Home ರಾಜಕೀಯ ಮೋದಿ ಸಾರ್ವಜನಿಕ ಜೀವನದಲ್ಲಿ ಇರುವುದಕ್ಕಷ್ಟೇ ಅಲ್ಲ, ಮನುಷ್ಯನಾಗಿರುವುದಕ್ಕೂ ನಾಲಾಯಕ್‌- ನಟ ಹುಲಿ ಕಿಶೋರ್

ಮೋದಿ ಸಾರ್ವಜನಿಕ ಜೀವನದಲ್ಲಿ ಇರುವುದಕ್ಕಷ್ಟೇ ಅಲ್ಲ, ಮನುಷ್ಯನಾಗಿರುವುದಕ್ಕೂ ನಾಲಾಯಕ್‌- ನಟ ಹುಲಿ ಕಿಶೋರ್

0

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಸಾಮಾಜಿಕ ಮತ್ತು ಸೆಕ್ಯುಲರ್‌ ಪ್ರಜ್ಞೆಯ ಪೋಸ್ಟುಗಳಿಂದ ಖ್ಯಾತರಾಗಿರುವ ಬಹುಭಾಷಾ ಚಿತ್ರತಾರೆ ಹುಲಿ ಕಿಶೋರ್‌ ಕುಮಾರ್‌ ಅವರು ಮತ್ತೊಮ್ಮೆ ಪ್ರಧಾನಿ ಮೋದಿಯವರನ್ನು ಟೀಕಿಸುವ ಮೂಲಕ ಸುದ್ದಿಯ್ಲಲಿದ್ದಾರೆ.

ಈ ಬಾರಿ ಅವರು ಮೋದಿ “ನಾನು ಹಿಂದೂ-ಮುಸ್ಲಿಂ ರಾಜಕೀಯ ಮಾಡಿದ್ದಲ್ಲಿ ಸಾರ್ವಜನಿಕ ಬದುಕಿನಲ್ಲಿ ಇರುವುದಕ್ಕೇ ಲಾಯಕ್ಕಾದ ವ್ಯಕ್ತಿಯಲ್ಲ. ಅಂತಹ ದಿನ ಬಂದರೆ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ” ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಟ ಕಿಶೋರ್‌ “ನೀವು ಸಾರ್ವಜನಿಕ ಬದುಕಿಗಷ್ಟೇ ಅಲ್ಲ, ಮನುಷ್ಯ ಎನ್ನಿಸಿಕೊಳ್ಳಲು ಕೂಡಾ ಯೋಗ್ಯ ವ್ಯಕ್ತಿಯಲ್ಲ” ಎಂದು ಕಟುವಾಗಿ ಟೀಕಿಸಿದ್ದಾರೆ. ಈ ಕುರಿತು ಎಫ್‌ ಬಿ ಮತ್ತು ಇನ್ಸ್ಟಾಗ್ರಾಮ್‌ ಸೋಷಿಯಲ್‌ ಮೀಡಿಯಾ ವೇದಿಕೆಗಳಲ್ಲಿ ಅವರು ಪೋಸ್ಟ್‌ ಮಾಡಿದ್ದಾರೆ.

ಮುಂದುವರೆದು ತಮ್ಮ ಪೋಸ್ಟಿನಲ್ಲಿ ಮೋದಿಯವರಿಗೆ ನಿಮ್ಮ ಹತ್ತು ವರ್ಷಗಳ ಸಾಧನೆ ಏನೆನ್ನುವುದನ್ನು ವಿವರಿಸಿ ಎಂದೂ ಕೇಳಿದ್ದಾರೆ.

ಕಿಶೋರ್‌ ತಮ್ಮ ಪೋಸ್ಟಿನಲ್ಲಿ “ನಿಜ ನೀವು ಸಾರ್ವಜನಿಕ ಜೀವನಕ್ಕಷ್ಟೇ ಅಲ್ಲ , ಮನುಷ್ಯ ಎನ್ನಿಸಿಕೊಳ್ಳುವುದಕ್ಕೂ ಯೋಗ್ಯರಲ್ಲ.. ನಿಮ್ಮಂಥವರ ಬಾಯಲ್ಲಿ ಮರ್ಯಾದಾ ಪುರುಷೋತ್ತಮ ರಾಮನ ಹೆಸರೂ ಬರುವುದು ಸಹ ಮಹಾಪಾಪ. ಚಿಲ್ಲರೆ ಕಳ್ಳನನ್ನೂ ನಾಚಿಸುವ, ಸತ್ಯ ಸಿದ್ಧಾಂತ ನೈತಿಕತೆ ವ್ಯಕ್ತಿತ್ವ ಅದಾವುದೂ ಇಲ್ಲದ ವಿಶ್ವ ಕಂಡ ಅತೀ ಸುಳ್ಳುಗಾರ, ಅತೀ ಪುಕ್ಕಲು, ಅತೀ ನಿಕೃಷ್ಠ, ಅತೀ ದುರಹಂಕಾರಿ, ಅತೀ ಕ್ರೂರ, ಅತೀ ಮೂರ್ಖ, ಅತೀ ಸಂವೇದನಾಹೀನ, ಅತೀ ಘನತೆಹೀನ, ಅತೀ ಆತ್ಮರತಿಲೋಲ, ಅತೀ ಜನವಿರೋಧಿ, ಅತೀ ಹೊಲಸು ನಾಲಿಗೆಯ, ಅತೀ ಸಂಕುಚಿತ ದೃಷ್ಟಿಯ, ಅತೀ ಅಪಾಯಕಾರಿ, ಅತೀ ಭ್ರಷ್ಟ ನಿರಂಕುಶ ಪ್ರಭುತ್ವವಾದಿ ಎಂದು ಆಧಾರಸಹಿತ ಆ ಮನುಷ್ಯನೇ (?) ಹೇಳಿಬಿಡುತ್ತಾನೆ ಬೇಕಿದ್ದರೆ ಅವನ ನಡೆ ನುಡಿಯನ್ನು ನೋಡಿ.

10 ವರ್ಷ ಅಧಿಕಾರವಿದ್ದೂ ಮಾಡಿದ ಕೆಲಸದ ಬಗ್ಗೆ, ರೈತರ, ಸೈನಿಕರ, ಮಹಿಳೆಯರ, ಮಕ್ಕಳ, ಆಸ್ಪತ್ರೆ ಕಾಲೇಜುಗಳ ಅಭಿವೃದ್ಧಿಯ ಬಗ್ಗೆ ಮಾತಾಡಲು ಯೋಗ್ಯತೆಯಿಲ್ಲದೇ.. ಬರೀ ಸುಳ್ಳು, ದ್ವೇಷ ಕಾರುವುದು. ಮುಸ್ಲಿಂ ತೆರಿಗೆಯಂತೆ , ನುಸುಳುಕೋರರಂತೆ, ಪಾಕೀಸ್ಥಾನವಂತೆ, ರೂಮು ಕಿತ್ಕೊತಾರಂತೆ, ಎಮ್ಮೆ ಕಿತ್ಕೊತಾರಂತೆ, ಸೈಕಲ್ ಕಿತ್ಕೊತಾರಂತೆ, ವೋಟು ಜಿಹಾದ್ ಅಂತೆ, ಮಂದಿರಕ್ಕೆ ಬೀಗವಂತೆ … ಬರೀ ತಲೆಬುಡವಿಲ್ಲದ ಮಾತುಗಳು. ಮುಸ್ಲಿಂ ಬಯೋತ್ಪಾದಕರು ಇಸ್ಲಾಂನ ಮಾನ ಕಳೆದಂತೆ ಅಧಿಕಾರಕ್ಕಾಗಿ ಹಿಂದೂ ಬಣ್ಣ ಬಳಿದುಕೊಂಡ ಈ ಢೋಂಗಿ ಮನುಷ್ಯ ಹಿಂದೂ ಧರ್ಮದ ಮಾನ ವಿಶ್ವದಾದ್ಯಂತ ಮೂರು ಕಾಸಿಗೆ ಹರಾಜು ಹಾಕಿಬಿಟ್ಟ” ಎಂದು ಬರೆದುಕೊಂಡಿದ್ದಾರೆ.

ಹೀಗೆ ಏಕವಚನದಲ್ಲೇ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ನಟ ಈ ಹಿಂದೆಯೂ ಮೋದಿಯನ್ನು ಹಲವು ವಿಷಯಗಳಿಗೆ ನೇರವಾಗಿ ತರಾಟೆಗೆ ತೆಗೆದುಕೊಂಡು ಟ್ರೋಲ್‌ಗಳಿಂದ ದಾಳಿಗೂ ಒಳಗಾಗಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿನ ಜಾತ್ಯಾತೀತ ತತ್ವ ಮತ್ತು ಸಮಾನತೆಯಲ್ಲಿ ನಂಬಿಕೆಯಿಟ್ಟಿರುವ ಜನರು ಪ್ರಕಾಶ್‌ ರೈ, ಕಿಶೋರ್‌ ಅವರಂತಹ ಪ್ರಜ್ಞಾವಂತ ಕಲಾವಿದರನ್ನು ಬೆಂಬಲಿಸುತ್ತಾ ಬಂದಿದ್ದಾರೆ.

ಅಗತ್ಯವಿರುವಾಗ ದನಿಯೆತ್ತಿ ಮಾತನಾಡದ ಯಾವುದೇ ಕಲಾವಿದ ಇದ್ದೂ ಸತ್ತಂತೆ. ಕಿಶೋರ್‌, ಪ್ರಕಾಶ್‌ ರೈ, ಸಿದ್ಧಾರ್ಥ್ ಅವರಂತಹ ನಟರು ಸಮಾಜದ ದಿಟ್ಟ ದನಿಗಳು ಅವರಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ಕಿಶೋರ್‌ ಅವರ ಹೆಸರು ಹೇಳಲು ಇಚ್ಛಿಸದ ಅಭಿಮಾನಿಯೊಬ್ಬರು ಪೀಪಲ್‌ ಮೀಡಿಯಾಕ್ಕೆ ತಿಳಿಸಿದ್ದಾರೆ.

Exit mobile version