ಕೇರಳ: ವಯನಾಡ್ನಲ್ಲಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಕಚೇರಿಯಲ್ಲಿದ್ದ ಗಾಂಧಿ ಚಿತ್ರವನ್ನು ಎಸ್ಎಫ್ಐ ಕಾರ್ಯಕರ್ತರು ಧ್ವಂಸ ಮಾಡಿದ್ದಾರೆ ಎಂದು ಕಾಂಗ್ರೆಸ್ ಈ ಹಿಂದೆ ಆರೋಪಿಸಿತ್ತು. ಹೀಗಾಗಿ ವಯಾನಂದ್ ಕಚೇರಿಯಲ್ಲಿ ಮಹಾತ್ಮ ಗಾಂಧಿಯವರ ಭಾವಚಿತ್ರವನ್ನು ಧ್ವಂಸಗೊಳಿಸಿದ ಸಂಸದ ರಾಹುಲ್ ಗಾಂಧಿ ಸಿಬ್ಬಂದಿ ಸೇರಿದಂತೆ ಇಂದು 4 ಜನ ಕಾಂಗ್ರೆಸ್ ಕಾರ್ಯಕರ್ತರನ್ನು ಕಲ್ಪೆಟ್ಟಾ ಪೊಲೀಸರು ಬಂಧಿಸಿದ್ದಾರೆ.
ರಾಹುಲ್ ಗಾಂಧಿ ಅವರ ವಯನಾಡ್ ಕಚೇರಿಯ ಗೋಡೆಯನ್ನು ಹತ್ತಿ ಚಿತ್ರ ಧ್ವಂಸಗೊಳಿಸಿದಾಗ ಗೂಂಡಾಗಳು ಎಸ್ಎಫ್ಐ ಧ್ವಜಗಳನ್ನು ಹಿಡಿದಿದ್ದಾರೆ ಎಂದು ಭಾರತೀಯ ಯುವ ಕಾಂಗ್ರೆಸ್ ಟ್ವೀಟ್ನಲ್ಲಿ ಆರೋಪಿಸಿತ್ತು ಎಂದು ಸುದ್ದಿ-ಸಂಸ್ಥೆ ಎಎನ್ಐ ವರದಿ ಮಾಡಿದೆ.