ಬೆಂಗಳೂರು: ನಗರದ ಸಂಪಂಗಿ ರಾಮನಗರ ಬಳಿ ಇರುವ ಅಧ್ವೈತ ಆಶ್ರಯ ಅಪಾರ್ಟ್ ಮೆಂಟ್ ನ ನಿವಾಸಿ ತಾಯಿ ಸುಷ್ಮಾ, 5 ವರ್ಷದ ದ್ವಿತಿ ಎಂಬ ಹೆಣ್ಣುಮಗುವನ್ನು 4 ನೇ ಮಹಡಿಯಿಂದ ಎಸೆದಿದ್ದು ಮಗು ಸ್ಥಳದಲ್ಲೆ ಸಾವನ್ನಪ್ಪಿದೆ. ಈ ಕಾರಣ ಎಸ್ ಪಿ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ತಿಳಿಯುತ್ತಿದ್ದಂತೆ ನಗರದ ಡಿಸಿಪಿ ಶ್ರೀನಿವಾಸ್ ಗೌಡ ಸ್ಥಳಕ್ಕೆ ಭೇಟಿಕೊಟ್ಟಿದ್ದು ಘಟನೆಯಬಗ್ಗೆ ಪರಿಶೀಲಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಗುವು ಬುದ್ದಿಮಾಂಧ್ಯೆ ಎಂದು ತಿಳಿದು, ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ʼದ್ವಿತಿʼಅನ್ನು ಮಹಡಿ ಮೇಲಿಂದ ಎಸೆದು ಕೊಲೆ ಮಾಡಿದ್ದಾಳೆ. ಮಗುವನ್ನು ಎಸೆದ ಬಳಿಕ ತಾಯಿ ಚೀರಿಕೊಂಡಿದ್ದು, ತಾನು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ಶಬ್ದ ಕೇಳಿ ಹೊರಬಂದ ಸ್ಥಳಿಯ ನಿವಾಸಿಗರು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಸಧ್ಯಕ್ಕೆ ಕೊಲೆಗೈದ ತಾಯಿಯನ್ನು ಠಾಣೆಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಗುವಿನ ತಂದೆ ಖಾಸಗಿ ಕಂಪನಿಯಲ್ಲಿ ಇಂಜನಿಯರ್ ಆಗಿದ್ದು, ತಾಯಿ ಸುಷ್ಮಾ ದಂತ-ವೈದ್ಯ ತರಬೇತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.