ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಶಾಲೆಯ ಮುಖ್ಯಶಿಕ್ಷಕ ಹಿಂದೂ ದೇವತೆ ರಾಮನ ಬಗ್ಗೆ ಅವಹೇಳನಕಾರಿ ವಾಟ್ಸಾಪ್ ಸ್ಟೇಟಸ್ ಅನ್ನು ಪೋಸ್ಟ್ ಮಾಡಿದ ಕಾರಣಕ್ಕೆ ಹಿಂದುತ್ವವಾದಿ ಪ್ರತಿಭಟನಾಕಾರರ ಗುಂಪೊಂದು ಶಾಲೆಯ ಮೇಲೆ ದಾಳಿ ಮಾಡಿದೆ .
ಮುಖ್ಯಶಿಕ್ಷಕ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ, ಪೊಲೀಸರು ಇವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯನ್ನು ಆರಂಭಿಸುವುದಾಗಿ ಬೆದರಿಕೆ ಹಾಕಿದರು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ .
“ಭಗವಾನ್ ರಾಮನ ವಿರುದ್ಧದ ಕಾಮೆಂಟ್‌ಗಳನ್ನು ಒಳಗೊಂಡ ವೈರಲ್ ಆದ ಸ್ಟೇಟಸ್ ವಿರುದ್ಧ ಪ್ರತಿಭಟನೆ ನಡೆಯಿತು” ಎಂದು ವಿಶ್ವ ಹಿಂದೂ ಪರಿಷತ್ ನಾಯಕನೊಬ್ಬನ ಹೇಳಿಕೆಯನ್ನು ಎಂದು ಪತ್ರಿಕೆ ಉಲ್ಲೇಖಿಸಿದೆ.

ವಿಶ್ವ ಹಿಂದೂ ಪರಿಷತ್, ರಾಜ್ಯದ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಮಾತೃ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ನೇತೃತ್ವದ ಹಿಂದುತ್ವ ಸಂಘಟನೆಗಳ ಗುಂಪಿನ ಭಾಗವಾಗಿದೆ.
ಮುಖ್ಯಶಿಕ್ಷಕರ ವಿರುದ್ಧ ಪೊಲೀಸ್ ದೂರು ಕೂಡ ದಾಖಲಾಗಿದೆ ಎಂದು ವಿಎಚ್‌ಪಿ ಮುಖಂಡ ಹೇಳಿದ್ದಾರೆ..
ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿರವ ಘಟನೆಯ ವೀಡಿಯೊಗಳಲ್ಲಿ, ಪ್ರತಿಭಟನಾಕಾರರು ಶಾಲೆಯ ಕಿಟಕಿಗಳನ್ನು ಒಡೆದು ಪೋಸ್ಟರ್‌ಗಳನ್ನು ಹರಿದು ಹಾಕುತ್ತಿರುವುದು ಕಂಡುಬಂದಿದೆ.
ಪೊಲೀಸರು ಮತ್ತು ಶಾಲಾ ಸಿಬ್ಬಂದಿಯ ಮುಂದೆಯೇ ಹಿಂದುತ್ವವಾದಿಗಳು ಶಾಲೆಯ ಆವರಣದೊಳಗೆ ಮಣ್ಣು ಸುರಿದರು ಎಂದು ಹೆಸರು ತಿಳಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಶಾಲೆಯ ಗೋಡೆಗಳ ಮೇಲೆ ಕಪ್ಪು ಬಣ್ಣವನ್ನು ಬಳಿದರು, ಪ್ರತಿಭಟನಾಕಾರರು ಸುಮಾರು ಮೂರು ಗಂಟೆಗಳ ಕಾಲ ಶಾಲೆಯಲ್ಲಿದ್ದರು ಮತ್ತು ಪೊಲೀಸರು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರವೇ ಮರಳಿದರು.”
ಎಫ್‌ಐಆರ್ ಇನ್ನೂ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
“ಆರೋಪಿ ವ್ಯಕ್ತಿಯು ಪೋಸ್ಟ್ ಅನ್ನು ನಿಜವಾಗಿಯೂ ಅಪ್‌ಲೋಡ್ ಮಾಡಿದ್ದಾನೆಯೇ ಮತ್ತು ಅದು ಕೃತಕ ಬುದ್ಧಿಮತ್ತೆಯ (AI) ಚಿತ್ರವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಾಂತ್ರಿಕ ತನಿಖೆ ನಡೆಯುತ್ತಿದೆ. ಶೀಘ್ರದಲ್ಲೇ ಮುಖ್ಯಶಿಕ್ಷಕರ ವಿಚಾರಣೆ ನಡೆಸಲಾಗುವುದು,” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.