Home ರಾಜ್ಯ ಸಾಹಿತ್ಯ ಮತ್ತು ಭಾಷೆ ಜನರ ಬದುಕುಗಳನ್ನು ಬದಲಿಸಬೇಕು: ಪ್ರಸಾದ್ ರಕ್ಷಿದಿ

ಸಾಹಿತ್ಯ ಮತ್ತು ಭಾಷೆ ಜನರ ಬದುಕುಗಳನ್ನು ಬದಲಿಸಬೇಕು: ಪ್ರಸಾದ್ ರಕ್ಷಿದಿ

0

ಹಾಸನ: ಹಿಂದಿ ಬಾಷೆಗೆ ಸಂವಿಧಾನದ ಬಲ ಇರುವ ಕಾರಣ ವೇಗವಾಗಿ ಬೆಳಯುತ್ತಿದೆ ಇದೆ ರೀತಿ ರಾಜ್ಯ ಸರ್ಕಾರ ಸಹ ಕನ್ನಡ ಬೆಳವಣಿಗೆಗೆ ಸಂವಿಧಾನ ಬಲ ನೀಡ ಬೇಕಿದೆ. ಕನ್ನಡ ಕಲಿಕೆಯ ಮೊದಲ ಮೆಟ್ಟಿಲಾದ ಕನ್ನಡ ಶಾಲೆಗಳು ವ್ಯಾಪಕವಾಗಿ ಮುಚ್ಚುತ್ತಿರುವುದು ಕಳವಳಕಾರಿ. ನೂರಾರು ವರ್ಷಗಳ ಹಿಂದೆ ಶಾಲೆಗಳಿಗೆ ಭೂಮಿಯನ್ನು ದಾನ ನೀಡಲಾಗಿದೆ. ಆದರೆ ನೂರು ವರ್ಷಗಳ ಕಳೆದರು ಶಾಲೆಗಳಿಗೆ ಹಕ್ಕುಪತ್ರ ಮಾಡಲಾಗಿಲ್ಲ,” ಎಂದು ಡಿಸೆಂಬರ್‌ 13, 2024 ಶುಕ್ರವಾರದಂದು ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ನಡೆದ ನಾಲ್ಕನೆ ತಾಲೂಕು ಕನ್ನಡ ಸಮ್ಮೇಳನದಲ್ಲಿ ರಂಗಕರ್ಮಿ, ಸಾಹಿತಿ ಪ್ರಸಾದ್‌ ರಕ್ಷಿದಿಯವರು ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.

“ಇದರ ಪರಿಣಾಮ ಧಾನಿಗಳ ವಂಶಸ್ಥರು ಶಾಲೆಗಳ ಜಾಗವನ್ನು ವಶಕ್ಕೆಪಡೆಯುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳು ಮುಚ್ಚಲು ಕಾರಣರಾಗುತ್ತಿದ್ದಾರೆ. ಆದ್ದರಿಂದ ಶಾಲೆಗಳಿರುವ ಜಾಗವನ್ನು ಶಿಕ್ಷಣ ಇಲಾಖೆಯ ಹೆಸರಿಗೆ ನೋಂದಾಯಿಸಿಕೊಳ್ಳುವ ಕೆಲಸ ವಾಗಬೇಕಿದೆ. ಪ್ರಾಥಮಿಕ ಶಾಲೆಗಳಿಗೆ ೪೫ ಸಾವಿರ ಶಿಕ್ಷಕರ ಕೊರತೆ ಇದೆ ೨೦೨೫ ಕ್ಕೆ ಮತ್ತೆ ೩೫ ಸಾವಿರ ಶಿಕ್ಷಕರು ನಿವೃತ್ತರಾಗಲಿದ್ದಾರೆ. ಕೊಡಲೇ ೭೫ ಸಾವಿರ ಶಿಕ್ಷಕರ ನೇಮಕ ಮಾಡದಿದ್ದರೆ ಪ್ರಾಥಮಿಕ ಶಿಕ್ಷಣ ಪಡೆಯುವುದು ಬಡ ಮಕ್ಕಳಿಗೆ ದುಬಾರಿಯಾಗಲಿದೆ. ಕರ್ನಾಟಕ ದಲ್ಲಿ ೨೧೯ ಬಾಷೆಗಳಿವೆ. ಬಾಷೆಗಳೆಂಬುದು ಬಣ್ಣದ ರಂಗೋಲಿ. ಹೆಚ್ಚು ಬಾಷೆಗಳಿದ್ದಷ್ಟು ದೇಶದ ಪರಂಪರೆ ಚನ್ನಾಗಿರಲಿದೆ. ೨೦೦೧ ರಲ್ಲಿ ಕೊಡುವ ಬಾಷೆ ಮಾತನಾಡುವವರ ಸಂಖ್ಯೆ ೧.೫ ಲಕ್ಷ. ಆದರೆ, ೨೦೧೧ ರ ವೇಳೆಗೆ ಈ ಬಾಷೆ ಮಾತನಾಡುವವರ ಸಂಖ್ಯೆ ೧ ಲಕ್ಷಕ್ಕೆ ಕುಸಿದಿದೆ ಬಾಷೆಯ ಬಗ್ಗೆ ಅಧಮ್ಯ ಪ್ರೀತಿ ಇಲ್ಲದ ಕಾರಣ . ಈಗಾಗಲೇ ಹಲವು ಸಣ್ಣಪುಟ್ಟ ಬಾಷೆಗಳು ನಾಶವಾಗಿವೆ. ಇದು ಆತಂಕಕಾರಿ ಬೆಳವಣಿಗೆ. ಇದೆ ಹಾದಿಯನ್ನು ಕನ್ನಡಬಾಷೆ ಸಹ ಅನುಭವಿಸುತ್ತಿದೆ. ಹಿಂದಿ ಸೇರಿದಂತೆ ಉತ್ತರ ಭಾರತದ ಬಾಷೆಗಳು ಮಾತ್ರ ವೇಗವಾಗಿ ಬೆಳೆಯುತ್ತಿದೆ.”

“ಆದ್ದರಿಂದ ಕನ್ನಡ ಬಾಷೆ ಉಳಿಸಿ ಬೆಳಸುವ ಬಗ್ಗೆ ದೀರ್ಘ ಚರ್ಚೆ ನಡೆಯ ಬೇಕಿದೆ ಎಂದರು.. ಜನಸಂಖ್ಯೆ ಏರಿಕೆ ಸಹ ಬಾಷೆ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ದಕ್ಷಿಣ ಭಾರತದಲ್ಲಿ ಜನಸಂಖ್ಯೆ ಪ್ರಮಾಣ ಮದಗತಿಯಲ್ಲಿದ್ದು ಶೇ ೯ ರಷ್ಟಿದ್ದರೆ. ಉತ್ತರ ಭಾರತದ ಜನಸಂಖ್ಯೆ ಬೆಳವಣಿಗೆ ಶೇ ೬೬ ರಷ್ಟಿದೆ ಇದು ಸಹ ಬಾಷ ಬೆಳವಣಿಗೆಗೆ ತೊಡಕಾಗಿದೆ. ನಿಧಾನಗತಿಯಲ್ಲಿ ದೊಡ್ಡಬಾಷೆಗಳು ಸಣ್ಣ ಬಾಷೆಗಳನ್ನು ಅಪೋಷನ ತೆಗೆದುಕೊಳ್ಳುತ್ತಿವೆ.. ಆದ್ದರಿಂದ, ಸಮಸ್ಯೆ ಮೂಲಕ್ಕೆ ತೆರಳಿ ಸಮಸ್ಯೆ ಬಗೆಹರಿಸಿಕೊಳ್ಳದಿದ್ದರೆ ಕನ್ನಡ ಉಳಿಯುವುದು ಸಾದ್ಯವಿಲ್ಲ. ಈ ನಿಟ್ಟಿನಲ್ಲಿ ಗೋಕಾಕ್ ಚಳುವಳಿ ಮಾದರಿಯ ಹೋರಾಟ ಅಗತ್ಯವಿದೆ,” ಎಂದು ಸಮ್ಮೇಳನಾಧ್ಯಕ್ಷ ಪ್ರಸಾದ್‌ ರಕ್ಷಿದಿ ಹೇಳಿದರು.

“ತಾಲೂಕಿನ ಪರಿಸರ ರಕ್ಷಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಕೆಲಸವಾಗ ಬೇಕಿದೆ. ಸಣ್ಣ ಪ್ರಮಾಣದಲ್ಲಿನ ನಮ್ಮ ವಿರೋಧವನ್ನು ಸರ್ಕಾರ ಗಣನೇಗೆ ತೆಗೆದುಕೊಳ್ಳುತ್ತಿಲ್ಲ ಪರಿಣಾಮ ತಾಲೂಕಿನಲ್ಲಿ ದೊಡ್ಡದೊಡ್ಡ ಯೋಜನೆಗಳು ತಲೆ ಎತ್ತಲು ಸಾದ್ಯವಾಗಿದೆ. ಆದರೆ ಮುಂದಿನ ದಿನಗಳಲ್ಲಿ ಇಂತಹ ಪ್ರಮಾದಗಳು ತಲೆ ಎತ್ತಲು ಅವಕಾಶ ನೀಡಬಾರದು. ಎಂದರು.ಸಂವೇದನೆ ಇಲ್ಲದೆ ಮನುಷ್ಯ ಬಧುಕಿರುವುದು ದಂಡ. ನೆರೆಮನೆಯ ಕಷ್ಟ ಕಂಡು ಕರಗದಿರುವುದು ಮನುಷ್ಯತ್ವದ ಸರ್ವ ಪತನದ ಸಂಕೇತ. ತಾಲೂಕಿನಲ್ಲಿ ಶಾಲೆಗಳ ಸಂಖ್ಯೆ ಕುಸಿತ ಆತಂಕಕಾರಿ ಬಡವರು ಮಕ್ಕಳ ಮಾತ್ರ ಸರ್ಕಾರಿ ಶಾಲೆಗೆ ಸೇರುತ್ತಾರೆ ಎಂಬ ಮನಸ್ಥಿತಿ ಜನರಲ್ಲಿ ನೆಲಸಿರುವುದೆ ಕನ್ನಡ ಶಾಲೆಗಳ ಸಂಖ್ಯೆ ಗಣನೀಯವಾಗಿ ಕುಸಿಯಲು ಕಾರಣವಾಗಿದೆ. ತಾಲೂಕು ಕನ್ನಡ ಸಾಹಿತಿಗಳ ತವರಾಗಿದ್ದು ನೂರಕ್ಕೂ ಅಧಿಕ ಸಾಹಿತಿಗಳನ್ನು ನಮ್ಮ ನೆಲದಿಂದ ಹುಟ್ಟಿಬಂದಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ನಡೆಸಲು ಮಲೆನಾಡಿನಲ್ಲಿ ಸಾಕಷ್ಟು ವಿಷಯಗಳಿದ್ದು ಸೂಕ್ಷ್ಮ ಮನಸ್ಥಿತಿ ಸಾಹಿತ್ಯಕ್ಕೆ ಅಗತ್ಯವಿದೆ,” ಎಂದರು.

ವೇದಿಕೆಯಲ್ಲಿ ಮಾಜಿ ಶಾಸಕ ಎಚ್.ಕೆ ಕುಮಾರಸ್ವಾಮಿ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರೋ ಮಲ್ಲೇಶ್ಗೌಡ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶಾರದಗುರುಮೂರ್ತಿ, ಪುರಸಭೆ ಅಧ್ಯಕ್ಷೆ ಜ್ಯೋತಿರಾಜ್ಕುಮಾರ್,ಉಪಾಧ್ಯಕ್ಷೆ ಝರೀನಾ,ಸಾಹಿತಿ ಸುಬ್ಬುಹೊಲೇಯರ್, ಕಾಂಗ್ರೆಸ್ ಮುಖಂಡ ಮುರಳಿಮೋಹನ್, ಮುಂತಾದವರಿದ್ದರು.

ಸಕಲೇಶಪುರ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಉಪವಿಭಾಗಾಧಿಕಾರಿ ಡಾ. ಎಂ.ಕೆ ಶೃತಿಯವರು ಬೆಳಿಗ್ಗೆ 8 ಗಂಟೆಗೆ ರಾಷ್ಟ್ರಧ್ವಜದ ಆರೋಹಣ ಮಾಡಿದರೆ, ತಹಸೀಲ್ಧಾರ್ ಮೇಘನಾ ಕನ್ನಡ ಧ್ವಜದ ಅರೋಹಣವನ್ನು ನೇರವೆರಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶಾರದಗುರುಮೂರ್ತಿ ಕನ್ನಡ ಸಾಹಿತ್ಯ ಪರಿಷತ್ ಧ್ವಜದ ಆರೋಹಣವನ್ನು ಮಾಡಿದರು.

10 ಗಂಟೆಗೆ ಸರಿಯಾಗಿ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಆರಂಭವಾದ ಸಮ್ಮೇಳನಾಧ್ಯಕ್ಷ ಪ್ರಸಾದ್ ರಕ್ಷಿಧಿ ದಂಪತಿಗಳ ಮೆರವಣಿಗೆಯಲ್ಲಿ ವೀರಗಾಸೆ,ಕಂಸಾಳೆ,ಮಲೆನಾಡು ಸುಗ್ಗಿಕುಣಿತ ಗಮನಸೇಳೆದರೆ, ನಾಸಿಕ್ ವಾಧ್ಯಕ್ಕೆ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಜೊತೆಗೆ ಶಾಸಕ ಸೀಮೆಂಟ್ ಮಂಜು ಕುಣಿದರು. ಎರಡು ಗಂಟೆಗಳ ಕಾಲ ನಡೆದ ಮೆರವಣಿಗೆಯ ನಂತರ ಕಾಡಾನೆಗಳನ್ನು ಸೆರೆಹಿಡಿಯುವ ಸಂದರ್ಭದಲ್ಲಿ ಮೃತಪಟ್ಟ ಆನೆ ಅರ್ಜುನನ ನೆನಪಿಗಾಗಿ ನಿರ್ಮಿಸಿದ್ದ ಧ್ವಾರದ ಮೂಲಕ ಸಮ್ಮೇಳನಾಧ್ಯಕ್ಷರನ್ನು ವೇದಿಕೆಗೆ ಕರೆತರಲಾಯಿತು.

ಅಭಿವೃದ್ದಿ ಹರಿಕಾರ ಎಂದು ಗುರುತಿಸಿಕೊಂಡಿದ್ದ ಬೈಕೆರೆ ನಾಗೇಶ್ ವೇದಿಕೆಯಲ್ಲಿ ಆರಂಭವಾದ ಕಾರ್ಯಕ್ರಮವದಲ್ಲಿ ಬಾಗೆ ಜೆ.ಎಸ್.ಎಸ್ ಶಾಲೆಯ ಮಕ್ಕಳು ನೃತ್ಯ ಪ್ರದರ್ಶನ ನೀಡಿದರು. ಸಮ್ಮೇಳನವನ್ನು ಕನ್ನಡ ಪ್ರಾಧಿಕಾರದ ಅದ್ಯಕ್ಷ ಪ್ರೋ ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಿದರು. ವೇದಿಕೆಯ ಮೇಲೆ ಶಾಸಕ ಸೀಮೆಂಟ್ ಮಂಜು, ಕಾಂಗ್ರೆಸ್ ಮುಖಂಡ ಮುರಳಿ ಮೋಹನ್, ಸಾಹಿತಿ ಸುಬ್ಬು ಹೊಲೆಯಾರ್, ಸಯ್ಯದ್ ಮುಪೀಜ್, ಹಸೆನಾರ್ ಆನೆಮಹಾಲ್, ಕಾಡಪ್ಪ, ಹೆತ್ತೂರು ನಾಗರಾಜ್,ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಮಧ್ಯಾಹ್ನದ ನಂತರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ 13 ಸಾಹಿತಿಗಳನ್ನು ಒಳಗೊಂಡ ಕವಿಗೋಷ್ಠಿ ನಡೆಯಿತು. ಆ ನಂತರ ಮಲೆನಾಡ ಜನಜೀವನ ಹಾಗೂ ಸದ್ಯದ ಸವಾಲುಗಳ ಕುರಿತ ಸಂವಾದ ಕಾರ್ಯಕ್ರಮ ನಡೆಯಿತು. ರಂಗಭೂಮಿ ಕಲಾವಿದ ಮಂಡ್ಯ ರಮೇಶ್ ಅಧ್ಯಕ್ಷತೆಯಲ್ಲಿ ಸಮ್ಮೇಳನದ ಸಮರೋಪ ನಡೆಯಿತು.

You cannot copy content of this page

Exit mobile version