ಮಂಡ್ಯ | ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ, ವಿಡಿಯೋ ಮೂಲಕ ಬ್ಲಾಕ್ ಮೇಲ್

ಮಂಡ್ಯ: ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ವಿಡಿಯೋ ಮೂಲಕ ಅಪ್ರಾಪ್ತ ಬಾಲಕಿಯನ್ನು ಬ್ಲಾಕ್‌ಮೇಲ್ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಶುಕ್ರವಾರ ನಡೆದಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮದ್ದೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬಂಧಿತರನ್ನು ಪುನೀತ್, ಮಂಜುನಾಥ್ ಮತ್ತು ಸಿದ್ದರಾಜು ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಕಳೆದ ತಿಂಗಳು ಮೈಸೂರಿನಲ್ಲಿ ನಡೆದ ದಸರಾ ಆಚರಣೆಯ ವೇಳೆ ಪುನೀತ್ ಸಂತ್ರಸ್ತೆಯ ಜೊತೆ ಸ್ನೇಹ ಬೆಳೆಸಿದ್ದ ಮತ್ತು ನಂತರ ಪರಸ್ಪರ ಅನ್ಯೋನ್ಯವಾಗಿದ್ದರು.

ನವೆಂಬರ್ 4ರಂದು ಆಕೆಯನ್ನು ಮದ್ದೂರಿನ ಲಾಡ್ಜ್‌ಗೆ ಕರೆದೊಯ್ದು ತನ್ನ ಸ್ನೇಹಿತರಾದ ಇನ್ನಿಬ್ಬರು ಆರೋಪಿಗಳ ಜೊತೆ ಸೇರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪರಾಧ ಎಸಗಿದ ಬಳಿಕ ಆಕೆಗೆ ಕೃತ್ಯದ ವೀಡಿಯೋ ಕಳುಹಿಸಿ ನಾವು ಕರೆದಾಗಲೆಲ್ಲ ಬರಬೇಕು ಎಂದು ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಇದರಿಂದ ಮನನೊಂದ ಸಂತ್ರಸ್ತೆ ತನ್ನ ಪೋಷಕರೊಂದಿಗೆ ಈ ಘಟನೆಯನ್ನು ಹಂಚಿಕೊಂಡಿದ್ದು, ಬಳಿಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ಪೋಕ್ಸೋ ಕಾಯ್ದೆ ಹಾಗೂ ಅಟ್ರಾಸಿಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು