2024ರ ಮಾರ್ಚ್‌ನಿಂದ ಜೂನ್ ಅವಧಿಯಲ್ಲಿ ಚಿನ್ನದ ಸಾಲದ ಪ್ರಮಾಣ ಎನ್‌ಪಿಎ ಶೇ.30ರಷ್ಟು ಏರಿಕೆ ಆಗಿರುವ ಬಗ್ಗೆ ಆರ್ಬಿಐ ಬಿಡುಗಡೆ ಮಾಡಿರುವ ವರದಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಾರೂಢ ಬಿಜೆಪಿ ಮೇಲೆ ತೀವ್ರ ವಾಗ್ದಾಳಿ ನಡೆಸಿದೆ.
ಬಿಜೆಪಿ ಸರ್ಕಾರ ಮಹಿಳೆಯರ ಮಾಂಗಲ್ಯ ಸರಕ್ಕೂ ಕೈ ಹಾಕಿ, ಭಾರತವನ್ನು ಬರ್ಬಾದ್ ಮಾಡಲು ಹೊರಟಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ವರದಿಗಾರರೊಂದಿಗೆ ಮಾತನಾಡಿ, ‘ಮೋದಿ ಸರ್ಕಾರದ ನೀತಿಗಳಿಂದಾಗಿ ಕುಟುಂಬಗಳು ಸಂಕದಷ್ಟದಲ್ಲಿದೆ. ಭಾರತೀಯ ಕುಟುಂಬಗಳು 3 ಲಕ್ಷ ಕೋಟಿ ರು.ನಷ್ಟು ಚಿನ್ನದ ಸಾಲ ಪಡೆದುಕೊಂಡಿವೆ.
ಆದರೆ ಆರ್ಥಿಕ ಸ್ಥಿತಿಗತಿಯಿಂದಾಗಿ ಮರುಪಾವತಿ ಸಾಧ್ಯವಾಗುತ್ತಿಲ್ಲ. ಇಂಥ ವೇಳೆ ಬಹುತೇಕ ಪ್ರಕರಣಗಳಲ್ಲಿ ಮಹಿಳೆಯರು ತಮ್ಮ ಮಂಗಳಸೂತ್ರವನ್ನೇ ಕಳೆದುಕೊಳ್ಳುತ್ತಾರೆ. ಇದಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ’ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಸರ್ಕಾರ ತನ್ನ ನೀತಿಗಳನ್ನು ಬದಲಿಸಲು ಹೋದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಮಾಣ ಹೆಚ್ಚಳ ಆಗಲಿದೆ ಎಂದು ಜೈರಾಮ್ ರಮೇಶ್ ಆತಂಕ ವ್ಯಕ್ತಪಡಿಸಿದರು. ಇವೆಲ್ಲಕ್ಕೂ ನೇರವಾಗಿ ಮೋದಿ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.