Home ರಾಜಕೀಯ ಸಾಮೂಹಿಕ ಮತಾಂತರ : ಬಿಜೆಪಿ ಬಾಯಿ ಮುಚ್ಚಿಸಲು ರಾಜೀನಾಮೆ ಅಸ್ತ್ರವಾಗಿಸಿತೇ ಎಎಪಿ?

ಸಾಮೂಹಿಕ ಮತಾಂತರ : ಬಿಜೆಪಿ ಬಾಯಿ ಮುಚ್ಚಿಸಲು ರಾಜೀನಾಮೆ ಅಸ್ತ್ರವಾಗಿಸಿತೇ ಎಎಪಿ?

0

ದೆಹಲಿಯಲ್ಲಿ ಸಾವಿರಾರು ಜನರ ಸಾಮೂಹಿಕ ಮತಾಂತರದ ನಂತರ ಎಎಪಿ ಸಚಿವ ರಾಜೇಂದ್ರ ಪಾಲಾ ಗೌತಮ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಒಂದು ರಾಜೀನಾಮೆ ಪ್ರಕ್ರಿಯೆ ಗುಜರಾತ್ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಟೀಕಾಕಾರರ ಬಾಯಿ ಮುಚ್ಚಿಸುವ ತಂತ್ರಗಾರಿಕೆ ಎಂದು ಅಂದಾಜಿಸಲಾಗಿದೆ.

ಹಿಂದೂ ಧರ್ಮ ಮತ್ತು ದೇವರುಗಳನ್ನು ನಿರಾಕರಿಸುವ ಪ್ರತಿಜ್ಞೆ ಕೈಗೊಳ್ಳುವ ಮೂಲಕ ಇತ್ತೀಚೆಗೆ ಸಾವಿರಾರು ಜನರು ಬೌದ್ಧ ಧರ್ಮಕ್ಕೆ ಸಾಮೂಹಿಕ ಮತಾಂತರಗೊಂಡಿದ್ದರು. ಇದರ ನೇತೃತ್ವ ವಹಿಸಿದ್ದ ರಾಜೇಂದ್ರ ಪಾಲ್ ಗೌತಮ್ ವಿರುದ್ಧ ಬಿಜೆಪಿ ದೊಡ್ಡ ಮಟ್ಟದಲ್ಲಿ ಆಕ್ರೋಶ ವ್ಯಕ್ತಪಡಿಸಿತ್ತು.

ಇದರ ನಡುವೆ ಮಾಜಿ ಸಚಿವ ರಾಜೇಂದ್ರ ಪಾಲ್ ಗೌತಮ್ ಕೂಡಾ ಅರವಿಂದ ಕೇಜ್ರಿವಾಲ್ ಆಡಳಿತ ವ್ಯವಸ್ಥೆ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದು, ಆಡಳಿತಾತ್ಮಕವಾಗಿ ಕೇಜ್ರಿವಾಲ್ ಹಲವಷ್ಟು ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಿದ್ದಾರೆ. ಮತಾಂತರದ ಹಿನ್ನೆಲೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಿಲುವನ್ನು ಮೆಚ್ಚಿ ಆದಂತಹ ನಿಲುವಾಗಿದೆ. ಇಲ್ಲಿ ಯಾರನ್ನೂ ಬಲವಂತವಾಗಿ ಮತಾಂತರಕ್ಕೆ ಆಹ್ವಾನಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಪಕ್ಷಕ್ಕೆ ಹಿಂದೂ ಮತಬ್ಯಾಂಕ್ ಮಾತ್ರವೇ ಪ್ರಮುಖ ಅಸ್ತ್ರವಾಗಿದ್ದು, ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಇದನ್ನೇ ದೊಡ್ಡ ಗಲಭೆ ಎಬ್ಬಿಸಿ ಎಎಪಿ ಪ್ರಚಾರಕ್ಕೆ ಬಿಜೆಪಿಗರು ತಡೆಯೊಡ್ಡಬಾರದು ಎಂಬ ಕಾರಣಕ್ಕೆ ರಾಜೇಂದ್ರ ಪಾಲ್‌ ರಾಜೀನಾಮೆಯ ಅಸ್ತ್ರ ಹೂಡಿದರಾ ಎಂಬ ಸಂಶಯ ಉಂಟಾಗುತ್ತಿದೆ.

ಸಧ್ಯ ಗುಜರಾತ್ ಚುನಾವಣೆಗೆ ಎಎಪಿ ಪಕ್ಷ ಹೆಚ್ಚು ಆಸಕ್ತಿ ವಹಿಸಿದ್ದು ಎಎಪಿ ಪಕ್ಷಕ್ಕೆ ಅಲ್ಲಿನ ಹಿಂದೂ ಮತಬ್ಯಾಂಕ್ ಮೇಲೆ ಸಾಮೂಹಿಕ ಮತಾಂತರದ ಸುದ್ದಿ ಹೆಚ್ಚು ಪರಿಣಾಮ ಬೀರಬಹುದು ಎಂದೇ ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕೂಡಾ ನಮ್ಮ ಪಕ್ಷ ಹಿಂದೂ ವಿರೋಧಿ ಅಲ್ಲ ಎಂಬಂತೆ ಸ್ಪಷ್ಟನೆ ನೀಡಿದ್ದಾರೆ. ಆದರೆ ಇಲ್ಲಿಯವರೆಗೂ ಕೇಜ್ರಿವಾಲ್ ಸಾಮೂಹಿಕ ಮತಾಂತರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

You cannot copy content of this page

Exit mobile version