ್ದಿ ಕಲಿಸಿದ್ದು, ಮುಂದಿನ ದಿನಗಳಲ್ಲಿ ಇನ್ನು ಅತಿ ದೊಡ್ಡದಾಗಿ ಬುದ್ದಿ ಕಲಿಸುತ್ತಾರೆ,” ಎಂದು ಎಂ.ಎಲ್.ಸಿ. ಸೂರಜ್ ರೇವಣ್ಣ ಹೇಳಿಕೆಗೆ ಸಂಸದ ಶ್ರೇಯಸ್ ಎಂ. ಪಟೇಲ್ ತಿರುಗೇಟು ನೀಡಿದರು.
ನಗರದ ಪತ್ರಕರ್ತರ ಭವನದ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, “ಸೂರಜ್ ರೇವಣ್ಣ ಅವರದ್ದು ಬಾಲೀಷವಾದ ಹೇಳಿಕೆ ನೀಡಿರುವುದು ಅವರ ವ್ಯಕ್ತಿತ್ವ, ನಡತೆಯನ್ನು ತೋರಿಸುತ್ತದೆ. ಎರಡು ಮೂರು ಬಾರಿ ಸಚಿವರು, ಐದಾರು ಬಾರಿ ಶಾಸಕರಾಗಿರುವವರ ತರಹ ಮಾತನಾಡಿದ್ದಾರೆ. ಜೊತೆಗೆ ವಾಗ್ಮಿ, ದೊಡ್ಡ ಮೇದಾವಿಗಳ ತರ ಮಾತನಾಡಿದ್ದಾರೆ. ಅವರಿನ್ನು ಒಂದು ಬಾರಿ ಎಂಎಲ್‌ಸಿ ಆಗಿದ್ದಾರೆ. ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿ ತಳಮಟ್ಟದಿಂದ ಬೆಳೆದಿದ್ದೇನೆ. ಏಕಾಏಕಿ ಅವರ ಕುಟುಂಬದಿಂದ ಅಚಾನಕ್ಕಾಗಿ ಎಂಎಲ್‌ಸಿ ಆಗಿರುವವರು ಅವರು. ಉದ್ಭವಮೂರ್ತಿ ತರಹ ಎದ್ದು ಬಂದವರು. ಎಂಎಲ್‌ಸಿ ಆದಮೇಲೆ ಏಳು ಕ್ಷೇತ್ರದಲ್ಲಿ ಒಂದು ಗ್ರಾ.ಪಂ.ಗೆ ಹೋಗಿ ಸಭೆ ಮಾಡಿದ್ದಾರಾ! ಎಂದು ವ್ಯಂಗ್ಯವಾಡಿದರು. ಅವರ ಹೇಳಿಕೆ ನನಗೆ ವೈಯುಕ್ತಿಕವಾಗಿ ಬೇಜಾರಾಗಿದೆ. ರಾಜಕೀಯವಾಗಿ ನಾವು ಅವರು ಎದುರಾಳಿ. ಯಾವುದೇ ವಿಚಾರದಲ್ಲಿ ನಾನು ಬಗ್ಗುವವನಲ್ಲ. ನಾನು ನಮ್ಮ ತಾತನ ಹೆಸರು ಹೇಳಿಕೊಂಡು ಬಂದವನಲ್ಲ. ಹೋರಾಟ ಮನೋಭಾವ, ತಳಮಟ್ಟದಿಂದ ಬಂದಿರುವವನು ನಾನು. ಅವರ ಹೇಳಿಕೆ ಬೇಜಾರು ತರಿಸಿದೆ. ಬದುಕಿದ್ದವರ ಬಗ್ಗೆ ಮಾತನಾಡಲಿ,” ಎಂದು ಹೇಳಿದ್ದಾರೆ.
“ನಾವು ದೇವೇಗೌಡರ ಬಗ್ಗೆ ಯಾವತ್ತಾದರೂ ಮಾತನಾಡಿದ್ದೇವಾ! ಇವತ್ತು ಅವರ ಮೇಲೆ ಗೌರವವಿದೆ. ದೇವೇಗೌಡರು, ಪುಟ್ಟಸ್ವಾಮಿಗೌಡ, ಶ್ರೀಕಂಠಯ್ಯ ಅವರ ಬಗ್ಗೆ ಮಾತನಾಡಲು ನಮಗೆ ಯಾರಿಗೂ ಅರ್ಹತೆ ಇಲ್ಲ, ಯೋಗ್ಯತೆ ಇಲ್ಲ. ಯಾವುದೇ ಪುರಾವೆ ಇಲ್ಲದೆ ನಮ್ಮ ತಾತನ ಹೆಸರು ತೆಗೆದುಕೊಂಡಿದ್ದಾರೆ. ಆ ಘಟನೆಯಾದಾಗ ಸೂರಜ್ ಅವರ ವಯಸ್ಸು ಎಷ್ಟಿತ್ತು, ಮಾಹಿತಿ ಇತ್ತಾ! ಅವರ ತಂದೆ ರೇವಣ್ಣ ಅವರೇ ಏಕೆ ಇಷ್ಟು ದಿನ ಮಾತನಾಡಲಿಲ್ಲ. ಅವರ ಕುಟುಂಬದವರು ಯಾರು ಮಾತನಾಡಿಲ್ಲ. ಮೈಕ್ ಸಿಕ್ಕಿದೆ ಜನ ಶಿಳ್ಳೆ ಹೊಡಿತಾರೆ ಅಂಥ ಮಾತನಾಡಿದ್ದಾರಾ,” ಎಂದು ಎಂ.ಎಲ್.ಸಿ. ಸೂರಜ್ ರೇವಣ್ಣ ಹೇಳಿಕೆಗೆ ತಿರುಗೇಟು ನೀಡಿದರು.
“ಪೆನ್‌ಡ್ರೈವ್ ವಿಚಾರವಾಗಿ ನಾನು ಮಾತನಾಡುವುದಿಲ್ಲ. ಎಷ್ಟೋ ಹೆಣ್ಣುಮಕ್ಕಳ ಜೀವನ ಹಾಳಾಗಿದೆ, ಬಲಿಪಶುಯಾಗಿದ್ದಾರೆ. ಅದಕ್ಕೆ ಕಾರಣ ಯಾರು? ಪೆನ್‌ಡ್ರೈವ್ ಒಳಗೆ ಇದ್ದ ವಿಡಿಯೋ ಮಾಡಿದ್ದು ಯಾರು? ಮೊದಲು ಅದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ಇವರ ತಾತನ ಹೆಸರಿನಿಂದ ಗೆದ್ದಿದ್ದಾರೆ. ಎಂಎಲ್‌ಸಿ ಅವರ ಸಾಧನೆ ಪಟ್ಟಿ ಮೊದಲು ಬಿಡುಗಡೆ ಮಾಡಲಿ. ದೇವೇಗೌಡರು, ರೇವಣ್ಣ ಅವರದ್ದನ್ನು ಬಿಡಿ. ಎಂಎಲ್‌ಸಿ ಸಾಧನೆ ಏನು ಎಂಬುದರ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ,” ಎಂದು ಸವಾಲು ಎಸೆದರು.
“ಹತಾಶೆ, ಮಾನಸಿಕ ಸ್ಥಿಮಿತತೆ ಕಳೆದುಕೊಂಡಾಗ ಈ ರೀತಿ ಮಾತು ಬರುತ್ತದೆ. ಜನ ಎಲ್ಲವನ್ನು ನೋಡುತ್ತಿದ್ದಾರೆ. ಇಡೀ ಜಿಲ್ಲೆಗೆ ಬೆಂಕಿ ಹಚ್ಚಿಸುತ್ತಾರೆ, ಎಲ್ಲೇ ಹೋದರೂ ಕಿತಾಪತಿ ಮಾಡಿ ಬರ್ತಾರೆ.”
“ಯಾವ ಊರಿಗೆ ಹೋದರು ಕಿತಾಪತಿ ಮಾಡಿ ಬರ್ತಾರೆ, ಅದೇ ಅವರ ಕೆಲಸ. ಅವರ ಕಾರ್ಯಕರ್ತರ ಮೇಲೆ ಕೇಸ್ ಹಾಕ್ಸಿದ್ರೆ ದಾಖಲೆ ಕೊಡಲಿ. ನಮ್ಮ ಜಿಲ್ಲೆಯ ಅಧಿಕಾರಿಗಳು ಪ್ರಾಮಾಣಿಕವಾಗಿ, ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರ ಕುಟುಂಬದವರ ಮೇಲೆಲ್ಲಾ ಕೇಸ್ ಆಗಿದೆ. ಇನ್ನೂ ಅವರ ಕಾರ್ಯಕರ್ತರ ಮೇಲೆ ಕೇಸ್ ಏಕೆ ಹಾಕ್ತಾರೆ! ಅಸೂಯೆಯಿಂದ ಈ ರೀತಿ ಮಾತನಾಡಿದ್ದಾರೆ. ದೇವೇಗೌಡರ ಕುಟುಂಬದಿಂದ ಬಂದವರು ಅದರ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಅವರು ವೈದ್ಯರಾಗಿದ್ದವರು, ಇಷ್ಟು ಸಣ್ಣತನದ ರಾಜಕಾರಣ ಮಾಡುತ್ತಿದ್ದಾರೆ. ಈಗಾಗಲೇ ಜನ ಬುದ್ದಿ ಕಲಿಸಿದ್ದು, ಮುಂದಿನ ದಿನಗಳಲ್ಲಿ ಅತಿ ದೊಡ್ಡದಾಗಿ ಬುದ್ದಿ ಕಲಿಸುತ್ತಾರೆ ಎಂದು ಕಿಡಿಕಾರಿದರು. ೨೦೨೮ರ ಚುನಾವಣೆಯಲ್ಲಿ ಯಾರ? ಯಾರು ಏನಾಗುತ್ತಾರೆ ಗೊತಾಗುತ್ತದೆ. ಜನ ಇವರ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಎಚ್ಚರಿಸಿದರು. ಇನ್ನು ಮುಂದಾದರೂ ಅಭಿವೃದ್ಧಿ ಕೆಲಸಕ್ಕೆ ಬೆಂಬಲ ಕೊಡಲಿ, ಇಲ್ಲಾ ಸುಮ್ಮನೆ ಇರಲಿ,” ಎಂದು ಸಲಹೆ ನೀಡಿದರು.
“ಸಾರಿಗೆ ಬಸ್ ದರ ಏರಿಕೆ ಕುರಿತು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಇಂಧನ ದರ ಹೆಚ್ಚಾಗಿದ್ದು, ೭ನೇ ವೇತನ ಆಯೋಗ ಜಾರಿ ಆಗುತ್ತಿದೆ. ಸಾರಿಗೆ ಇಲಾಖೆ ನೌಕರರು ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ಮಾಡುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಕೊಟ್ಟಿದ್ದೇವೆ. ಬೆಲೆ ಏರಿಕೆ ಸರ್ವೆ ಸಾಮಾನ್ಯ, ಎಲ್ಲಾ ಆಡಳಿತದಲ್ಲೂ ಬಸ್ ದರ ಏರಿಕೆ ಮಾಡಲಾಗಿದೆ ಎಂದರು. ಆಗುತ್ತಿದೆ. ಹಾಲು, ಬಸ್ ದರ ಏರಿಕೆ ನಾವಷ್ಟೇ ಮಾಡಿಲ್ಲ. ಎಲ್ಲ ಸರ್ಕಾರಗಳು ಮಾಡಿವೆ. ರಾಜ್ಯದ ಜನ ಸಹಕರಿಸುತ್ತಾರೆ ಎಂಬ ವಿಶ್ವಾಸವಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರು ಶಾಶ್ವತ ಗ್ಯಾರಂಟಿ ನೀಡಿದ್ದು, ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಈ ಗ್ಯಾರಂಟಿ ಕೂಡ ಮುಂದುವರೆಯಲಿದೆ,” ಎಂದು ಭವಿಷ್ಯ ನುಡಿದರು.