Home ರಾಜಕೀಯ ತಪ್ಪಾಗಿ ಸುದ್ದಿ ಹಂಚಿಕೊಂಡಿದ್ದಕ್ಕೆ ಪ್ರಿಯಾಂಕ್ ಖರ್ಗೆ ಅವರಲ್ಲಿ ಕ್ಷಮೆಯಾಚಿಸಿದ PTI

ತಪ್ಪಾಗಿ ಸುದ್ದಿ ಹಂಚಿಕೊಂಡಿದ್ದಕ್ಕೆ ಪ್ರಿಯಾಂಕ್ ಖರ್ಗೆ ಅವರಲ್ಲಿ ಕ್ಷಮೆಯಾಚಿಸಿದ PTI

0

ವಿಜಯಪುರ ಪೊಲೀಸ್ ನೇಮಕಾತಿ ಪರೀಕ್ಷೆ ಗೊಂದಲ ವೇಳೆ ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ “ನಾನು ರಾಜೀನಾಮೆ ನೀಡುತ್ತೇನೆ 25 ದಿನ ಉಪವಾಸ ಮಾಡಲಿ” ಎಂದು ಹೇಳಿದ್ದರು ಎಂಬ ಸುದ್ದಿ ದೇಶದಾದ್ಯಂತ ವ್ಯಾಪಕವಾಗಿ ಹರಡಿತ್ತು. ಆದರೆ, ಈಗ ಆ ವರದಿ ತಪ್ಪಾಗಿದೆ ಎಂದು PTI ಒಪ್ಪಿಕೊಂಡು ಅಧಿಕೃತವಾಗಿ ಕ್ಷಮೆಯಾಚಿಸಿದೆ.

ವಿವಾದ ಹೆಚ್ಚಾಗುತ್ತಿದ್ದಂತೆಯೇ PTI ತನ್ನ ಹಿಂದಿನ ಪೋಸ್ಟ್ ಅನ್ನು ಹಿಂತೆಗೆದುಕೊಂಡು, ಮಾನವ ದೋಷದಿಂದ ಈ ತಪ್ಪು ಸಂಭವಿಸಿದೆ ಎಂದು ಒಪ್ಪಿಕೊಂಡು ಪ್ರಿಯಾಂಕ್ ಖರ್ಗೆ ಅವರಿಗೆ ಅಧಿಕೃತ ಕ್ಷಮಾಪಣೆಯ ಪತ್ರವನ್ನೂ ಕಳುಹಿಸಿದೆ.

ಆದರೆ, ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪ್ರಿಯಾಂಕ್ ಖರ್ಗೆ “ಕ್ಷಮೆಯಾಚನೆಯಿಂದ ಈಗ ಏನು ಪ್ರಯೋಜನ? ಸುಳ್ಳು ಸುದ್ದಿ ಈಗಾಗಲೇ ಲಕ್ಷಾಂತರ ಜನರನ್ನು ತಲುಪಿದೆ. ಅದರ ರಾಜಕೀಯ ಮತ್ತು ಸಾಮಾಜಿಕ ಪರಿಣಾಮಕ್ಕೆ ಯಾರು ಹೊಣೆ?” ಎಂದು ಪ್ರಶ್ನಿಸಿದ್ದಾರೆ.

You cannot copy content of this page

Exit mobile version