ಮಧ್ಯಪ್ರದೇಶ : ಹಲವಾರು ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆಗಿದ್ದ ಕಿರುತೆರೆ ಕಲಾವಿದೆ ವೈಶಾಲಿ ಠಕ್ಕರ್ ಅವರು ಇಂದು ಭಾನುವಾರ ನಿಧನರಾಗಿದ್ದಾರೆ.
ಮಧ್ಯಪ್ರದೇಶದ ಇಂದೋರ್ನ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತ ದೇಹ ಕಾಣಿಸಿಕೊಂಡಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಶವದ ಪಕ್ಕದಲ್ಲೇ ಡೆತ್ ನೋಟ್ ಕೂಡ ಸಿಕ್ಕಿದ್ದು, ತೇಜಾಜಿ ನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈಶಾಲಿ ಟಕ್ಕರ್ ಹಿಂದಿ ಕಿರುತೆರೆಯ ಜನಪ್ರಿಯ ನಟಿಯಾಗಿದ್ದಾರೆ. ಕಲರ್ಸ್ನಲ್ಲಿ ಪ್ರಸಾರವಾದ ‘ಸಸುರಲ್ ಸಿಮರ್ ಕಾ’ಧಾರಾವಾಹಿಯಲ್ಲಿ ವೈಶಾಲಿ ನಟಿಸಿದ್ದರು. ಈ ಧಾರಾವಾಹಿಯಲ್ಲಿ ಅಂಜಲಿ ಭಾರದ್ವಾಜ್ ಪಾತ್ರದಲ್ಲಿ ವೈಶಾಲಿ ಹೆಚ್ಚು ಹೆಸರುವಾಸಿಯಾಗಿದ್ದರು. ಬಳಿಕ ಅವರು ಅನೇಕ ರಿಯಾಲಿಟಿ ಷೋಗಳಲ್ಲಿ ಕೂಡ ಸ್ಪರ್ಥಿಯಾಗಿ ವಿಜೇತರಾಗಿದ್ದರೂ ಕೂಡ.
2021ರಲ್ಲಿ ವೈಶಾಲಿ ಠಕ್ಕರ್ ಮತ್ತು ಡಾ. ಅಭಿನಂದನ್ ಸಿಂಗ್ ಎಂಬುಬವರ ಜೊತೆ ನಿಶ್ಚಿತಾರ್ಥ ನೆರವೇರಿತ್ತು. ಅದರ ವಿಡಿಯೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕೆಲವು ದಿನಗಳ ನಂತರ ಆ ಎಂಗೇಜ್ಮೆಂಟ್ ಮುರಿದುಬಿತ್ತು ಎಂದು ಅವರು ಹೇಳಿದ್ದರು. ಬಳಿಕ ವಿಡಿಯೋವನ್ನೂ ಡಿಲೀಟ್ ಮಾಡಿದ್ದರು.
ʼಡೆತ್ ನೋಟ್ನ ಪ್ರಕಾರ ಮಾಜಿ ಪ್ರಿಯಕರನ ಕಿರುಕುಳದಿಂದ ಒತ್ತಡ ಉಂಟಾಗಿ ಆತ್ಮಹತತ್ಯೆಗೆ ಶರಣಾಗಿದ್ದಾರೆʼ ಎಂದು ಇಂದೋರ್ನ ಸಹಾಯಕ ಪೊಲೀಸ್ ಆಯುಕ್ತರು ಹೇಳಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.