Saturday, May 4, 2024

ಸತ್ಯ | ನ್ಯಾಯ |ಧರ್ಮ

ಪ್ರಜ್ವಲ್ ರೇವಣ್ಣ ‘ಸೆಕ್ಸ್ ಹಗರಣ’ದ ಬಗ್ಗೆ ಮೋದಿ‌ ಹಾಗೂ ಅವರ ಬೆಂಬಲಿಗ ಮಾಧ್ಯಮಗಳ ಮೌನಕ್ಕೆ ಅರ್ಥವೇನು?

ಕರ್ನಾಟಕದಲ್ಲಿ ಬಿಜೆಪಿಯ ಪಾಲುದಾರ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಗಳು ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ದೇಶದ ರಾಜಕಾರಣವನ್ನು ಅಲ್ಲಾಡಿಸುತ್ತಿವೆ.

ಪ್ರಜ್ವಲ್ ರೇವಣ್ಣ ಅವರು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮೊಮ್ಮಗ. ಹಾಸನ ಲೋಕಸಭೆ ಕ್ಷೇತ್ರದಿಂದ ಮತ್ತೊಮ್ಮೆ ಕಣಕ್ಕೆ ಇಳಿದಿದ್ದಾರೆ. ಈಗಾಗಲೇ ಅಲ್ಲಿ ಮತದಾನ ನಡೆದಿದೆ. ರೇವಣ್ಣ ರಾಸಲೀಲೆ ವಿಚಾರವನ್ನು ಬಿಜೆಪಿ ನಾಯಕತ್ವ ಕಳೆದ ಡಿಸೆಂಬರ್‌ನಲ್ಲಿಯೇ ಮೈತ್ರಿಕೂಟದ ಗಮನಕ್ಕೆ ತಂದಿತ್ತು. ಆದರೆ, ಜೆಡಿಎಸ್ ವರಿಷ್ಠರು ಹಾಸನದಿಂದ ಪ್ರಜ್ವಲ್ ಅವರನ್ನು ಕಣಕ್ಕಿಳಿಸಿದ್ದಾರೆ. ರಾಜ್ಯದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಇವರನ್ನು ಬೆಂಬಲಿಸಿದ್ದರು.

ಪ್ರಜ್ವಲ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪವಿದ್ದರೂ ಪ್ರಧಾನಿ ಮೋದಿ, ರಾಷ್ಟ್ರೀಯ ಮಹಿಳಾ ಆಯೋಗ, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಇದುವರೆಗೂ ಒಂದೇ ಒಂದು ಮಾತನ್ನೂ ಆಡಿಲ್ಲ. ಇನ್ನೊಂದೆಡೆ ಹಲವು ರಾಷ್ಟ್ರೀಯ ವಾಹಿನಿಗಳಲ್ಲಿ ಪ್ರಜ್ವಲ್ ರೇವಣ್ಣ ಕಾಮಕಾಂಡದ ಪ್ರಸ್ತಾಪವೇ ಇಲ್ಲದಿರುವುದು ಗಮನಾರ್ಹ.

ಆಂಕರ್ ರುಬಿಕಾ ಲಿಯಾಕತ್ ಸೋಮವಾರ ರಾತ್ರಿ ನ್ಯೂಸ್ 18 ಇಂಡಿಯಾ ಚಾನೆಲ್‌ನಲ್ಲಿ ಎರಡು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಅದರಲ್ಲಿ ಒಂದರಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಚರ್ಚೆ ನಡೆದಿದೆ. ಇನ್ನೊಂದರಲ್ಲಿ ಮೋದಿಯವರು ಆ ವಾಹಿನಿಗೆ ನೀಡಿದ ಸಂದರ್ಶನದ ಕುರಿತು ಚರ್ಚಾ ಕಾರ್ಯಕ್ರಮ ನಡೆಯಿತು. ಆ ಕಾರ್ಯಕ್ರಮದಲ್ಲಿ ರುಬಿಕಾ ಮೋದಿಯನ್ನು ಹೊಗಳಿದರು. ಮೋದಿಯನ್ನು ‘ಬಿಜೆಪಿ ಕಿ ಜೀತ್ ಕಾ ಬ್ರಹ್ಮಾಸ್ತ್ರ’ ಎಂದು ಬಣ್ಣಿಸಲಾಗಿದೆ. ಮೋದಿ ಮಾತನಾಡಿದಾಗಲೆಲ್ಲ ಅವರ ವಿರೋಧಿಗಳು ಆಘಾತದಿಂದ ಮೌನವಾಗುತ್ತಾರೆ ಎಂದು ಆ ಕಾರ್ಯಕ್ರಮದಲ್ಲಿ ಹೇಳಿದ್ದರು.

ಇನ್ನೊಂದು ಅಚ್ಚರಿಯ ಸಂಗತಿ ಎಂದರೆ ಪ್ರಜ್ವಲ್ ರೇವಣ್ಣ ಘಟನೆ ಆ ದಿನದ ಟಾಪ್ 50 ಸುದ್ದಿಗಳಲ್ಲಿ ಸ್ಥಾನ ಪಡೆದಿಲ್ಲ
.
ಅ‌ಜ್ ತಕ್ ನ್ಯೂಸ್ ಚಾನೆಲ್ ನಿರೂಪಕರಾದ ಚಿತ್ರಾ ತ್ರಿಪಾಠಿ ಮತ್ತು ಅಂಜನಾ ಓಂ ಕಶ್ಯಪ್ ತಮ್ಮ ಕಾರ್ಯಕ್ರಮಗಳಲ್ಲಿ ರೇವಣ್ಣನ ಘಟನೆಯನ್ನು ಉಲ್ಲೇಖಿಸಿಲ್ಲ. ಶ್ವೇತಾ ಸಿಂಗ್ ಲೈಂಗಿಕ ಹಗರಣದ ಸುದ್ದಿಗೆ ಕೇವಲ ಎರಡು ನಿಮಿಷಗಳನ್ನು ಮೀಸಲಿಟ್ಟರು. ಟೈಮ್ಸ್ ನೌ ಚಾನೆಲ್‌ನಲ್ಲಿ ಆ್ಯಂಕರ್ ನಾವಿಕಾ ಕೇಂದ್ರ ಗೃಹ ಸಚಿವ ಅಮಿತ್ ಶಾ ನಕಲಿ ವೀಡಿಯೊ ಕುರಿತು ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ಆದರೆ ಆಂಗ್ಲ ಕಾರ್ಯಕ್ರಮದಲ್ಲಿ
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಕುರಿತು ಹದಿನೈದು ನಿಮಿಷಗಳ ಕಾಲ ಕಾರ್ಯಕ್ರಮ ನಡೆಸಿಕೊಟ್ಟರು. ಘಟನೆ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರನ್ನು ಪ್ರಶ್ನಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು