ಸಾಧುಗಳಂತೆ ಕೇಸರಿ ಬಟ್ಟೆ ತೊಟ್ಟು ಮೂವರಲ್ಲಿ ಓರ್ವ ವ್ಯಕ್ತಿ ಹಿಂದೂ ಧರ್ಮದ ಬಗ್ಗೆ ಪ್ರಶ್ನೆ ಮಾಡುತ್ತಾನೆ. ಅವರು ಸರಿಯಾದ ಉತ್ತರವನ್ನು ನೀಡುವುದಿಲ್ಲ. ಹಾಗಾಗಿ ಈ ಹಿಂದೂ ಸನ್ಯಾಸಿಗಳಂತೆ ವೇಷ ಧರಿಸಿರುವವರು ಮುಸ್ಲಿಮರು ಎಂಬ ಒಂದು ವೀಡಿಯೋ ವೈರಲ್ ಆಗಿತ್ತು.
ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಈ ಕೇಸರಿ ಬಟ್ಟೆ ತೊಟ್ಟಿರುವವರಲ್ಲಿ, “ಕನಿಷ್ಠ ಒಂದು ಶ್ಲೋಕವನ್ನು (ಸಂಸ್ಕೃತದಲ್ಲಿ ಒಂದು ಶ್ಲೋಕ) ಹೇಳಿ, ಅಥವಾ ನಾವು ನಿಮ್ಮನ್ನು ಹೋಗಲು ಬಿಡುವುದಿಲ್ಲ. ನಿಮಗೆ ಎಷ್ಟು ದೇವರ ಹೆಸರುಗಳು ಗೊತ್ತು?” ಎಂದು ಕೇಳುತ್ತಾನೆ. ಇದಕ್ಕೆ ಆ ಮೂವರಲ್ಲಿ ಒಬ್ಬ ವ್ಯಕ್ತಿ, “ನಾವು ಭೋಲೆನಾಥನನ್ನು ಆರಾಧಿಸುತ್ತೇವೆ ” ಎಂದು ಉತ್ತರಿಸುತ್ತಾನೆ.
ವೀಡಿಯೋ ಮಾಡುತ್ತಿರುವ ವ್ಯಕ್ತಿ, “ನಿಮಗೆ ಒಂದೇ ಒಂದು ಹಿಂದೂ ದೇವತೆಯ ಹೆಸರು ತಿಳಿಯದಿದ್ದರೆ ನಿಮ್ಮನ್ನು ನಿಜವಾದ ಸಾಧುಗಳು ಎಂದು ಹೇಗೆ ನಂಬುವುದು,” ಎಂದು ಕೇಳುತ್ತಾರೆ. ಅಷ್ಟು ಹೊತ್ತಗೆ ಸುತ್ತಮುತ್ತ ಜನ ಸೇರುತ್ತಾರೆ, ಈ ಮೂವರು ಖಾವಿದಾರಿಗಳನ್ನು ‘ಬಾಂಗ್ಲಾದೇಶಿ’ ಮತ್ತು ‘ರೋಹಿಂಗ್ಯಾ’ ಎಂದೆಲ್ಲಾ ಬೈಯುತ್ತಾರೆ, ಕೆಲವರು ಪೆಟ್ಟು ಹೊಡೆಯಲು ಹೇಳುತ್ತಾರೆ.
ಆಮೇಲೆ ಈ ವೀಡಿಯೋ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ ಈ ಮೂವರು ಸಾಧುಗಳಲ್ಲಿ ಒಬ್ಬನ ಹೆಸರು ‘ಸಲ್ಮಾನ್’ ಎಂದು ಸುತ್ತಮುತ್ತ ಸೇರಿದವರಿಗೆ ಹೇಳುತ್ತಾನೆ, ಅದನ್ನು ಸಾಬೀತುಪಡಿಸಲು ಐಡಿ ಕಾರ್ಡ್ ಕೂಡ ತೋರಿಸುತ್ತಾನೆ.
ಗುಜರಾತಿ ನ್ಯೂಸ್ ಚಾನೆಲ್ Zee 24 Kalak (@Zee24Kalak) ನವೆಂಬರ್ 2 ರಂದು ಈ ಘಟನೆಯ ಕುರಿತು ಗುಜರಾತಿ ಭಾಷೆಯಲ್ಲಿ ಟ್ವೀಟ್ ಮಾಡಿದೆ: “ಸಾಧುವಿನ ವೇಷದಲ್ಲಿದ್ದ ಸಲ್ಮಾನ್ ಸಿಕ್ಕಿಬಿದ್ದಿದ್ದಾನೆ! ಸೂರತ್‌ನಲ್ಲಿ ಸಾಧು ಭಿಕ್ಷೆ ಬೇಡುತ್ತಿದ್ದ ಸತ್ಯವನ್ನು ಐಡಿ ಚೆಕ್‌ನಿಂದ ಬಯಲಾದ ವಂಚನೆ,” ಎಂದು ಟೈಟಲ್ ನೀಡಲಾಗಿದೆ. ( ಆರ್ಕೈವ್ )
ಗೋದಿ ಮೀಡಿಯಾ OpIndia (@OpIndia_in ) ಕೂಡ Zee 24 Kalak ಅವರ ಟ್ವೀಟ್ ಇರುವ ವರದಿಯನ್ನು ಪ್ರಕಟಿಸಿದೆ.
ಜೊತಗೆ ತಮ್ಮ ಅಧಿಕೃತ X ಹ್ಯಾಂಡಲ್‌ನಲ್ಲಿ ಈ ವರದಿಯ ಲಿಂಕ್ ಅನ್ನು ಪೋಸ್ಟ್ ಮಾಡಿದೆ. “ಸಲ್ಮಾನ್ ಮತ್ತು ಅವನ ಸಹಚರರು ಕೇಸರಿ ಬಟ್ಟೆಗಳನ್ನು ಧರಿಸಿ ಭಿಕ್ಷೆ ಬೇಡುತ್ತಿದ್ದರು. ಗುರುತಿನ ಚೀಟಿಯ ಮೂಲಕ ಅವರ ನಿಜವಾದ ಗುರುತು ಬಯಲಾಗಿದೆ. ಅವರಿಗೆ ಯಾವುದೇ ಶ್ಲೋಕವನ್ನು ಪಠಿಸಲು ಅಥವಾ ಹಿಂದೂ ದೇವರು ಮತ್ತು ದೇವತೆಗಳ ಹೆಸರನ್ನು ಸರಿಯಾಗಿ ಹೇಳಲು ಸಾಧ್ಯವಾಗಲಿಲ್ಲ,” ಎಂಬ ಟೈಟಲನ್ನು ಓಪ್‌ಇಂಡಿಯಾ ತನ್ನ X ನಲ್ಲಿ ಪೋಸ್ಟ್ ಮಾಡಿದೆ.
ಮತ್ತೊಂದು ಕೂಗುಮಾರಿ ಚಾನೆಲ್ , ಸುದರ್ಶನ್ ನ್ಯೂಸ್ (@SudarshanNewsTV), ಈ ಘಟನೆಯ ಕುರಿತು ವೀಡಿಯೊ ವರದಿಯನ್ನು ಈ ರೀತಿಯ ಶೀರ್ಷಿಕೆಯ ಜೊತೆಗೆ ಹಂಚಿಕೊಂಡಿದೆ: “ಗುಜರಾತ್‌ನ ಸೂರತ್‌ನಲ್ಲಿ, ‘ಜಿಹಾದಿ’ ಸಲ್ಮಾನ್ ಮತ್ತು ಅವನ ಗ್ಯಾಂಗ್ ಸಾಧುಗಳಂತೆ ಪೋಸ್ ಕೊಡುತ್ತಾ ಭಿಕ್ಷೆ ಬೇಡುತ್ತಿದ್ದರು … ಕೇಸರಿ ವಸ್ತ್ರಗಳನ್ನು ಧರಿಸಿ ಸಾಧುಗಳಂತೆ ಪೋಸು ಕೊಟ್ಟ ಈ ಮೂರು ‘ಜಿಹಾದಿಗಳು’ ಬಂಧಿಸಲಾಗಿದೆ. ( ಆರ್ಕೈವ್ )
ಸತ್ಯ ಏನು?
ಸತ್ಯಾನ್ವೇಷಣೆಯ ನಂತರ ಈ ಮೂವರೂ ಸಂತರು ಹಿಂದೂಗಳು ಎಂಬುದು ಕಂಡುಬಂದಿದೆ. ದೈನಿಕ್ ಭಾಸ್ಕರ್ ಗ್ರೂಪ್‌ನ ಗುಜರಾತಿ ದಿನಪತ್ರಿಕೆ ದಿವ್ಯಾ ಭಾಸ್ಕರ್ ಈ ಬಗ್ಗೆ ವರದಿ ಮಾಡಿದೆ. ನವೆಂಬರ್ 4 ರಂದು, ಪೊಲೀಸ್ ತನಿಖೆಯ ನಂತರ ಇವರು ಮೂವರೂ ಹಿಂದೂಗಳು ಮತ್ತು ಜುನಾಗಢದಿಂದ ಬಂದವರು ಎಂದು ತಿಳಿದುಬಂದಿದೆ ಎಂದು ವರದಿ ಹೇಳುತ್ತದೆ.
ಸೂರತ್‌ನ ಅದಾಜನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆರ್‌ಬಿ ಗೋಜಿಯಾ ಅವರು ಮೂವರು ಸನ್ಯಾಸಿಗಳನ್ನು ಅನುಮಾನಾಸ್ಪದ ವ್ಯಕ್ತಿಗಳೆಂದು ವರದಿ ಮಾಡಿದ್ದಾರೆ ಮತ್ತು ನಂತರ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ. ವಿಚಾರಣೆಯ ನಂತರ, ಪರಿಶೀಲನೆಗಾಗಿ, ಅವರ ನಿಜವಾದ ಗುರುತನ್ನು ನಿರ್ಧರಿಸಲು ಜುನಾಗಢದಲ್ಲಿ ತನಿಖೆಯನ್ನು ಪ್ರಾರಂಭಿಸಲಾಯಿತು. ಅವರು ನೀಡಿದ ಹೆಸರುಗಳು ಸತ್ಯವಾಗಿವೆ ಎಂದು ಕಂಡುಬಂದಿದೆ. ಒಬ್ಬ ವ್ಯಕ್ತಿಯ ಹೆಸರು ಸಲ್ಮನಾಥ್ ಆಗಿದ್ದು, ಆತನನ್ನು ಸಲ್ಮಾನ್, ಓರ್ವ ಮುಸಲ್ಮಾನ ಎಂದು ಹಿಂದೂಗಳು ಭಾವಿಸಿ ಆತನ ಮೇಲೆಗೆ ಹಲ್ಲೆಗೆ ಮುಂದಾಗಿದ್ದಾರೆ. ಆದರೆ, ಆತ ಹಿಂದೂ ಎಂಬುದು ದೃಢಪಟ್ಟಿದೆ.
Alt News ಈತನ ಮತದಾರ ಚೀಟಿಯನ್ನು ವರದಿ ಮಾಡಿದ್ದು, ಈ ಚೀಟಿಯಲ್ಲಿ ಈತನ ಹೆಸರು ಹೆಸರು ಸಲ್ಮನಾಥ್ ಪರ್ಮಾರ್ ಮತ್ತು ಅವನ ತಂದೆಯ ಹೆಸರು ಸೂರಮ್ನಾಥ್ ಪರ್ಮಾರ್ ಎಂದು ಉಲ್ಲೇಖಿಸಲಾಗಿದೆ.
ರಜಪೂತರಲ್ಲಿ ಪರ್ಮಾರ್ ಎಂಬ ಉಪನಾಮವಿದೆ. ಈ ಪರ್ಮಾರರು ಹೆಚ್ಚಾಗಿ ಉತ್ತರ ಮತ್ತು ಮಧ್ಯ ಭಾರತದಿಂದ, ವಿಶೇಷವಾಗಿ ರಾಜಸ್ಥಾನ, ಗುಜರಾತ್, ಪಂಜಾಬ್, ಹರಿಯಾಣ, ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಉತ್ತರ ಮಹಾರಾಷ್ಟ್ರದಿಂದ ಬಂದವರು.
ಆದ್ದರಿಂದ ಸಾಧುವಿನ ವೇಷ ಧರಿಸಿದ ಮೂವರು ಮುಸ್ಲಿಮರು ಭಿಕ್ಷೆ ಬೇಡುತ್ತಿದ್ದಾರೆ ಎಂಬುದು ಹಸಿಹಸಿ ಸುಳ್ಳು, ಭಿಕ್ಷೆ ಬೇಡುತ್ತಿದ್ದವರು ಹಿಂದೂ ಸಾಧುಗಳೇ ಆಗಿದ್ದಾರೆ.
ಈ ರೀತಿ ಹಿಂದೂ ಸಾಧುಗಳನ್ನು ಮುಸಲ್ಮಾನರು ಎಂದು ಕರೆದು ಕಿರುಕುಳ ನೀಡಿದ್ದು ಇದೇ ಮೊದಲೇನಲ್ಲ. ಈ 2024 ರ ಜುಲೈನಲ್ಲಿ ಮೀರತ್‌ನಲ್ಲಿ ಮೂವರು ಸಾಧುಗಳ ಗುಂಪಿಗೆ ಮುಸ್ಲಿಮರು ಎಂಬ ಹಣೆಪಟ್ಟಿ ಕಟ್ಟಲಾಯಿತು. ಸಂಚಾರಿ ಸನ್ಯಾಸಿಗಳನ್ನು ಮಕ್ಕಳ ಅಪಹರಣಕಾರರು ಎಂದು ಸುಳ್ಳು ಆರೋಪ ಹೊರಿಸಿದ ಘಟನೆಗಳೂ ನಡೆದಿವೆ.