Home ಅಪರಾಧ ಮೂವರನ್ನು ಕೊಂದು ತಾನು ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣು

ಮೂವರನ್ನು ಕೊಂದು ತಾನು ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣು

ಚಿಕ್ಕಮಗಳೂರು : ವ್ಯಕ್ತಿಯೊಬ್ಬ ಅತ್ತೆ, ನಾದಿನಿ ಹಾಗೂ ಮಗಳನ್ನು ಗುಂಡುಹಾರಿಸಿ ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಚಿಕ್ಕಮಗಳೂರಿನಲ್ಲಿ ಮಂಗಳವಾರ ರಾತ್ರಿ ನಡೆದಿದ್ದು, ಈಗ ಆರೋಪಿಯ ಕೊನೆಯ ವಿಡಿಯೊ ವೈರಲ್‌ ಆಗಿದೆ.

ರತ್ನಾಕರ್‌ ಎಂಬಾತ ತನ್ನ ಅತ್ತೆ ಜ್ಯೋತಿ, ನಾದಿನಿ ಸಿಂಧೂ ಹಾಗೂ ಮಗಳು ಖುಷಿಯನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾಗಿದ್ದ.

ವಿಡಿಯೋದಲ್ಲಿ ಈತ ತನ್ನ ಸಾಂಸಾರಿಕ ಬಾಧೆಯನ್ನು ಹಂಚಿಕೊಂಡಿದ್ದು ಎರಡು ವರ್ಷಗಳ ಹಿಂದೆಯೇ ತನ್ನ ಹೆಂಡತಿ ಬಿಟ್ಟು ಹೋಗಿದ್ದಳು. ಬಳಿಕ ಮಗಳನ್ನೂ ತೊರೆದಿದ್ದಳು. ಮಗಳನ್ನು ನಾನೇ ಸಾಕುತ್ತಿದ್ದೆ. ಮಗಳಿಗೆ ಸ್ಕೂಲಿನಲ್ಲಿ ಎಲ್ಲರೂ ಅಮ್ಮ ಎಲ್ಲಿ ಎಂದು ಕೇಳುತಿದ್ದರು. ನನ್ನ ಮಗಳು ನನಗೆ ತಿಳಿಯದಂತೆ ಮದುವೆ ಆಲ್ಬಂನಿಂದ ಒಂದು ಫೋಟೋ ತೆಗೆದುಕೊಂಡು ಹೋಗಿ ಇವಳೇ ನನ್ನ ಅಮ್ಮ ಎಂದು ತೋರಿಸಿದ್ದಳು ಎಂದಿದ್ದಾನೆ. ಈ ವಿಡಿಯೋದಲ್ಲಿ ತನ್ನ ತಂಗಿ ಹಾಗೂ ಬಾವನನ್ನು ಉದ್ದೇಶಿಸಿ ಮಾಡಿದ್ದೆನ್ನಲಾಗಿದೆ. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

You cannot copy content of this page

Exit mobile version