ಧರ್ಮರಕ್ಷಕ ಸ್ವಾಮಿ ಎಂಬ ಹಣೆಪಟ್ಟಿ ಹೊತ್ತ ಋಷಿ ಕುಮಾರ ಮತ್ತು ಆತನ ಸಹಚರ ಎಂದು ಗುರುತಿಸಿಕೊಂಡಿರುವ ಸುರೇಶ್ ಕುಮಾರ್ ಎಂಬ ವ್ಯಕ್ತಿ ಇಬ್ಬರೂ ದೂರವಾಣಿಯಲ್ಲಿ ಮಾತನಾಡಿಕೊಂಡ ಆಡಿಯೋ ಒಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಡಿಯೋದಲ್ಲಿ ಅಹೋರಾತ್ರ ಎಂಬ ವ್ಯಕ್ತಿಯ ಹತ್ಯೆಗೆ? ಸಂಬಂಧಿಸಿದಂತೆ ಇಬ್ಬರೂ ಮಾತನಾಡಿದ ಸ್ಪೋಟಕ ವಿಚಾರಗಳು ಬೆಳಕಿಗೆ ಬಂದಿದೆ.
ಹಿನ್ನೆಲೆ: ವೃಕ್ಷ ರಕ್ಷ ಎಂಬ ಸಂಸ್ಥೆ ಮೂಲಕ ಪರಿಸರ ರಕ್ಷಣೆ ಕಾರ್ಯ ಮಾಡುವ ಹೋರಾತ್ರ ಎಂಬುವವರು ಇತ್ತೀಚಿಗೆ ಮಠ ಸಿನಿಮಾ ವಿರುದ್ಧ ಧ್ವನಿ ತೆಗೆದ ಋಷಿಕುಮಾರನನ್ನು ಟೀಕಿಸಿದ್ದರು. ಅಲ್ಲದೆ ವೇಶ್ಯಾವಾಟಿಕೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿರುವ ಪುನೀತ್ ಕೆರೆಹಳ್ಳಿ ಎಂಬಾತನಿಗೆ ಬೆಂಬಲ ನೀಡುತ್ತಿರುವುದನ್ನು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಋಷಿಕುಮಾರ ಮತ್ತು ಸುರೇಶ್ ಕುಮಾರ ಎಂಬುವವರ ನಡುವೆ ನಡೆದ ಮಾತುಕತೆಯ ಆಡಿಯೋ ಈಗ ವೈರಲ್ ಆಗಿದೆ.
35 ನಿಮಿಷಗಳ ಇವರಿಬ್ಬರ ಸಂಭಾಷಣೆಯಲ್ಲಿ ಋಷಿಕುಮಾರ ಮತ್ತು ಸುರೇಶ್ ಕುಮಾರ ಇಬ್ಬರೂ ಅಹೋರಾತ್ರ ಎಂಬ ವ್ಯಕ್ತಿಯ ಮೇಲೆ ಹೇಗೆ ಹಲ್ಲೆ ನಡೆಸಬೇಕು, ಯಾವ ರೀತಿಯಲ್ಲಿ ಹತ್ಯೆ ಮಾಡಬೇಕು ಎಂದು ನಡೆಸಿದ ಮಾತುಕತೆ ಭೀಕರವಾಗಿದೆ. ತನಗೆ ಆಗದ, ತನ್ನ ವಿರುದ್ಧ ನಡೆಯುವ ಎಂತಹವರನ್ನೂ ಮಟ್ಟ ಹಾಕಬೇಕು, ಇವರನ್ನು ಬೆಳೆಯಲು ಬಿಡಬಾರದು ಎನ್ನುವ ಅಂಶಗಳನ್ನು ಒತ್ತಿ ಹೇಳುವ ಋಷಿಕುಮಾರ ಅಹೋರಾತ್ರರನ್ನು ಹೇಗೆ ‘ಹೊಡೆಯಬೇಕು’ ಎಂಬುದರ ಕುರಿತೇ 35 ನಿಮಿಷಗಳ ಕಾಲ ಮಾತನಾಡಿದ್ದಾರೆ.
ಆಡಿಯೋ ಸಂಭಾಷಣೆಯ ಅಷ್ಟೂ ಮಾತುಕತೆಯಲ್ಲಿ ಋಷಿಕುಮಾರ ಎಂಬ ಸ್ವಾಮೀಜಿ ವೇಷದ ವ್ಯಕ್ತಿ ಅತ್ಯಂತ ಕೆಟ್ಟ ಮತ್ತು ತುಚ್ಛ ಪದಗಳ ಬಳಕೆಯನ್ನು ಮಾಡಿದ್ದಾನೆ. ಜೊತೆಗೆ ತಾನು ಮಾತನಾಡುವುದೇ ಹೀಗೆ, ನಾನೊಂತರಾ ಡಿಫರೆಂಟ್ ಸ್ವಾಮೀಜಿ ಎಂದು ತನ್ನ ಪದ ಬಳಕೆಯನ್ನು ಸಮರ್ಥಿಸಿಕೊಂಡಿದ್ದಾನೆ. ಮಾತುಕತೆಯ ಅಷ್ಟೂ ಹೊತ್ತು ಹೆಣ್ಣಿನ ಸಂಬಂಧಿತ ಬೈಗುಳಗಳು, ಅಮ್ಮನ್, ಅಕ್ಕನ್ ಪದಗಳೇ ಹೆಚ್ಚು ಮಾತನಾಡಿದ್ದು ಒಬ್ಬ ಕಾವಿಧಾರಿ ವ್ಯಕ್ತಿ ಇಷ್ಟು ಕೆಳಮಟ್ಟಕ್ಕೂ ಇಳಿಯಬಲ್ಲನೇ ಎಂಬಂತೆ ಯೋಚಿಸುವಂತಿದೆ.
ಸಂಭಾಷಣೆಯಲ್ಲಿ ಅಹೋರಾತ್ರನನ್ನು ಹೊಡೆಯುವ ಬಗ್ಗೆ ಮಾತನಾಡುತ್ತಾ “ಆಹೋರಾತ್ರನನ್ನು ಕಡಿದು ತುಂಡುತುಂಡು ಮಾಡಿ ಮಾವಿನಮರದ ಕೆಳಗೆ ಕೂತುಹಾಕಬೇಕು, ಆಹೋರಾತ್ರನ್ನ ಉಪಾಯವಾಗಿ ಹೊರಗೆ ಕರೆದುಕೊಂಡು ಬರಬೇಕು” ಎಂಬ ಮಾತನ್ನು ಋಷಿಕುಮಾರ ಆಗಿದ್ದಾನೆ. ನಂತರ ಹೊಡೀಬೇಕು ಹೂತು ಹಾಕಬೇಕು ಎಂಬ ಮಾತುಗಳು ಭೀಕರವಾಗಿದೆ.
ಜಾಲತಾಣಗಳಲ್ಲಿ ಅಹೋರಾತ್ರರ ಹತ್ಯೆ ಮತ್ತು ಹಲ್ಲೆಗೆ ಸಂಬಂಧಿಸಿದ ಸಂಚಿನ ಆಡಿಯೋ ವೈರಲ್ ಆಗಿದ್ದರೂ ಋಷಿಕುಮಾರ ಮತ್ತು ಸುರೇಶ್ ಕುಮಾರ ಎಂಬುವವನ ಮೇಲೆ ಇಲ್ಲಿಯವರೆಗೂ ಪ್ರಕರಣ ದಾಖಲಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಈ ಬಗ್ಗೆ ಅಹೋರಾತ್ರರನ್ನು ಪೀಪಲ್ ಮೀಡಿಯಾ ಸಂಪರ್ಕಿಸಲು ಪ್ರಯತ್ನಿಸಿದರೂ ಸಂಪರ್ಕ ಲಭ್ಯವಾಗಿಲ್ಲ.