Home ರಾಜ್ಯ ರಾಜ್ಯದಲ್ಲಿನ 17 ಸಾವಿರಕ್ಕೂ ಹೆಚ್ಚಿನ ಸರ್ಕಾರಿ ಶಾಲೆಗಳಿಗೆ ಹಕ್ಕುಪತ್ರ ಇಲ್ಲ: ಪುರುಷೋತ್ತಮ ಬಿಳಿಮಲೆ

ರಾಜ್ಯದಲ್ಲಿನ 17 ಸಾವಿರಕ್ಕೂ ಹೆಚ್ಚಿನ ಸರ್ಕಾರಿ ಶಾಲೆಗಳಿಗೆ ಹಕ್ಕುಪತ್ರ ಇಲ್ಲ: ಪುರುಷೋತ್ತಮ ಬಿಳಿಮಲೆ

0

ರಾಜ್ಯದಲ್ಲಿ ಸುಮಾರು 17 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಹಕ್ಕುಪತ್ರವೇ ಇಲ್ಲ ಎಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆಯವರು ಹೇಳಿದ್ದಾರೆ. ಸರ್ಕಾರಿ ಶಾಲೆಗಳಿಗೆ ಸಂಬಂಧಿಸಿದ ಭೂಮಿಗೆ ಈವರೆಗೆ ಯಾವುದೇ ಹಕ್ಕು ವಿತರಣೆಯಾಗಿಲ್ಲ ಎಂದು ಹೇಳಿದರು.

ಈಗಾಗಲೇ ಅರಣ್ಯ ಇಲಾಖೆ ದಾಖಲೆ ಇಲ್ಲದ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ಕೈಗೊಂಡಿರುವಾಗ ಸರ್ಕಾರಿ ಶಾಲೆಗಳಿಗೆ ಭೂಮಿ ಹಕ್ಕು ಕಳೆದುಕೊಳ್ಳಲಿವೆ. ಹಕ್ಕುಪತ್ರ ವಿತರಣೆ ಆದಲ್ಲಿ ಮಾತ್ರ ಸರ್ಕಾರಿ ಶಾಲೆಗಳ ಜಮೀನು ಉಳಿಯಲಿದೆ ಎಂದು ಪುರುಷೋತ್ತಮ ಬಿಳಿಮಲೆಯವರು ಆತಂಕ ವ್ಯಕ್ತಪಡಿಸಿದರು.

ಹಕ್ಕುಪತ್ರವಿಲ್ಲದ ಹಲವಾರು ಶಾಲೆಗಳ ಜಮೀನನ್ನು ಈಗಾಗಲೇ ಕಬ್ಬಾ ಮಾಡಿಕೊಳ್ಳಲಾಗಿದೆ. ಒಂದಷ್ಟು ಶಾಲೆಗಳೇ ಮುಚ್ಚುವ ಪರಿಸ್ಥಿತಿಯಿದ್ದು, ಹಾಗಾದಾಗ ಹಕ್ಕುಪತ್ರವಿಲ್ಲದಿದ್ದರೆ ಜಮೀನು ಪರಭಾರೆಯಾಗುವ ಅಪಾಯವಿದೆ ಇದಕ್ಕೆ ಅವಕಾಶ ಕೊಡಬಾರದು ಎಂದು ಹೇಳಿದ್ದಾರೆ.

You cannot copy content of this page

Exit mobile version