Home ಸಿನಿಮಾ ತಿರುವನಂತಪುರಂನ ಮನೆಯಲ್ಲಿ ಶವವಾಗಿ ಪತ್ತೆಯಾದ ಮಲಯಾಳಂ ನಟಿ ರೆಂಜೂಷಾ ಮೆನನ್

ತಿರುವನಂತಪುರಂನ ಮನೆಯಲ್ಲಿ ಶವವಾಗಿ ಪತ್ತೆಯಾದ ಮಲಯಾಳಂ ನಟಿ ರೆಂಜೂಷಾ ಮೆನನ್

0

ಹೊಸದಿಲ್ಲಿ: ‘ಸ್ತ್ರೀ’, ‘ನಿಜಾಲಟ್ಟಂ’ ಮತ್ತು ಇನ್ನೂ ಅನೇಕ ಚಿತ್ರಗಳಿಗೆ ಹೆಸರುವಾಸಿಯಾಗಿದ್ದ ಮಲಯಾಳಂ ನಟಿ ರೆಂಜೂಷಾ ಮೆನನ್ (35) ಇಂದು (ಸೋಮವಾರ, ಅಕ್ಟೋಬರ್ 30 ) ತಿರುವನಂತಪುರಂನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಲಭ್ಯ ಮಾಹಿತಿಯ ಪ್ರಕಾರ, ಅವರು ಕೇರಳದ ತಿರುವನಂತಪುರಂನ ಕರಿಯಂನಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ರೆಂಜೂಷಾ ಪತಿ, ತಾಯಿ ಮತ್ತು ತಂದೆಯನ್ನು ಅಗಲಿದ್ದು, ಇವರ ಹಠಾತ್ ನಿಧನದ ಕುರಿತು ಹೆಚ್ಚಿನ ವಿವರಗಳನ್ನು ಇನ್ನೂ ನಿರೀಕ್ಷಿಸಲಾಗುತ್ತಿದೆ.

ನಟಿ ರೆಂಜೂಷಾ ಮೆನನ್ ಅವರು, ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಾವು ಆಕೆಯ ಕುಟುಂಬದ ಸದಸ್ಯರು ಮತ್ತು ಸಹೋದ್ಯೋಗಿಗಳಿಗೆ ಆಘಾತವನ್ನುಂಟು ಮಾಡಿದೆ, ಇದೀಗ ಆಕೆಯ ಸಾವಿನ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ಕಾದುನೋಡಬೇಕು ಎಂದು ಕೇರಳ ಪೊಲೀಸ್ ಅಧಿಕಾರಿಗಳು ಮಾಧ್ಯಮಗಳ ಬಳಿ ಮಾಹಿತಿ ಹಂಚಿಕೊಂಡಿದ್ದಾರೆ.

ವರದಿಗಳ ಪ್ರಕಾರ ಅವರು ಕಳೆದ ಕೆಲವು ತಿಂಗಳುಗಳಿಂದ ಅವರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು ಎನ್ನಲಾಗಿದೆ. ನಟಿ ರೆಂಜೂಷಾ ಮೆನನ್ ಅವರು ಮಲಯಾಳಂ ಚಲನಚಿತ್ರಗಳು ಮತ್ತು ದೂರದರ್ಶನ ಧಾರಾವಾಹಿಗಳಲ್ಲಿ ಕೆಲಸ ಮಾಡುವುದರ ಜೊತೆಗೆ ದೂರದರ್ಶನ ಧಾರಾವಾಹಿಗಳಲ್ಲಿ ಲೈನ್ ಪ್ರೊಡ್ಯೂಸರ್ ಆಗಿಯೂ ಕೆಲಸ ಮಾಡಿದ್ದಾರೆ.

ದೂರದರ್ಶನ ಧಾರಾವಾಹಿಗಳು ಮತ್ತು ಸಿನಿಮಾಗಳಿಗೆ ಕಾಲಿಡುವ ಮೊದಲು ರೆಂಜೂಷಾ ದೂರದರ್ಶನ ನಿರೂಪಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸೆಲೆಬ್ರಿಟಿ ಟಿವಿ ಶೋನಲ್ಲಿ ಭಾಗವಹಿಸಿದ್ದು ನಟಿ ರೆಂಜೂಷಾ ಮೆನನ್ ಅವರಿಗೆ ಮನ್ನಣೆ ತಂದುಕೊಟ್ಟಿತ್ತು.
ಕೊಚ್ಚಿಯವರಾದ ರೆಂಜೂಷಾ ತಮ್ಮ ವೃತ್ತಿಜೀವನವನ್ನು ಟಿವಿ ನಿರೂಪಕಿಯಾಗಿ ಪ್ರಾರಂಭಿಸಿದರು. ದೂರದರ್ಶನ ಧಾರಾವಾಹಿಗಳಾದ ‘ಸ್ತ್ರೀ’, ‘ನಿಜಾಲಟ್ಟಂ’, ‘ಮಗಳುಡೆ ಅಮ್ಮ’ ಮತ್ತು ‘ಬಾಲಾಮಣಿ’, ನಟಿ ‘ಸಿಟಿ ಆಫ್ ಗಾಡ್’, ‘ಬಾಂಬೆ ಮಾರ್ಚ್ 12’, ‘ಲಿಸಮ್ಮಾಯುಡೆ ವೀಡು’, ‘ಅದ್ಭುತ ದ್ವೀಪ’, ಮತ್ತು ‘ಕಾರ್ಯಸ್ಥಾನ’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

You cannot copy content of this page

Exit mobile version