Home ರಾಜ್ಯ ಹಾಸನ ವಿಮಾನ ನಿಲ್ದಾಣ ಕಾಮಗಾರಿಗೆ ಆಕ್ರೋಶಗೊಂಡ ರೈತರು ಸ್ಥಳಕ್ಕಾಗಮಿಸಿದ ಶಾಸಕ ಸ್ವರೂಪ್ ಪ್ರಕಾಶ್

ವಿಮಾನ ನಿಲ್ದಾಣ ಕಾಮಗಾರಿಗೆ ಆಕ್ರೋಶಗೊಂಡ ರೈತರು ಸ್ಥಳಕ್ಕಾಗಮಿಸಿದ ಶಾಸಕ ಸ್ವರೂಪ್ ಪ್ರಕಾಶ್

ಹಾಸನ: ವಿಮಾನ ನಿಲ್ದಾಣ ಕಾಮಗಾರಿಗೆ ಸಂಬಂಧಿಸಿದಂತೆ ನ್ಯಾಯಾಲಯದ ತಡೆಯಾಜ್ಞೆ ಇರುವ ಜಾಗದಲ್ಲಿ ಕೆಐಎಡಿಬಿ ಅಧಿಕಾರಿಗಳು ಏಕಾಏಕಿ ಕಾಂಪೌಂಡ್ ನಿರ್ಮಾಣ ಮುಂದಾಗಿದ್ದಾರೆ ಎಂದು ಆರೋಪಿಸಿ ರೈತರು ಅಧಿಕಾರಿಗಳೊಂದಿಗೆ ಕೆಲ ಕಾಲ ಮಾತಿನ ಚಕಮಕಿ ನಡೆಸಿದ್ದರಿಂದ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ಪರಿಸ್ಥಿತಿ ನರ‍್ಮಾಣವಾಗಿತ್ತು.

ವಿಮಾನ ನಿಲ್ದಾಣ ಕಾಮಗಾರಿ ವ್ಯಾಪ್ತಿಯಲ್ಲಿ ಬರುವ ಬೂವನಹಳ್ಳಿಯ ರ‍್ವೆ 44/48,44/56 ರಲ್ಲಿ ಭೂ ಮಾಲೀಕರು ಹಾಗೂ ಕೆಐಎಡಿಬಿ ಅಧಿಕಾರಿಗಳ ನಡುವೆ ಪರಿಹಾರದ ವಿಚಾರದಲ್ಲಿ ಗೊಂದಲವಿತ್ತು. ನಿಗಧಿತ ಸ್ಥಳದಲ್ಲಿ ಕಾಮಗಾರಿ ಹೈ ಕೋರ್ಟ್ ತಡೆಯಾಜ್ಞೆ ನೀಡಿದೆ ಆದರೂ ಕ್ಯಾರೆ ಅನ್ನದ ಅಧಿಕಾರಿಗಳು ಇಂದು ಬೆಳ್ಳಂ ಬೆಳಿಗ್ಗೆಯೇ ಕಾಂಪೌಂಡ್ ನರ‍್ಮಾಣ ಕಾಮಗಾರಿಗೆ ಮುಂದಾಗಿರುವುದು ರೈತರನ್ನು ಕೆರಳಿಸಿತು. ಇದರಿಂದ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಶಾಸಕ ಸ್ವರೂಪ್ ಪ್ರಕಾಶ್ ಅವರು ರೈತರು ಹಾಗೂ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದರು. ಈ ವೇಳೆ ಕಾಮಗಾರಿ ನಿಲ್ಲಿಸಲು ಸಾಧ್ಯವಿಲ್ಲ ಎಂದ ವಿಶೇಷ ಭೂ ಸ್ವಾಧೀನಾಧಿಕಾರಿ ವೆಂಕಟರಾಜು ಮಾತಿಗೆ ಕೆರಳಿದ ರೈತರು ಸ್ಥಳದಲ್ಲಿ ಕೆಲಸ ಮಾಡುತ್ತಿದ್ದವರ ವಿರುದ್ಧ ಗರಂ ಆಗಿ ಗಲಾಟೆ ಆರಂಭಿಸಿದರು. ಈ ವೇಳೆ ಎಚ್ಚೆತ್ತ ಅಧಿಕಾರಿಗಳು ಜನವರಿ 22ರ ಬುಧವಾರ ರೈತರ ಸಭೆ ನಡೆಸಿ ರೈತರೊಂದಿಗೆ ಮಾತುಕತೆ ನಡೆಸಿ, ಇರುವ ಸಮಸ್ಯೆ ಇತ್ಯರ್ಥ ಪಡಿಸಿ ನಂತರ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು. ಇದರಿಂದಾಗಿ ಪರಿಸ್ಥಿತಿ ಸದ್ಯ ತಿಳಿಗೊಂಡಿದೆ. ಈ ವೇಳೆ ಶಾಸಕರು ಕೂಡ ಮಾಧ್ಯಮದೊಂದಿಗೆ ಮಾತನಾಡಿ ಕಾಮಗಾರಿ ಬಗ್ಗೆ ತಿಳಿಸಿದರು. ನಂತರ ರೈತರು ಕೂಡ ತಮ್ಮ ನರ‍್ಧಾರವನ್ನು ಮಾಧ್ಯಮದೊಂದಿಗೆ ಹಂಚಿಕಂಡರು.

ಅಧಿಕಾರಿಯ ಉಡಾಫೆ : ಸ್ಥಳದಲ್ಲಿದ್ದ ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿ ವೆಂಕಟರಾಜು ರೈತರೊಂದಿಗೆ ಉಡಾಫೆ ವರ್ತನೆ ತೋರಿಸಿದ್ದು, ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಕೋರ್ಟ್ ತಡೆಯಾಜ್ಞೆ ಪ್ರತಿಯನ್ನು ನೀಡಿದರು ಕೂಡ ಸೌಜನ್ಯಕ್ಕಾದರೂ ತಮ್ಮ ವಾಹನದಿಂದ ಇಳಿಯದೇ ವಾಹನದಲ್ಲಿ ಕುಳಿತು ಕಾಮಗಾರಿ ನಿಲ್ಲಿಸಬೇಡಿ ಮುಂದುವರೆಸಿ ಏನು ಮಾಡುತ್ತಾರೊ ಮಾಡಿಕೊಳ್ಳಲಿ ಎಂದು ಉಡಾಫೆ ಮಾತು ರೈತರನ್ನು ಕೆರಳಿಸಿತ್ತಲ್ಲದೆ ಅಧಿಕಾರಿಯ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತವಾಗಿದೆ ಎಂದು ರೈತರು ದೂರಿದ್ದಾರೆ.

100ಕ್ಕೂ ಹೆಚ್ಚು ಪೊಲೀಸರು ನಿಯೋಜನೆ: ಕಾಮಗಾರಿ ಆರಂಭಿಸುವ ಮೊದಲೆ 100ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ಕೆಐಎಡಿಬಿ ಅಧಿಕಾರಿಗಳು ಕರೆಸಿಕೊಂಡಿದ್ದರು. ರೈತರು ವಿಮಾನ ನಿಲ್ದಾಣ ಕಾಮಗಾರಿಯ ಸದುದ್ದೇಶಕ್ಕಾಗಿ ಜಾಗ ನೀಡಿದ್ದೇವೆ ನಮಗೂ ವಿಮಾನ ನಿಲ್ದಾಣ ಕಾಮಗಾರಿ ಬೇಗ ಪರ‍್ಣಗೊಳ್ಳಬೇಕೆಂಬ ಆಶಯ ಇದೆ ಆದರೆ ಪೊಲೀಸರನ್ನು ಮುಂದಿಟ್ಟುಕೊಂಡು ರೈತರಿಗೆ ಪರಿಹಾರ ನೀಡದೆ ಬೆದರಿಸುವ ತಂತ್ರ ಅನುಸರಿಸಲಾಗುತ್ತಿದೆ ಇದು ರೈತ ಸಮೂಹದ ಮೇಲೆ ರ‍್ಕಾರಗಳು,ನಮ್ಮ ಜನಪ್ರತಿನಿಧಿಗಳು ಇಟ್ಟಿರುವ ಗೌರವಕ್ಕೆ ಹಿಡಿದ ಕೈ ಗನ್ನಡಿ ಎಂದು ರೈತರು ಆಕ್ರೋಶ ಹೊರ ಹಾಕಿದರು.


ಕಣ್ಮುಚ್ಚಿ ಕುಳಿತ ಕೆಪಿಟಿಸಿಎಲ್ ಅಧಿಕಾರಿಗಳು: ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಕಾಂಪೌಂಡ್ ನರ‍್ಮಾಣಕ್ಕಾಗಿ 220ಕೆ.ವಿ ವಿದ್ಯುತ್ ಮರ‍್ಗದ ಅಡಿಯಲ್ಲಿ ಕೆಐಎಡಿಬಿ ಅಧಿಕಾರಿಗಳು ಬೃಹತ್ ಯಂತ್ರಗಳನ್ನು ಬಳಸಿ ಕಾಮಗಾರಿ ನಡೆಸುತ್ತಿದ್ದರೂ ಕೂಡ ನಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಕೆಪಿಟಿಸಿಎಲ್ ಅಧಿಕಾರಿಗಳು ರ‍್ತಿಸಿದ್ದು, ಅವರ ಕರ‍್ಯ ದಕ್ಷತೆಯನ್ನು ಸರ‍್ವಜನಿಕರು ಪ್ರಶ್ನಿಸುವಂತೆ ಮಾಡಿದೆ.

You cannot copy content of this page

Exit mobile version