Home ರಾಜ್ಯ ವಕ್ಫ್ ಕಾಯಿದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದ ಶಾಸಕ ಹೆಚ್.ಪಿ. ಸ್ವರೂಪ್

ವಕ್ಫ್ ಕಾಯಿದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದ ಶಾಸಕ ಹೆಚ್.ಪಿ. ಸ್ವರೂಪ್

ಹಾಸನ: ಪ್ರತಿ ವರ್ಷದಂತೆ ಈ ವರ್ಷವು ಕೂಡ ನಗರದ ಹೊಸಲೈನ್ ರಸ್ತೆ ಬಳಿ ಇರುವ ಹಳೆ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಅಂಗವಾಗಿ ಸೋಮವಾರದಂದು ಮುಸಲ್ಮಾನ ಬಾಂಧವರು ಕಪ್ಪು ಪಟ್ಟಿ ಧರಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಇದೆ ವೇಳೆ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಅವರು ಭೇಟಿ ನೀಡಿ ವಕ್ಫ್ ಕಾಯಿದೆ ತಿದ್ದುಪಡಿಗೆ ವಿರೋಧವ್ಯಕ್ತಪಡಿಸುವ ಮೂಲಕ ಮುಸಲ್ಮಾನರ ಹೋರಾಟಕ್ಕೆ ಸಾಥ್ ನೀಡಿದರು.

ಕಪ್ಪು ಪಟ್ಟಿ ಧರಿಸಿ ಹಳೆ ಈದ್ಗಾದಲ್ಲಿ ಮುಸಲ್ಮಾನರ ರಂಜಾನ್ ಪ್ರಾರ್ಥನೆ

ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಮಾತನಾಡಿ, ಈ ವರ್ಷ ಯುಗಾದಿ ಮತ್ತು ರಂಜಾನ್ ಒಟ್ಟಿಗೆ ಹಬ್ಬ ಬಂದಿರುವುದರಿಂದ ಸೌಹಾರ್ಧಿತವಾಗಿ ಎಲ್ಲಾರು ಒಟ್ಟಿಗೆ ಆಚರಿಸುತ್ತಿದ್ದೇವೆ. ಹಿಂದಿನಿಂದಲೂ ಕೂಡ ನಾವುಗಳು ಶುಭ ಹಾರೈಸುತ್ತಿದ್ದು, ಹಿಂದೆ ನಮ್ಮ ತಂದೆ ಶಾಸಕರಾಗಿದ್ದಾಗ ಪ್ರತಿ ವರ್ಷ ಇಲ್ಲಿಗೆ ಬಂದು ಶುಭ ಹಾರೈಸುತ್ತಿದ್ದರು. ಈಗ ನಾನು ಶಾಸಕನಾಗಿ ನಿಮ್ಮ ಬಳಿಗೆ ಶುಭಾಶಯ ಹೇಳಲು ಬಂದಿದ್ದೇನೆ ಎಂದರು. ಕೇಂದ್ರ ಸರಕಾರವು ಮುಸಲ್ಮಾನವರ ಬಿಲ್ ಕಾಯಿದೆ ತಿದ್ದುಪಡಿ ತಂದಿದೆ ನಾವು ಕೂಡ ಅದಕ್ಕೆ ವಿರೋಧವ್ಯಕ್ತಪಡಿಸುತ್ತೇನೆ. ಸನ್ಮಾನ್ಯ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡರು ಕೂಡ ಈ ಬಗ್ಗೆ ಗಮನಸೆಳೆಯಲು ಸಂಬಂಧ ಪಟ್ಟ ಕೇಂದ್ರ ಸಚಿವರ ಜೊತೆ ಮಾತುಕತೆ ಮಾಡಿ ಬಿಲ್ ಕಾಯಿದೆಯನ್ನು ವಾಪಸ್ ತೆಗೆದುಕೊಳ್ಳಲು ಹೋರಾಟ ಮಾಡುವುದಾಗಿ ಹೇಳಿದ್ದಾರೆ. ನಾವು ಹಾಸನ ಜಿಲ್ಲೆಯಿಂದ ನಾವು ಮುಸಲ್ಮಾನ ಬಾಂಧವರ ಜೊತೆ ಸೌಹಾರ್ಧಯುತವಾಗಿ ನಡೆದುಕೊಂಡಿದ್ದು, ನಮ್ಮ ತಂದೆ ಹೆಚ್.ಎಸ್. ಪ್ರಕಾಶ್ ಅವರು ಕೂಡ ಇದೆ ಭಾಗದಲ್ಲಿ ನಗರಸಭೆ ಸದಸ್ಯರಾಗಿ ಸಹೋಧರರ ರೀತಿ ಬಂದಿದ್ದೇವೆ. ಈಗಲು ಕೂಡ ಕೂಡ ಜೊತೆಯಲ್ಲಿ ಇರುವುದಾಗಿ ಹೇಳಿದರು.

ಈದ್ಘಾ ಕಮಿಟಿ ಅಧ್ಯಕ್ಷ ಸಮೀರ್ ಖಾನ್ ಮಾತನಾಡಿ, ಸಮಸ್ತ ನಾಗರೀಕ ಬಂಧುಗಳಿಗೆ, ಅಣ್ಣ ತಮ್ಮಂದಿರಿಗೆ ಹಾಗೂ ಅಕ್ಕತಂಗಿಯರಿಗೆ ರಂಜಾನ್ ಮತ್ತು ಯುಗಾದಿ ಹಬ್ಬದ ಶುಭಾಶಯಗಳು. ೩೦ ದಿನಗಳ ಕಾಲ ಉಪವಾಸವನ್ನು ಮಾಡಿ ಕೊನೆಯ ದಿವಸ ಸಾಮೂಹಿಕ ಪ್ರಾರ್ಥನೆಯೊಂದಿಗೆ ರಂಜಾನ್ ಉಪವಾಸ ಮುಕ್ತಾಯಗೊಳ್ಳಲಿದೆ. ಈದಿನ ವಿಶೇಷ ಪ್ರಾರ್ಥನೆಯೊಂದಿಗೆ ಈ ಜಗತ್ತಿನ ಎಲ್ಲಾ ಕೆಡುಕುಗಳಿಗೆ ಅಂತ್ಯವಾಗಲು ಬೇಡಿಕೊಳ್ಳುತ್ತೇವೆ ಎಂದರು. ಥೈಲೆಂಡ್, ಫ್ಯಾರಿಸ್ ನಲ್ಲಿ ನಡೆಯುತ್ತಿರುವ ಅನಾಹುತಗಳು ತಪ್ಪಲಿ ಎಂದು ಈ ವೇಳೆ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ್ದೇವೆ. ಧ್ವೇಷ, ಅಸೂಹೆಯನ್ನು ದೂರವಿಟ್ಟು ನಾವು ಸಹೋಧರರು ನಾವೆಲ್ಲಾ ಒಂದೆ ದೇಶ ಪ್ರೇಮ ಭಾವನೆಯೊಂದಿಗೆ ಉಪವಾಸ ಆಚರಣೆ ಮಾಡಲಾಗುತ್ತದೆ. ಮುಂದಿನ ೧೧ ತಿಂಗಳು ಶಾಂತಿಗಾಗಿ ಸಹೊಧರತ್ವದಿಂದ ಬಾತೃತ್ವದಿಂದ ಬದುಕಬೇಕು ಎಂಬುದು ರಂಜಾನ್ ಹಬ್ಬದ ಪ್ರಾಮುಖ್ಯತೆಯಾಗಿದೆ. ಕಡು ಬಡವರ ಸೇವೆ ಮಾಡುವುದು, ಇದ್ದವರು ಇಲ್ಲದವರಿಗೆ ಕೊಡುವುದು ರಂಜಾನ್ ಹಬ್ಬದ ವಿಶೇಷತೆ ಎಂದು ಹೇಳಿದರು. ಕೇಂದ್ರ ಸರಕಾರ ಜಾರಿಗೆ ತಂದಿರುವ ವಕ್ಫ್ ಮಸೂದೆ ವಿರೋಧಿಸಿ ನಾವುಗಳು ಕಪ್ಪು ಪಟ್ಟಿ ಧರಿಸಿ ಶಾಂತಿಯುತವಾಗಿ ವಿರೋಧವನ್ನು ವ್ಯಕ್ತಪಡಿಸುತ್ತಿದ್ದೇವೆ ಎಂದು ಕಾಯಿದೆ ಕುರಿತು ಇದೆ ವೇಳೆ ವಿರೋಧದ ಮಾತುಗಳನ್ನಾಡಿದರು.

ಹಳೆ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಅಂಗವಾಗಿ ಕಾಂಗ್ರೆಸ್ ಯುವ ಮುಖಂಡರಾದ ಜೆಸಿಬಿ ಚಂದ್ರಶೇಖರ್ ಆಗಮಿಸಿ ಮುಸಲ್ಮಾನರಿಗೆ ಶುಭಾಶಯವನ್ನು ಕೋರಿದರು. ಜಾಗದ ಕೊರತೆಯಿಂದ ಮತ್ತು ತಡವಾಗಿ ಬಂದವರು ಹೊಸಲೈನ್ ರಸ್ತೆ ಮೇಲೆ ನೂರಾರು ಜನ ಮುಸಲ್ಮಾನ ಸಮುದಾಯದವರು ಪ್ರಾರ್ಥನೆ ಸಲ್ಲಿಸಿದರು.

You cannot copy content of this page

Exit mobile version