ಬೆಂಗಳೂರು: ಸರ್ಕಾರದ ಪರವಾಗಿ ಹೋರಾಟಗಾರರ ಮನವೊಲಿಸಲ ಬಂದಂತಹ ಸಚಿವ ವಿ.ಸೋಮಣ್ಣ ಅವರಿ ಘೇರಾವ್ ಹಾಕಿ ಸಭೆಯಿಂದ ಹೊರ ಕಳಿಸಿರುವ ಘಟನೆ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಹಮ್ಮಿಕೊಂಡಿದ್ದ ಒಳಮೀಸಲಾತಿ ಹೋರಾಟ ಸಮಿತಿಯ ಸಮಾವೇಶದಲ್ಲಿ ನಡೆದಿದೆ.
ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾ ಇಂದು ಫ್ರೀಡಂ ಪಾರ್ಕ್ ಬಳಿ ಸಮಾವೇಶವನ್ನು ಹಮ್ಮಿಕೊಂಡಿದ್ದು, ಈ ವೇಳೆ ಸರ್ಕಾರದ ಪರವಾಗಿ ಹೋರಾಟಗಾರರ ಮನವೊಲಿಸಲು ಬಂದಂತಹ ಸಚಿವ ವಿ. ಸೋಮಣ್ಣ ಅವರಿಗೆ ಹೋರಾಟಗಾರಾರು ಘೇರಾವ್ ಹಾಕಿ ಸಭೆಯಿಂದ ಹೊರಗೆ ಕಳಿಸಿದ್ದಾರೆ.
ಹರಿಹರದಿಂದ ಕಾಲ್ನಡಿಗೆಯಲ್ಲಿ ಬಂದಂತಹ ಜಾಥಾ ಒಳಮೀಸಲಾತಿಗಾಗಿ ಪಟ್ಟು ಹಿಡಿದು ಕೂತಿರುವುದು ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ. ಈ ಹಿಂದೆ ನಡೆದಂತಹ ಹೋರಾಟದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಹಾಗು ಗೋವಿಂದ ಕಾರಜೋಳ ಒಳಮೀಸಲಾತಿ ಕಾಯ್ದೆ ತರುವುದಾಗಿ ಆಶ್ವಾಸನೆ ನೀಡಿದ್ದರು. ಈಗ ಅವರದೇ ಸರ್ಕಾರವಿದ್ದರೂ ಸಹ ಯಾವುದೇ ರೀತಿಯ ನಿರ್ಣಯ ತೆಗೆದುಕೊಳ್ಳದೇ ಇರುವುದು ಒಳಮೀಸಲಾತಿ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದು ಈಗ ಬಿಜೆಪಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಈ ಕುರಿತಾಗಿ ಮಾತನಾಡಲು ಬಂದಂತಹ ಸಚಿವ ಸೋಮಣ್ಣನಿಗೆ ಹೋರಾಟದಲ್ಲಿ ಭಾಗಿಯಾಗಿದ್ದ ಸಾವಿರಾರು ಜನ ಒಕ್ಕೊರಲಿನಿಂದ ‘Go back somanna’ ಎಂದು ಕೂಗುತ್ತಾ ಸಚಿವ ಸೋಮಣ್ಣ ಅವರನ್ನು ವೇದಿಕೆಯಿಂದ ಕೆಳಗಿಳಿಸಿ ಹೊರಗೆ ಕಳಿಸಿದರು.
ಬೊಮ್ಮಾಯಿ ಬರುವವರೆಗೂ ಈ ಹೋರಾಟ ನಿಲ್ಲುವುದಿಲ್ಲ ಎನ್ನುತ್ತಾ ಸಾವಿರಾರು ಹೋರಾಟಗಾರರು ಮಳೆಯಲ್ಲಿಯೇ ನಿಂತು ಪ್ರತಿಭಟನೆ ಮುಂದುವರೆಸಿದ್ದಾರೆ.