Home ದೆಹಲಿ  ಕ್ರಿಸ್ಮಸ್‌ ಹಬ್ಬದ ಹಿನ್ನೆಲೆ ದೇಶದ ಜನತೆಗೆ ಶುಭಾಶಯ ತಿಳಿಸಿದ ಮೋದಿಜಿ

 ಕ್ರಿಸ್ಮಸ್‌ ಹಬ್ಬದ ಹಿನ್ನೆಲೆ ದೇಶದ ಜನತೆಗೆ ಶುಭಾಶಯ ತಿಳಿಸಿದ ಮೋದಿಜಿ

0

ನವದೆಹಲಿ : ಇಂದು ಜಗತ್ತಿನಾದ್ಯಂತ ಯೇಸುಕ್ರಿಸ್ತನ ಜನನವನ್ನು ಗುರುತಿಸುವ ಕ್ರಿಸ್‌ಮಸ್ ಹಬ್ಬವನ್ನು (Christmas) ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕ್ರಿಸ್ಮಸ್‌ ಹಬ್ಬದ ಹಿನ್ನೆಲೆ ದೇಶದ ಜನತೆಗೆ ಶುಭಾಶಯವನ್ನು ಹೇಳಿದ್ದಾರೆ.

ಎಕ್ಸ್‌ ಪೋಸ್ಟ್‌ನಲ್ಲಿ ಬರೆದಿರುವ ಪ್ರಧಾನಿ ನರೇಂದ್ರ ಮೋದಿ, ಎಲ್ಲರಿಗೂ ಶಾಂತಿ, ಕರುಣೆ ಮತ್ತು ಭರವಸೆಯಿಂದ ತುಂಬಿದ ಸಂತೋಷದಾಯಕ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು. ಯೇಸು ಕ್ರಿಸ್ತನ ಬೋಧನೆಗಳು ನಮ್ಮ ಸಮಾಜದಲ್ಲಿ ಸಾಮರಸ್ಯವನ್ನು ಬಲಪಡಿಸಲಿ ಎಂದಿದ್ದಾರೆ. ಇದರೊಂದಿಗೆ ಪ್ರಧಾನಿ ಮೋದಿ ಅವರು ಇಂದು ಬೆಳಗ್ಗೆ ದೆಹಲಿಯ ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಶನ್‌ನಲ್ಲಿ ಕ್ರಿಶ್ಚಿಯನ್ ಸಮುದಾಯದ ದೊಡ್ಡ ಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿ ದೆಹಲಿಯ ಬಿಷಪ್ ರೆವರೆಂಡ್ ಡಾ. ಪಾಲ್ ಸ್ವರೂಪ್ ಅವರಿಂದ ಪ್ರಧಾನ ಮಂತ್ರಿಗಾಗಿ ವಿಶೇಷ ಪ್ರಾರ್ಥನೆ, ಕ್ಯಾರೋಲ್‌ಗಳು, ಸ್ತುತಿಗೀತೆಗಳು ಸೇರಿತ್ತು.

ಈ ಬಗ್ಗೆ ಎಕ್ಸ್‌ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡ ಪ್ರದಾನಿ ಮೋದಿ, ದೆಹಲಿಯ ದಿ ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಶನ್‌ನಲ್ಲಿ ಕ್ರಿಸ್‌ಮಸ್ ಬೆಳಗಿನ ಸೇವೆಯಲ್ಲಿ ಭಾಗವಹಿಸಿದ್ದೆ. ಈ ಸೇವೆಯು ಪ್ರೀತಿ, ಶಾಂತಿ ಮತ್ತು ಸಹಾನುಭೂತಿಯ ಕಾಲಾತೀತ ಸಂದೇಶವನ್ನು ಪ್ರತಿಬಿಂಬಿಸಿತು. ಕ್ರಿಸ್‌ಮಸ್‌ನ ಚೈತನ್ಯವು ನಮ್ಮ ಸಮಾಜದಲ್ಲಿ ಸಾಮರಸ್ಯ ಮತ್ತು ಸದ್ಭಾವನೆಯನ್ನು ಪ್ರೇರೇಪಿಸಲಿ ಎಂದು ಬರೆದಿದ್ದಾರೆ.

You cannot copy content of this page

Exit mobile version