ಇಂಫಾಲ್: ಪ್ರಧಾನಿ ನರೇಂದ್ರ ಮೋದಿ ಅವರ ಮಣಿಪುರ ಭೇಟಿಯ ಸಂದರ್ಭದಲ್ಲಿ, ರಾಜ್ಯದ ಬಿಜೆಪಿಯಲ್ಲಿ ಅನಿರೀಕ್ಷಿತ ಬೆಳವಣಿಗೆಯೊಂದು ನಡೆದಿದೆ.
ಪಕ್ಷದ ಕಾರ್ಯವೈಖರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ 43ಕ್ಕೂ ಹೆಚ್ಚು ರಾಜ್ಯ ಬಿಜೆಪಿ ನಾಯಕರು ಗುರುವಾರ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಉಖ್ರುಲ್ ಜಿಲ್ಲೆಯ ಫುಂಗ್ಯಾರ್ ವಿಧಾನಸಭಾ ಕ್ಷೇತ್ರದ ಅನೇಕ ನಾಯಕರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದು ಸಂಚಲನ ಮೂಡಿಸಿದೆ.
ಪ್ರಧಾನಿ ಮೋದಿ ಅವರ ಮಣಿಪುರ ಭೇಟಿಗೆ ಎರಡು ದಿನಗಳ ಮೊದಲು ಈ ಘಟನೆ ನಡೆದಿರುವುದು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ರಾಜೀನಾಮೆ ನೀಡಿದವರಲ್ಲಿ ಫುಂಗ್ಯಾರ್ ಮಂಡಲದ ಬಿಜೆಪಿ ಅಧ್ಯಕ್ಷರು, ಮಹಿಳಾ, ಯುವ ಮತ್ತು ಕಿಸಾನ್ ಮೋರ್ಚಾದ ನಾಯಕರು, ಮತ್ತು 53 ಬೂತ್ ಮಟ್ಟದ ಅಧ್ಯಕ್ಷರು ಸೇರಿದ್ದಾರೆ.