ರಾಘವ್ ಚಡ್ಡಾ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಇರುವ ಕನಿಷ್ಠ ವಯೋಮಿತಿಯನ್ನು 25ರಿಂದ 21 ವರ್ಷಕ್ಕೆ ಇಳಿಸುವಂತೆ ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.
ಯುವ ಭಾರತಕ್ಕೆ ಯುವ ರಾಜಕಾರಣಿಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು.
‘ನಮ್ಮದು ಯುವ ಭಾರತ. ಚುನಾವಣೆಗೆ ಸ್ಪರ್ಧಿಸಲು 25 ವರ್ಷಗಳ ಕಾಲಾವಕಾಶ ನೀಡುವುದು ಈಗಿನ ಕಾಲಕ್ಕೆ ಸೂಕ್ತವಲ್ಲ. ಪ್ರಸ್ತುತ, ದೇಶದ ಜನಸಂಖ್ಯೆಯ ಶೇಕಡಾ 50ರಷ್ಟು ಜನರು 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. 65 ರಷ್ಟು ಜನಸಂಖ್ಯೆಯು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಸ್ವಾತಂತ್ರ್ಯಾನಂತರದ ದೇಶದ ಮೊದಲ ಲೋಕಸಭೆಯನ್ನು ಚುನಾಯಿಸಿದಾಗ, ಶೇಕಡಾ 26ರಷ್ಟು ಸದಸ್ಯರು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು. ಮತ್ತು ಕಳೆದ ಚುನಾವಣೆಯಲ್ಲಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ 12 ಪ್ರತಿಶತದಷ್ಟು ಜನರು ಮಾತ್ರ ಚುನಾಯಿತರಾಗಿದ್ದರು. ಯುವ ಭಾರತಕ್ಕೆ ಯುವ ರಾಜಕಾರಣಿಗಳ ಅಗತ್ಯವಿದೆ. ಹಾಗಾಗಿ ಚುನಾವಣೆಗೆ ಸ್ಪರ್ಧಿಸುವ ಕನಿಷ್ಠ ವಯೋಮಿತಿಯನ್ನು 21 ವರ್ಷಕ್ಕೆ ಇಳಿಸಬೇಕು. ಇದು ಕೇಂದ್ರ ಸರ್ಕಾರಕ್ಕೆ ನನ್ನ ಸಲಹೆ. ನಾನು ಈ ವಿಷಯವನ್ನು ಪರಿಗಣನೆಗೆ ತೆಗೆದುಕೊಳ್ಳಲು ಬಯಸುತ್ತೇನೆ’ ಎಂದು ರಾಘವ್ ಚಡ್ಡಾ ಹೇಳಿದರು.