Home ಅಂಕಣ ವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ನಗರೀಕರಣಕ್ಕೆ ಜೈ ಅನ್ನೋಣ

ವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ನಗರೀಕರಣಕ್ಕೆ ಜೈ ಅನ್ನೋಣ

0

“..ಹಳ್ಳಿ ಅಂದರೆ ಕಡಿಮೆ ಜನಸಾಂದ್ರತೆಯೆ ವಿನಃ ಹೊಲ ಗದ್ದೆಗಳಲ್ಲ ನಗರವೆಂದರೆ ಹೆಚ್ಚು ಜನಸಾಂದ್ರತೆಯೆ ವಿನ: ಕಾರ್ಖಾನೆ ದೂಳು ಅಲ್ಲ..” ‘ಅಬಿ ಒಕ್ಕಲಿಗ’ ನಾವು Dravida ಕನ್ನಡಿಗರು ಚಳುವಳಿ ಮುಂದಾಳು ಅವರ ಬರಹದಲ್ಲಿ

ಒಂದು ಹುಡುಗಿ ಅಂಗಡಿಯಲ್ಲಿ ತನ್ನಿಷ್ಠದ ಚಾಕ್ಲೇಟ್ ಕೊಳ್ಳಬೇಕು, ತನಗೆ ತಿನ್ನಬೇಕು ಅನಿಸಿದ ಸಮಯದಲ್ಲಿ ಅಂತಿಟ್ಟುಕೊಳ್ಳಿ. ಅದೇ ರೀತಿ ಒಂದು ಹುಡುಗ ಕೂಡ. ನಗರದಲ್ಲಿ ಮತ್ತು ಹಳ್ಳಿಯಲ್ಲಿ ಬೇರೆ ಬೇರೆ ಕಲ್ಪಿಸಿಕೊಳ್ಳಿ. ಹುಡುಗಿ ಹಳ್ಳಿಯಲ್ಲಿ ಅಂಗಡಿಗಳಿಗೆ ಹೋಗಲೇ ಸಾಧ್ಯವಿಲ್ಲ!ಅಪ್ಪಿ ತಪ್ಪಿ ಹೋದರು ಎದುರಿಸಬೇಕಾದ ಪ್ರಶ್ನೆಗಳು ನಿಂದನೆಗಳು ಇಲ್ಲಿ ಬರೆಯಲು ಕೂಡ ಯೋಗ್ಯವಾದವಲ್ಲ. ಅದೇ ನಗರ ಪ್ರದೇಶದಲ್ಲಾದರೆ  ಚಾಕ್ಲೇಟ್ ಏನು ಸಿಗರೇಟ್ ಕೂಡ ಕೊಳ್ಳಬಹುದು ಹುಡುಗಿಯರು ಹುಡುಗರ ಮೀರಿಸಿ ಅನ್ನಬೇಕು ಅಂತ ಅನಿಸುತ್ತಿದೆಯೆ ಮೇಲಿನ ಸಾಲುಗಳ ಓದಿ?

ಈ ಮನಸ್ಥಿತಿಯು ವ್ಯಕ್ತಿ ಸ್ವಾತಂತ್ರ್ಯದಲ್ಲಿ ಪಕ್ಷಪಾತಿ ಧೋರಣೆ ಉಳ್ಳದಾಗಿದೆ. ಏಕೆಂದರೆ ಗಂಡಿಗೆ, ಹುಡುಗರಿಗೆ ಸುಲಭವಾಗಿ ಸರಳವಾಗಿ ಸಿಗುವ ಸಿಗರೇಟ್ ನ ಟೀಕಿಸದ ನಾವು ಹೆಣ್ಣಿಗೆ ಹುಡುಗಿಯರಿಗೆ ಪರದಾಟದಿಂದ ಸಿಗುವ ಚಾಕ್ಲೆಟ್ ನ ಸಿಗರೇಟ್ ಗೆ ಹೋಲಿಸಿ ಗಂಡಿನ ಪರ ಪಕ್ಷಪಾತಿ ಮಾಡುತ್ತಿದ್ದೇವೆ.

ಎಲ್ಲಾ ಜಾತಿಯ ಬಡವರು ಎಲ್ಲ ಜಾತಿಯ ಸಿರಿವಂತರ ಬಳಿ ಅಡಿಯಾಳಂತೆ ನಡೆದುಕೊಳ್ಳಬೇಕಾದ ವಾತಾವರಣ ಹಳ್ಳಿಗಳಲ್ಲಿ ಇದೆ ಎಂದು ಹೇಳಬಹುದು. ಇದರಲ್ಲೂ ಒಂದು ತಕರಾರು ನೀವುಗಳು ತೆಗೆಯಬಹುದು ಕೆಳ ಜಾತಿಗಳ ಸಿರಿವಂತರನ್ನೂ ಕೂಡ ಮೇಲ್ಜಾತಿಯ ಬಡವರು ಏಕವಚನದಲ್ಲಿ ಮಾತನಾಡಿಸುತ್ತಾರೆ ಗದರಿಸುತ್ತಾರೆ ಗೌರವಿಸುವುದಿಲ್ಲ ಎಂದು. ಹೌದು ಅದು ಕೂಡ ನಿಜವೇ. ಯಾವುದೇ ಅನುಮಾನ ಬೇಡ ಕೆಲವೊಂದು ಹಳ್ಳಿಯಲ್ಲಿ ಸಂಖ್ಯೆ ಜಾಸ್ತಿ ಇರುವ ಜಾತಿಯವರು ಇತರರ ಮೇಲೆ ದಬ್ಬಾಳಿಕೆ ಮಾಡುತ್ತಾರೆ ಜಾತಿ ಅಂತಸ್ತು ಲೆಕ್ಕ ಬರೋದಿಲ್ಲ ಇದು ಕೂಡ ದಿಟನೆ ಆಗಿದೆ.

ಹಳ್ಳಿಗಳ ಬಗ್ಗೆ ರೋಮ್ಯಾಂಟಿಕ್ ಆಗಿ ಮತ್ತು ನಗರಗಳ ಬಗ್ಗೆ ಕೆಟ್ಟದಾಗಿ ಮಾತನಾಡುವವರು ತಪ್ಪದೆ ಉಲ್ಲೇಖಿಸುವುದು ಹಳ್ಳಿಗಳ ವಿಚಾರದಲ್ಲಿ ಹೊಲ ಗದ್ದೆಗಳನ್ನು ಮತ್ತು  ಹೆಣ್ಣು ಮಕ್ಕಳು ಯುವಜನರ ಬಗ್ಗೆ ನಗರಗಳ ವಿಚಾರದಲ್ಲಿ. ಇದೇನಿದು ಹಳ್ಳಿಯನ್ನು ಅಳೆಯುವ ಮಾಪನದಲ್ಲಿ ಹೆಣ್ಣು ಮಕ್ಕಳು ಯುವ ಜನರು ಏಕೆ ಬರುವುದಿಲ್ಲ? ಅವರ ಜಾಗವನ್ನು ಹೊಲಗದ್ದೆಗಳು ಏಕೆ ಆವರಿಸಿಕೊಂಡಿದೆ? ಇದನ್ನು ಆಲೋಚಿಸಿ ಅರ್ಥ ಮಾಡಿಕೊಳ್ಳುತ್ತಾ ಹೋದರೆ ತಿಳಿಯುವುದೇನೆಂದರೆ ಕೆಲವರಿಗೆ ಅಷ್ಟೇ ವ್ಯಕ್ತಿ ಸ್ವಾತಂತ್ರ್ಯ ಕೊಡುವುದು ಹಳ್ಳಿಗಳು, ಎಲ್ಲರೂ ವ್ಯಕ್ತಿ ಸ್ವಾತಂತ್ರ್ಯ ಪಡೆದುಕೊಳ್ಳಲು ಅವಕಾಶ ಇರುವುದು ನಗರಗಳು. ಆದುದ್ದರಿಂದ ಈ ಕೆಲವರು ಹಳ್ಳಿಗಳ ಬಗ್ಗೆ ರೋಮ್ಯಾಂಟಿಕ್ ಮಾತುಗಳನ್ನು ನಗರಗಳ ಬಗ್ಗೆ ಕೆಟ್ಟ ಮಾತುಗಳನ್ನು ತೇಲಿ ಬಿಡುತ್ತಾರೆ.

ದುರಂತವೇನೆಂದರೆ ಆ ಮಾತನ್ನು ಅನಿವಾರ್ಯ ಕಾರಣದಿಂದ ತಮ್ಮ ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಅರಿವಿಲ್ಲದೆ ಎಲ್ಲರೂ ಸಾರುತ್ತಾರೆ. ನಗರಗಳಲ್ಲಿ ಎಲ್ಲರೂ ಕೂಡ ವ್ಯಕ್ತಿ ಸ್ವಾತಂತ್ರ್ಯ ಪಡೆಯಲು ಸಾಧ್ಯವಿದೆಯೇ ಹೊರತು ಅದಾಗದೆ ದಕ್ಕುವುದಿಲ್ಲ. ಆದರೆ ಹಳ್ಳಿಯಲ್ಲಿ ಕೆಲವರಿಗೆ ಮಾತ್ರ ವ್ಯಕ್ತಿ ಸ್ವಾತಂತ್ರ್ಯ ಸ್ವಾಭಾವಿಕವಾಗಿಯೆ ದ್ದಕ್ಕಿರುತ್ತದೆ. ಹಳ್ಳಿ ಅಂದರೆ ಕಡಿಮೆ ಜನಸಾಂದ್ರತೆಯೆ ವಿನಃ ಹೊಲ ಗದ್ದೆಗಳಲ್ಲ ನಗರವೆಂದರೆ ಹೆಚ್ಚು ಜನಸಾಂದ್ರತೆಯೆ ವಿನ: ಕಾರ್ಖಾನೆ ದೂಳು ಅಲ್ಲ. ಹಳ್ಳಿಯಂದರೆ ಎಲ್ಲರೂ ಅಸಮಾನತೆಯಿಂದ ಇರಲೇಬೇಕಾದ ವ್ಯವಸ್ಥೆ , ನಗರ ಅಂದರೆ ಎಲ್ಲರೂ ಸಮಾನವಾಗಿ ಇರಲು ಅವಕಾಶ ಇರುವ ವ್ಯವಸ್ಥೆ.
ಅಸಲಿಗೆ ನಾಗರಿಕತೆ ಬಂದಿದ್ದೆ ನಗರಗಳಿಂದ ಪುರಾತನ ನಗರಗಳು ಅಂತ ಮಾತನಾಡುತ್ತೇವೆ ಓದುತ್ತೇವೆ ಪಾಠ ಕೇಳಿದ್ದೇವೆ ವಿನಃ ಪುರಾತನ ಹಳ್ಳಿಗಳು ಅಂತಲ್ಲ.

ಕಾರ್ಪೊರೇಟ್ ಕಂಪನಿಗಳು ಬೇಸಾಯದ ಜಮೀನು, ಕಸಿಯುತ್ತವೆ ಎಂಬ ಎಚ್ಚರಿಕೆಯನ್ನು ನಾವು ನಗರೀಕರಣಕ್ಕೆ ತಾಳೆ ಹಾಕದೆ ಹಳ್ಳಿಗಳಲ್ಲಿಯೆ ಉಳಿಯುತ್ತೇವೆ, ಉತ್ತುತ್ತೇವೆ ಬಿತ್ತುತ್ತೇವೆ ಅನ್ನದೆ ಮೊದಲಿಗೆ ಬೇಸಾಯದ ಜಮೀನು ಎಲ್ಲವೂ ತಲೆ ಮಾರಿನಿಂದ ತಲೆಮಾರಿಗೆ ತುಂಡು ಭೂಮಿ ಆಗುತ್ತಿದೆ ಮತ್ತು ಅಣ್ಣ ತಮ್ಮ ಅಕ್ಕ ತಂಗಿ ಜಮೀನು ಹಂಚಿಕೆಯಲ್ಲಿ ತಕರಾರುಗಳಾಗಿ ಸರ್ಕಾರದ ಯಾವುದೇ ಸವಲತ್ತುಗಳ ಪಡೆದುಕೊಳ್ಳಲು ಆಗದೆ ಬೇಸಾಯ ಮಾಡಲು ಕೈ ಸಾಲಗಳ ಮಾಡಿಕೊಂಡು ಮಬ್ಬುಗಳಂತೆ ಜೀವನ ಸವೆಸುವಂತಾಗಿದೆ ಬಹುತೇಕರದು ಎಂಬುದನ್ನು ಒಪ್ಪಿಕೊಂಡು,  ಇದನ್ನು ಬದಲಾಯಿಸಲು ನಗರೀಕರಣ ಕೂಡ ಪೂರಕ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಿದೆ.

ಇರುವ ತುಂಡು ಬೇಸಾಯದ ಜಮೀನನ್ನು ಅಕ್ಕಪಕ್ಕದವರ ಜೊತೆ ಸಹಕಾರ ಸಂಘ ರಚಿಸಿಕೊಂಡು ಕನಿಷ್ಠ ನೂರು ಎಕರೆಗೆ ವಿಸ್ತರಿಸಿಕೊಂಡು ಇದನ್ನು ತಂತ್ರಜ್ಞಾನ ಅಳವಡಿಸಿ ಬೇಸಾಯ ಮಾಡಲು 8-10 ಜನ ಸಾಕು. ಅವರಿಗೆ ಸಂಬಳ ನಿಗದಿ ಮಾಡಿ ಉಳಿದವರು ನಗರಗಳಲ್ಲಿ ವಾಸಿಸುತ್ತಾ ಅಲ್ಲಿ ಮತ್ತೊಂದು ಕೆಲಸ ಮಾಡಿದರೆ ಎರಡು ಕಡೆಯೂ ಆದಾಯ ಬರುತ್ತದೆ ಭೂಮಿಯು ಉಳಿಯುತ್ತದೆ. ಹಳ್ಳಿಗಳಲ್ಲಿ ವಾಸಿಸುವುದರಿಂದ ಸಹಕಾರ ಸಂಘ ರಚಿಸಲು ಹಬ್ಬ ಹುಣ್ಣಿಮೆ ಆಚರಣೆಗಳು ಜಾತಿಗಳನ್ನು ಗಟ್ಟಿಗೊಳಿಸುವುದರಿಂದ ಸಾಧ್ಯವಾಗುವುದಿಲ್ಲ. ದಿನ ಬೆಳಗಾದರೆ ಜಾತಿಯ ಸಮಾನತೆ ಉಳಿಸಿಕೊಳ್ಳಲು ಇಲ್ಲ ತಪ್ಪಿಸಿಕೊಳ್ಳಲು, ಪಿತೃ ಪ್ರಧಾನ ಕುಟುಂಬ ವ್ಯವಸ್ಥೆಯ ಮೌಲ್ಯಗಳ ಉಳಿಸಿಕೊಳ್ಳಲು ಹೆಣ್ಣನ್ನು ತುಳಿಯಲು ಎಲ್ಲಾ ಸಮಯ ವ್ಯಯ್ಯಿಸಬೇಕಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಹೆಣ್ಣು ಗುಡಿ ಗುಂಡಾರದ ಮೊರೆ ಹೋಗಿ ದುಡಿಮೆ ಎಲ್ಲವೂ ಹಬ್ಬ ಹುಣ್ಣಿಮೆ ನೆಪದಲ್ಲಿ ತಟ್ಟೆ ಕಾಸಿನವರಿಗೆ ತಲುಪುತ್ತದೆ. ಸಹಕಾರ ಸಂಘದಲ್ಲಿ ನಿಮ್ಮ ಜಮೀನಿನ ಪಾಲು ಎಷ್ಟು ಇರುತ್ತದೆ ಅಷ್ಟು ಪಾಲು ಬಂಡವಾಳ ಮತ್ತು ಆದಾಯ ನಿಮ್ಮ ಪಾಲಾಗುತ್ತದೆ. ಈ ರೀತಿಯ ಬೇಸಾಯಕ್ಕೆ ಸರ್ಕಾರದಿಂದ ಅತಿಹೆಚ್ಚಿನ ಬೆಂಬಲ ಸಿಗುತ್ತದೆ ಈ ರೀತಿಯ ಬೆಂಬಲ ಪಡೆದು ಪೊಗದಸ್ತಾಗಿ ಜೀವನ ನಡೆಸಲು ಈ ಕಾರ್ಪೊರೇಟ್ ಕಳ್ಳರು ಬೇಸಾಯಕ್ಕೆ ಬರುವುದೇ ವಿನಃ ಬೇರೆ ಇನ್ಯಾವ ಕಾರಣಕ್ಕು ಅಲ್ಲ.

.ಇಂಡಿಯಾ ಹಳ್ಳಿಗಳಲ್ಲಿ ಹೆಣ್ಣು ಮಕ್ಕಳು ಉಸಿರು ಕಟ್ಟಿದ ವಾತಾವರಣದಲ್ಲಿ ಬದುಕಬೇಕು , ಸಂಖ್ಯೆ ಕಡಿಮೆ ಇರುವ ಜಾತಿಯವರು ಅಸಮಾನತೆಗೆ ಒಳಗಾಗಿ ಬದುಕಬೇಕು,ಅಸ್ಪೃಶ್ಯತೆ ಹೇರಿಕೆಗೆ ಒಳಗಾಗಿರುವ ಜಾತಿಯವರು ತೀವ್ರವಾದ ಅಸ್ಪೃಶ್ಯತೆ ಅನುಭವಿಸುತ್ತಾ ಬದುಕಬೇಕು ಮತ್ತು ಎಲ್ಲಾ ಜಾತಿಯ ಬಡವರು ಸಿರಿವಂತರ ಅಡಿಯಾಳಾಗಿ ಬದುಕಬೇಕು. ಯಾವುದೇ ಹಳ್ಳಿಯಲ್ಲಿ ಇವರ ಪ್ರಮಾಣ 70 ರಿಂದ 80% ಇರುತ್ತದೆ. ಕೇವಲ 20 ರಿಂದ 30% ಸಂಖ್ಯೆ ಜಾಸ್ತಿಯಿರುವ ಜಾತಿಯ ಮತ್ತು ಸಿರಿವಂತ ಗಂಡಸರು ಮಾತ್ರ ಮೆಡೆಗಾರಿಕೆ ಮಾಡುತ್ತಾ ಬದುಕುತ್ತಾರೆ.
“ಇದರ ತೀವ್ರತೆ ನಗರೀಕರಣವಾದಷ್ಟು ತಗ್ಗುತ್ತದೆ”

ಅಂದಾಗೆ ನೀವು ಹಳ್ಳಿಯವರಾಗಿದ್ದರೆ, ನೀವು 70-80% ಗೆ ಸೇರಿದವರ ಅಥವಾ 20-30% ಗೆ ಸೇರಿದವರ? ನಾನಂತೂ ನಮ್ಮ ಹಳ್ಳಿಯಲ್ಲಿ 20-30% ಗೆ ಸೇರಿದವನು. ನೀವು ನಿಮ್ಮ ಹಳ್ಳಿಯಲ್ಲಿ?

You cannot copy content of this page

Exit mobile version