Home ಬೆಂಗಳೂರು ಮುಡಾ ವಿವಾದ: ಎಲ್ಲರ ಕಣ್ಣು ರಾಜಭವನದತ್ತ

ಮುಡಾ ವಿವಾದ: ಎಲ್ಲರ ಕಣ್ಣು ರಾಜಭವನದತ್ತ

0

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದ ನಿವೇಶನ ಹಂಚಿಕೆ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪ್ರಾಸಿಕ್ಯೂಷನ್‌ಗೆ ಮಂಜೂರಾತಿ ಕೋರಿ ಸಲ್ಲಿಸಲಾಗಿರುವ ಅರ್ಜಿಯ ಕುರಿತು ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿರುವುದರಿಂದ ಎಲ್ಲರ ಕಣ್ಣು ರಾಜಭವನದತ್ತ ನೆಟ್ಟಿದೆ.

ದೆಹಲಿ ಭೇಟಿಯ ನಂತರ ಗೆಹ್ಲೋಟ್ ಭಾನುವಾರ ಬೆಂಗಳೂರಿಗೆ ಮರಳಿದರು.

ಮಂಗಳವಾರ ಸಿದ್ದರಾಮಯ್ಯ ಅವರು ಕೊಪ್ಪಳ ಮತ್ತು ವಿಜಯನಗರ ಭೇಟಿಯನ್ನು ರದ್ದುಗೊಳಿಸಿದ್ದು, ಗೆಹ್ಲೋಟ್ ಅವರು ನಡೆ ಹೇಗಿರಬಹುದು ಎನ್ನುವ ಕುರಿತು ಊಹಾಪೋಹಗಳಿಗೆ ಪುಷ್ಟಿ ನೀಡಿದೆ.

ಕಾರ್ಯಕರ್ತ ಟಿಜೆ ಅಬ್ರಹಾಂ ಅವರು ಗೆಹ್ಲೋಟ್‌ಗೆ ಪ್ರಾಸಿಕ್ಯೂಷನ್ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಗೆಹ್ಲೋಟ್ ಅವರು ಜುಲೈ 26ರಂದು ಸಿದ್ದರಾಮಯ್ಯ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದರು. ಆಗಸ್ಟ್ 1ರಂದು ಸಚಿವ ಸಂಪುಟವು ಶೋಕಾಸ್ ನೋಟಿಸ್ ಅನ್ನು ಹಿಂತೆಗೆದುಕೊಳ್ಳುವಂತೆ ರಾಜ್ಯಪಾಲರಿಗೆ ಸಲಹೆ ನೀಡಿತು.

ಒಂದು ವೇಳೆ ಗೆಹ್ಲೋಟ್ ಅವರು ಸಿದ್ದರಾಮಯ್ಯ ಅವರ ಪ್ರಾಸಿಕ್ಯೂಷನ್ ಪ್ರಕ್ರಿಯೆಗೆ ಅನುಮೋದಿಸಿದರೆ ಕಾನೂನು ಹೋರಾಟ ನಡೆಸಲು ಕಾಂಗ್ರೆಸ್ ಸರ್ಕಾರ ಸಿದ್ಧವಾಗಿದ್ದು, ರಾಜಭವನವು ಮುಡಾ ಹಗರಣದ ಸ್ವತಂತ್ರ ತನಿಖೆಗೆ ಆದೇಶಿಸುವುದು ಮತ್ತು ನಿಗದಿತ ಅವಧಿಯಲ್ಲಿ ಲೋಕಾಯುಕ್ತರಿಗೆ ವರದಿ ಕೇಳುವುದು ಸೇರಿದಂತೆ ಇತರ ಆಯ್ಕೆಗಳನ್ನು ಹುಡುಕುತ್ತಿದೆ ಎಂದು ಹೇಳಲಾಗಿದೆ.

You cannot copy content of this page

Exit mobile version