Tuesday, February 17, 2026

ಸತ್ಯ | ನ್ಯಾಯ |ಧರ್ಮ

ಮಣ್ಣು ಕುಸಿತ: ಮಂಗಳೂರು-ಬೆಂಗಳೂರು ರೈಲ್ವೇ ಸಂಪರ್ಕ ಕಡಿತ

ಸಕಲೇಶಪುರ : ಮಲೆನಾಡಿನಲ್ಲಿ ಜೋರು ಮಳೆಯಿಂದ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿರುವ ಹಿನ್ನಲೆ ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರೈಲ್ವೆ ಸಂಚಾರ ಬಂದ್‌ ಮಾಡಲಾಗಿದೆ.


ಶುಕ್ರವಾರ ಸಂಜೆ 6.65ರ ಸಮಯದಲ್ಲಿ ಸಕಲೇಶಪುರ ತಾಲ್ಲೂಕಿನ ಕಡಗರವಳ್ಳಿ-ಯಡಕುಮರಿ ಮಧ್ಯೆ ಕಿ.ಮೀ. 63ರಲ್ಲಿ ಭಾರೀ ಪ್ರಮಾಣದ ಮಣ್ಣು ಕುಸಿದಿದೆ. ಆದ್ದರಿಂದ ಬಂದರು ನಾಡು ಮಂಗಳೂರು-ರಾಜಧಾನಿ ಬೆಂಗಳೂರು ನಡುವಿನ ರೈಲ್ವೆ ಸಂಚಾರ ಕಡಿತಗೊಂಡಿದೆ.


ಬೆಂಗಳೂರು-ಕಾರವಾರ (ಪಂಚಗಂಗಾ ಸೂಪರ್‌ ಫಾಸ್ಟ್‌ ಎಕ್ಸಪ್ರೆಸ್‌‍), ಮುರುಡೇಶ್ವರ-ಬೆಂಗಳೂರು, ಕಣ್ಣೂರು-ಬೆಂಗಳೂರು ರೈಲು ಸಂಚಾರ ಬಂದ್‌ ಆಗಿದೆ. ಮಣ್ಣು ಕುಸಿತ ಸ್ಥಳಕ್ಕೆ ರೈಲ್ವೆ ಸಿಬ್ಬಂದಿ ದೌಡಾಯಿಸಿದ್ದು ತೆರವು ಕಾರ್ಯಾಚರಣೆ ಮುಂದುವರೆದಿದೆ ಎಂದು ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ್‌ ಅವರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page