Home ರಾಜ್ಯ ಚಾಮರಾಜನಗರ ಮಹದೇಶ್ವರ ಬೆಟ್ಟದ ಸಮೀಪ ಬಸ್‌ ಅಪಘಾತ : 25 ಮಂದಿ ಪ್ರಯಾಣಿಕರಿಗೆ ಗಾಯ

ಮಹದೇಶ್ವರ ಬೆಟ್ಟದ ಸಮೀಪ ಬಸ್‌ ಅಪಘಾತ : 25 ಮಂದಿ ಪ್ರಯಾಣಿಕರಿಗೆ ಗಾಯ

0

ಚಾಮರಾಜನಗರ: ಚಲಿಸುತ್ತಿರುವ ಬಸ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ್ದು, 25 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಚಾಮರಾಜನಗರದ ತಾಳಬೆಟ್ಟದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಮದ್ದೂರು ಘಟಕದ ಕೆಎಸ್‌ಆರ್‌ಟಿಸಿ ಬಸ್‌ ಒಂದು ಮಲೆ ಮಹದೇಶ್ವರ ಬೆಟ್ಟದಿಂದ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಚಾಮರಾಜನಗದ ಮಹದೇಶ್ವರ ಬೆಟ್ಟದ ಸಮೀಪವೇ ಇರುವ ತಾಳೆಬೆಟ್ಟದಲ್ಲಿ ಘಟನೆ ನಡೆದಿದೆ. ಈ ದುರಂತದಲ್ಲಿ 25 ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಅಪಘಾತದಲ್ಲಿ ಗಾಯಗೊಂಡವರನ್ನು ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಿಸಲಾಗಿದೆ.

ಇದನ್ನೂ ನೋಡಿ : ➤➤ ʼರಿಶಿ ಸುನಕ್‌ʼ ಬಗ್ಗೆ ನಿಮಗೆ ತಿಳಿಯದ ರಹಸ್ಯಗಳು

You cannot copy content of this page

Exit mobile version