Home ರಾಜಕೀಯ ಬರ ಮತ್ತು ಅತಿವೃಷ್ಟಿ ಅಧ್ಯಯನಕ್ಕೆ ಸಚಿವರಿಗೆ ಜಿಲ್ಲೆಗಳ ಹೊಣೆ: ಸಿಎಂ ಡಿ.ಕೆ. ಶಿವಕುಮಾರ್ ಆದೇಶ

ಬರ ಮತ್ತು ಅತಿವೃಷ್ಟಿ ಅಧ್ಯಯನಕ್ಕೆ ಸಚಿವರಿಗೆ ಜಿಲ್ಲೆಗಳ ಹೊಣೆ: ಸಿಎಂ ಡಿ.ಕೆ. ಶಿವಕುಮಾರ್ ಆದೇಶ

0

ರಾಜ್ಯದಲ್ಲಿ ಉಂಟಾಗಿರುವ ಅನಾವೃಷ್ಟಿ ಹಾಗೂ ಅತಿವೃಷ್ಟಿ ಪರಿಸ್ಥಿತಿಯ ಸಮಗ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ 31 ಜಿಲ್ಲೆಗಳಿಗೆ ಸಚಿವರನ್ನು ನೇಮಿಸಿ ಮಹತ್ವದ ಆದೇಶ ಹೊರಡಿಸಿದ್ದಾರೆ.

ಸಚಿವ ಸಂಪುಟ ಪುನಾರಚನೆಯಾದ ಮರುದಿನವೇ ಈ ನಿರ್ದೇಶನ ನೀಡಿರುವ ಮುಖ್ಯಮಂತ್ರಿ, ಪ್ರತಿಯೊಬ್ಬ ಸಚಿವರು ತಮಗೆ ಹಂಚಿಕೆ ಮಾಡಿರುವ ಜಿಲ್ಲೆಗೆ ಖುದ್ದಾಗಿ ಭೇಟಿ ನೀಡಿ, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿನ ಬರ ಹಾಗೂ ಅತಿವೃಷ್ಟಿ ಪರಿಸ್ಥಿತಿಯನ್ನು ಸ್ಥಳದಲ್ಲೇ ಪರಿಶೀಲಿಸುವಂತೆ ಸೂಚಿಸಿದ್ದಾರೆ.

ಪರಿಶೀಲನೆಯ ವೇಳೆ ಬೆಳೆ ಹಾನಿ, ಮಳೆ ಪ್ರಮಾಣ, ಕುಡಿಯುವ ನೀರಿನ ಲಭ್ಯತೆ, ರಸ್ತೆ ಹಾಗೂ ಮೂಲಸೌಕರ್ಯ ಹಾನಿ ಸೇರಿದಂತೆ ಜನಜೀವನದ ಮೇಲಾದ ಪರಿಣಾಮಗಳ ಕುರಿತು ವಾಸ್ತವ ಸ್ಥಿತಿಗತಿಯ ವರದಿಯನ್ನು ಸಿದ್ಧಪಡಿಸಬೇಕು. ಬಳಿಕ ಆ ವರದಿಯನ್ನು ಕಂದಾಯ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.

ಜಿಲ್ಲಾವಾರು ಉಸ್ತುವಾರಿ ಸಚಿವರ ನೇಮಕ

  • ತುಮಕೂರು – ಡಾ. ಜಿ. ಪರಮೇಶ್ವರ್
  • ಚಿತ್ರದುರ್ಗ – ಟಿ. ರಘುಮೂರ್ತಿ
  • ಚಿಕ್ಕಬಳ್ಳಾಪುರ – ಬೈರತಿ ಸುರೇಶ್
  • ಬೆಂಗಳೂರು ಗ್ರಾಮಾಂತರ – ಕೆ.ಎಚ್. ಮುನಿಯಪ್ಪ
  • ಕೋಲಾರ – ರಾಮಲಿಂಗಾರೆಡ್ಡಿ
  • ಬೆಂಗಳೂರು ದಕ್ಷಿಣ – ಎಚ್.ಸಿ. ಬಾಲಕೃಷ್ಣ
  • ವಿಜಯನಗರ – ಜಮೀರ್ ಅಹಮದ್ ಖಾನ್
  • ಚಿಕ್ಕಮಗಳೂರು – ಕೆ.ಜೆ. ಜಾರ್ಜ್
  • ಹಾಸನ – ಕೆ.ಎಂ. ಶಿವಲಿಂಗೇಗೌಡ
  • ಶಿವಮೊಗ್ಗ – ಮಧು ಬಂಗಾರಪ್ಪ
  • ವಿಜಯಪುರ – ಎಂ.ಬಿ. ಪಾಟೀಲ್
  • ಬಾಗಲಕೋಟೆ – ವಿಜಯಾನಂದ ಕಾಶಪ್ಪನವರ್
  • ದಾವಣಗೆರೆ – ಎಸ್.ಎಸ್. ಮಲ್ಲಿಕಾರ್ಜುನ
  • ಹಾವೇರಿ – ರುದ್ರಪ್ಪ ಲಮಾಣಿ
  • ಗದಗ – ಬಸವರಾಜ ರಾಯರೆಡ್ಡಿ
  • ಬೆಳಗಾವಿ – ಸತೀಶ್ ಜಾರಕಿಹೊಳಿ
  • ಧಾರವಾಡ – ಸಂತೋಷ್ ಲಾಡ್
  • ಉತ್ತರ ಕನ್ನಡ – ಲಕ್ಷ್ಮಣ ಸವದಿ
  • ಕಲಬುರಗಿ – ಪ್ರಿಯಾಂಕ್ ಖರ್ಗೆ
  • ರಾಯಚೂರು – ಅಜಯ್ ಧರಂಸಿಂಗ್
  • ಬೀದರ್ – ಈಶ್ವರ್ ಖಂಡ್ರೆ
  • ಕೊಡಗು – ಪಿ.ಎಂ. ನರೇಂದ್ರಸ್ವಾಮಿ
  • ದಕ್ಷಿಣ ಕನ್ನಡ ಹಾಗೂ ಉಡುಪಿ – ಯು.ಟಿ. ಖಾದರ್
  • ಮೈಸೂರು – ಯತೀಂದ್ರ ಸಿದ್ದರಾಮಯ್ಯ
  • ಮಂಡ್ಯ – ಎನ್. ಚಲುವರಾಯಸ್ವಾಮಿ
  • ಚಾಮರಾಜನಗರ – ಪುಟ್ಟರಂಗಶೆಟ್ಟಿ
  • ಬಳ್ಳಾರಿ – ಬಿ. ನಾಗೇಂದ್ರ
  • ಯಾದಗಿರಿ – ಡಾ. ಶರಣಪ್ರಕಾಶ್ ಪಾಟೀಲ್
  • ಕೊಪ್ಪಳ – ಶಿವರಾಜ್ ತಂಗಡಗಿ
  • ಬೆಂಗಳೂರು ನಗರ – ಕೃಷ್ಣ ಬೈರೇಗೌಡ

ಸಚಿವರ ಪರಿಶೀಲನಾ ವರದಿಗಳ ಆಧಾರದ ಮೇಲೆ ಬರ ಮತ್ತು ಅತಿವೃಷ್ಟಿಯಿಂದ ಬಾಧಿತ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಪರಿಹಾರ ಹಾಗೂ ಪುನರ್ವಸತಿ ಕ್ರಮಗಳ ಕುರಿತು ರಾಜ್ಯ ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

You cannot copy content of this page

Exit mobile version