ಹಾಸನ : ಎರಡುಕಿಡ್ನಿಗಳ ವೈಪಲ್ಯದಿಂದ ಬಳುತ್ತಿರುವ ಮಗನಿಗೆ ಕಿಡ್ನಿ ಶಸ್ತ್ರಚಿಕಿತ್ಸೆಗೆ ಸುಮಾರು 2೦ ರಿಂದ 3೦ ಲಕ್ಷ ರೂ. ಗಳ ಅಗತ್ಯವಿದ್ದು ಆರ್ಥಿಕ ನೆರವು ನೀಡುವಂತೆ ತಾಯಿ ಜ್ಯೋತಿ ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ತಾಲೂಕಿನ ರಾಯರಕೊಪ್ಪಲಿನ ಮಗ್ಗೆ ಗ್ರಾಮದವರಾಗಿದ್ದು, ಹಿರಿಮಗ 27 ವರ್ಷದ ವಿಶ್ವಾಸ್ ಎಂಬಾತನಿಗೆ ಕಳೆದ ಒಂದು ತಿಂಗಳಿನಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಹುಟ್ಟಿದಾಗಿನಿಂದ ಒಂದು ಕಿಡ್ನಿಯ ಬೆಳೆವಣಿಗೆಯಾಗದೆ ಕೇವಲ ಒಂದು ಕಿಡ್ನಿಯಲ್ಲಿ ಜೀವನ ನಡೆಸುತ್ತಿದ್ದಾನೆ ಆದರೇ ಇದೀಗ ಎರಡುಕಿಡ್ನಿಯು ವೈಫಲ್ಯವಾಗಿದೆ.
ವಾರದಲ್ಲಿ ಎರಡು ಬಾರಿ ಡಯಾಲಿಸಿಸ್ ಮಾಡಲಾಗುತ್ತಿದ್ದು ಸುಮಾರು 2 ಲಕ್ಷ ರೂ ಖರ್ಚಾಗಿದೆ ಎಂದ ಅವರು, ಆರ್ಥಿಕವಾಗಿ ಬಡವರಾಗಿದ್ದು, ರಸ್ತೆ ಬದಿಯಲ್ಲಿ ಮೊಬೈಲ್ ಕ್ಯಾಂಟಿನ್ ನಡೆಸಿಕೊಂಡು ಜೀವನ ನಡೆಸುತ್ತಿದ್ದೇವೆ ಎಂದರು.
ಶಸ್ತ್ರಚಿಕಿತ್ಸೆಗೆ ಸುಮಾರು20 ರಿಂದ 30 ಲಕ್ಷ ರೂ ಅಗತ್ಯವಿದ್ದು, ಧಾನಿಗಳು ಸಹಾಯ ಮಾಡುವಂತೆ ಮನವಿ ಮಾಡಿದರು.
9100794372 ವಿಶ್ವಾಸ ಗೂಗಲ್ ಪೇ. ಫೋನ್ ಪೇ
ವಿಶ್ವಾಸ್, ಶೆಶೇಗೌಡ ಹಾಜರಿದ್ದರು.
