ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಡಿ.14 ರಂದು ಚಿಕ್ಕಮಗಳೂರು ಜಿಲ್ಲಾದ್ಯಂತ ಲೋಕ ಅದಾಲತ್ ಆಯೋಜಿಸಲು ನಿರ್ಧರಿಸಿದ್ದು, ಜನರು ವ್ಯಾಜ್ಯಗಳನ್ನು ತೆರವುಗೊಳಿಸಲು ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದೆ.
ಜಿಲ್ಲೆಯ ಎಲ್ಲ ತಾಲೂಕು ನ್ಯಾಯಾಲಯಗಳಲ್ಲಿ ಅದಾಲತ್ ನಡೆಯಲಿದೆ. ಅರ್ಹ ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದೆ.
ಹಿಂದಿನ ಲೋಕ ಅದಾಲತ್‌ನಲ್ಲಿ ವಿಚ್ಚೇಧನದ ಮೆಟ್ಟಿಲು ಹತ್ತಿದ್ದ ಒಟ್ಟು ಒಂಬತ್ತು ಜೋಡಿಗಳು ಮತ್ತೆ ಒಂದಾಗಿವೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಸಿ ವೀರಭದ್ರಯ್ಯ ಹೇಳಿದರು. ಜಿಲ್ಲೆಯ ಎಲ್ಲ ತಾಲೂಕು ನ್ಯಾಯಾಲಯಗಳಲ್ಲಿ ಅದಾಲತ್ ನಡೆಯಲಿದೆ. ಅರ್ಹ ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿಸಿಕೊಳ್ಳಬಹುದು.
ಚೆಕ್ ಬೌನ್ಸ್, ಹಣ ವಸೂಲಿ, ಉದ್ಯೋಗ, ಮೋಟಾರು ಅಪಘಾತದ ಕ್ಲೈಮ್‌ಗಳು, ಕೈಗಾರಿಕಾ ಕಾರ್ಮಿಕರ ವೇತನ ಹಕ್ಕುಗಳು, ವಿದ್ಯುತ್ ಶುಲ್ಕಗಳು, ಗಣಿಗಾರಿಕೆ ಮತ್ತು ಖನಿಜಗಳು, ಭೂ ಸ್ವಾಧೀನ ಪ್ರಕರಣಗಳು, ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು, ಪಿಂಚಣಿ ಪ್ರಕರಣಗಳು ಸೇರಿದಂತೆ ಒಟ್ಟು 5,545 ಪ್ರಕರಣಗಳು ಲೋಕ ಅದಾಲತ್ ನ ವ್ಯಾಪ್ತಿಯಲ್ಲಿದೆ.
ಕಂದಾಯ ಪ್ರಕರಣಗಳು ಮತ್ತು ಸಿವಿಲ್ ಪ್ರಕರಣಗಳು (ಬಾಡಿಗೆ, ಅನುಭೋಗದ ಹಕ್ಕುಗಳು, ತಡೆಯಾಜ್ಞೆ ಕಾನೂನು), ರಾಜಿ ಇತ್ಯರ್ಥಕ್ಕಾಗಿ ಗುರುತಿಸಲಾಗಿದೆ. ಹಾಗೇ ಒಟ್ಟು 2,260 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಸಿ ವೀರಭದ್ರಯ್ಯ ಹೇಳಿದರು.