ಅಜ್ಮೀರ್ ದರ್ಗಾ ಒಂದು ಶಿವ ದೇವಾಲಯ ಎನ್ನುವ ವಿವಾದದ ನಡುವೆಯೇ, ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷದಂತೆ ಈ ವರ್ಷವೂ ಗುರುವಾರದಂದು ಅಜ್ಮೀರ್ ಷರೀಫ್ ದರ್ಗಾಕ್ಕೆ ‘ಚಾದರ್’ ಹರಕೆ ಅರ್ಪಿಸಿದ್ದಾರೆ.
ಚಾದರ್’ ಅನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜಮಾಲ್ ಸಿದ್ದಿಕಿ ಅವರಿಗೆ ಸಂಜೆ 6 ಗಂಟೆಗೆ ನೀಡಲಾಗಿದ್ದು, ನಂತರ ಇವರು ಇದನ್ನು ಖ್ವಾಜಾ ಮೊಯಿನುದ್ದೀನ್ ಚಿಶ್ತಿಯ ಉರುಸಿನ ಸಮಯದಲ್ಲಿ ದರ್ಗಾಕ್ಕೆ ಅರ್ಪಿಸುತ್ತಾರೆ.
ಪ್ರಧಾನಿಯಾದ ನಂತರ ನರೇಂದ್ರ ಮೋದಿ ಅವರು ಅಜ್ಮೀರ್ ಷರೀಫ್ ದರ್ಗಾಕ್ಕೆ 10 ಬಾರಿ ‘ಚಾದರ್’ ಅರ್ಪಿಸಿದ್ದಾರೆ. ಇದು ಹನ್ನೊಂದನೇ ವರ್ಷದ ಹರಕೆ ಸಮರ್ಪಣೆಯಾಗಿದೆ.
ಕಳೆದ ವರ್ಷ, 812 ನೇ ಉರ್ಸ್ ಸಮಯದಲ್ಲಿ, ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುವ ನಿಯೋಗದೊಂದಿಗೆ ಆಗಿನ ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಮತ್ತು ಜಮಾಲ್ ಸಿದ್ದಿಕಿ ಮೋದಿ ಪರವಾಗಿ ‘ಚಾದರ್’ ಅರ್ಪಿಸಿದ್ದರು.
ರಾಜಸ್ಥಾನದ ಅಜ್ಮೀರ್ ಷರೀಫ್ ದರ್ಗಾವು ನಿಜವಾಗಿಯೂ ಶಿವನ ದೇವಾಲಯವಾಗಿದೆ ಎಂದು ಹೇಳುವ ಮೂಲಕ ರಾಜಸ್ಥಾನದ ನ್ಯಾಯಾಲಯವು ಹಿಂದೂ ಸೇನೆಯ ಮನವಿಯನ್ನು ಸ್ವೀಕರಿಸಿದ ಒಂದು ತಿಂಗಳ ನಂತರ ಇದು ನಡೆದಿದೆ.
ಕಳೆದ ವರ್ಷ ಅಜ್ಮೀರ್‌ನ ಸ್ಥಳೀಯ ನ್ಯಾಯಾಲಯವು ನವೆಂಬರ್ 27 ರಂದು ಮೊಯಿನುದ್ದೀನ್ ಚಿಶ್ತಿ ದರ್ಗಾದಲ್ಲಿ ಶಿವ ದೇವಾಲಯವಿದೆ ಎಂದು ಫಿರ್ಯಾದಿಯ ವಕೀಲ ಆರೋಪಿಸಿ, ಸಿವಿಲ್ ಮೊಕದ್ದಮೆಯಲ್ಲಿ ಮೂರು ಕಕ್ಷಿದಾರರಿಗೆ ನೋಟಿಸ್ ನೀಡುವಂತೆ ಆದೇಶಿಸಿದಾಗ ಅಜ್ಮೀರ್ ಷರೀಫ್ ದರ್ಗಾ ವಿವಾದಕ್ಕೆ ಕಾರಣವಾಯಿತು.
ಡಿಸೆಂಬರ್ 20 ರಂದು ಅಜ್ಮೀರ್ ಷರೀಫ್ ದರ್ಗಾ ಸಮಿತಿಯು ಅಜ್ಮೀರ್‌ನ ಮುನ್ಸಿಫ್ ನ್ಯಾಯಾಲಯದಲ್ಲಿ 5 ಪುಟಗಳ ಅರ್ಜಿಯನ್ನು ಸಲ್ಲಿಸಿ , ಅಜ್ಮೀರ್ ದರ್ಗಾದ ಕೆಳಗೆ ದೇವಾಲಯವಿದೆ ಎಂದು ಆರೋಪಿಸಿರುವ ಅರ್ಜಿಯನ್ನು ವಜಾಗೊಳಿಸುವಂತೆ ಒತ್ತಾಯಿಸಿತು. ಮುಂದಿನ ವಿಚಾರಣೆಯನ್ನು ಜನವರಿ 24ಕ್ಕೆ ನಿಗದಿಪಡಿಸಲಾಗಿದೆ.
ಅಜ್ಮೀರ್ ಶರೀಫ್ ದರ್ಗಾ, ದಕ್ಷಿಣ ಏಷ್ಯಾದ ಪ್ರಮುಖ ಸೂಫಿ ಕೇಂದ್ರ, ಖ್ವಾಜಾ ಮೊಯಿನುದ್ದೀನ್ ಹಸನ್ ಚಿಶ್ತಿ ಅವರ ಮರಣ ವಾರ್ಷಿಕೋತ್ಸವದ ಉರುಸಿನ ಸಮಯದಲ್ಲಿ ಲಕ್ಷಾಂತರ ಭಕ್ತರು ಬರುತ್ತಾರೆ. ಉರುಸ್ ಸಮಯದಲ್ಲಿ, ಚಾದರವನ್ನು ಅರ್ಪಿಸುವುದನ್ನು ಪ್ರಮುಖ ಆರಾಧನೆ ಎಂದು ಪರಿಗಣಿಸಲಾಗುತ್ತದೆ.
ಹಜರತ್ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ 813 ನೇ ಉರ್ಸ್ ಡಿಸೆಂಬರ್ 28, 2024 ರಂದು ಪ್ರಾರಂಭವಾಗಿದೆ.