Home ವಿದೇಶ ಕಂಪನಿ ಸಭೆಯಲ್ಲಿ ಇಸ್ರೇಲ್‌ ಸರ್ಕಾರದ ವಿರುದ್ಧ ದನಿಯೆತ್ತಿದ ಉದ್ಯೋಗಿಯನ್ನು ಕೆಲಸದಿಂದ ತೆಗೆದುಹಾಕಿದ ಮೈಕ್ರೋಸಾಫ್ಟ್

ಕಂಪನಿ ಸಭೆಯಲ್ಲಿ ಇಸ್ರೇಲ್‌ ಸರ್ಕಾರದ ವಿರುದ್ಧ ದನಿಯೆತ್ತಿದ ಉದ್ಯೋಗಿಯನ್ನು ಕೆಲಸದಿಂದ ತೆಗೆದುಹಾಕಿದ ಮೈಕ್ರೋಸಾಫ್ಟ್

0

ನ್ಯೂಯಾರ್ಕ್: ಕಂಪನಿಯ 50ನೇ ವಾರ್ಷಿಕೋತ್ಸವದಲ್ಲಿ ಇಬ್ಬರೂ ಪ್ರತಿಭಟಿಸಿದರು ಎನ್ನುವ ಕಾರಣಕ್ಕಾಗಿ ಮೈಕ್ರೋಸಾಫ್ಟ್ ಕಾರ್ಪೊರೇಷನ್ ಇಬ್ಬರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ.

ಮೈಕ್ರೋಸಾಫ್ಟ್ ಆರ್ಟಿಫಿಷಿಯಲ್‌ ಇಂಟಲಿಜೆನ್ಸ್ ಮುಖ್ಯಸ್ಥ ಮುಸ್ತಫಾ ಸುಲೇಮಾನ್ ಭಾಷಣ ಮಾಡುತ್ತಿದ್ದಾಗ, ಇಬಿಟಲ್ ಅಬೋಸಾದ್ ಎಂಬ ಮಹಿಳೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು. ಮೈಕ್ರೋಸಾಫ್ಟ್ ತನ್ನ ಗ್ರಾಹಕರ ಪಟ್ಟಿಯಿಂದ ಇಸ್ರೇಲ್ ಸರ್ಕಾರವನ್ನು ತೆಗೆದುಹಾಕಬೇಕೆಂದು ಅವರು ಒತ್ತಾಯಿಸಿದರು. ಸಿಇಒ ಸತ್ಯ ನಾಡೆಲ್ಲಾ, ಬಿಲ್ ಗೇಟ್ಸ್ ಮತ್ತು ಸ್ಟೀವ್ ಬಾಲ್ಮರ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಾನಿಯಾ ಅಗರ್ವಾಲ್ ಎಂಬ ಮಹಿಳೆ ಕೂಡ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು. ಅವರು ಪ್ರಶ್ನೋತ್ತರ ಕಾರ್ಯಕ್ರಮಕ್ಕೆ ಅಡ್ಡಿ ಮಾಡಿದರು.

ಈ ಹಿನ್ನೆಲೆಯಲ್ಲಿ ಇಬ್ಬರು ಉದ್ಯೋಗಿಗಳಿಗೆ ಆ ಸ್ಥಳದಿಂದ ಹೊರಹೋಗುವಂತೆ ಆದೇಶಿಸಲಾಯಿತು. ವಾಷಿಂಗ್ಟನ್‌ನ ರೆಡ್‌ಮಂಡ್‌ನಲ್ಲಿರುವ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಬ್ಬರು ಉದ್ಯೋಗಿಗಳು ಪ್ರತಿಭಟನೆ ನಡೆಸಿದ್ದರು. ಅಬೋಸಾದ್‌ ಅವರಿಗೆ ವಜಾ ಪತ್ರವನ್ನು ಕಳುಹಿಸಲಾಗಿದೆ.

ಮೈಕ್ರೋಸಾಫ್ಟ್ ಈ ನಡವಳಿಕೆಯನ್ನು ಟರ್ಮಿನೇಷನ್‌ ಪತ್ರದಲ್ಲಿ ಅನುಚಿತ ಎಂದು ಉಲ್ಲೇಖಿಸಿದೆ. ಏಪ್ರಿಲ್ 11ರಿಂದ ಜಾರಿಗೆ ಬರುವಂತೆ ಅಗರ್ವಾಲ್ ಅವರ ರಾಜೀನಾಮೆ ಪತ್ರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ವೀಕರಿಸುತ್ತಿರುವುದಾಗಿ ಕಂಪನಿ ತಿಳಿಸಿದೆ.

ಇಬ್ಬರು ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಕಂಪನಿಯು ಯಾವುದೇ ನೇರ ಘೋಷಣೆ ಮಾಡಿಲ್ಲ.

You cannot copy content of this page

Exit mobile version