ಬೆಂಗಳೂರು : ರಾಜ್ಯದ ಬಡ ಜನರ ಹೊಟ್ಟೆ ತುಂಬಿಸೋ ಸಿದ್ದರಾಮಯ್ಯ (Siddaramaiah) ನನ್ನ ಪಾಲಿನ ಶ್ರೀರಾಮಚಂದ್ರ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep eshwar) ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ನನ್ನ ಪಾಲಿನ ಶ್ರೀರಾಮಚಂದ್ರ. ರಾಮಮಂದಿರ (Ram mandir) ನಿರ್ಮಾಣ ಮಾತ್ರ ದೇಶಪ್ರೇಮ ಅಲ್ಲ, ಬಡವರ ಹೊಟ್ಟೆ ತುಂಬಿಸುವುದು ಕೂಡಾ ದೇಶಪ್ರೇಮ. ಆ ಕೆಲಸವನ್ನು ನಮ್ಮ ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ. ಇಂದು (ಜ.27) ವಿಧಾನಸಭೆಯಲ್ಲಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಇನ್ನು ರಾಜ್ಯಪಾಲರ ನಡೆಯನ್ನು ಪರೋಕ್ಷವಾಗಿ ಖಂಡಿಸುವಂತೆ, ರಾಷ್ಟ್ರಗೀತೆಗೆ ಅಗೌರವ ತೋರಿಸುವ ವ್ಯಕ್ತಿಗಳಿಗೆ ನನ್ನ ಭಾಷಣ ಅರ್ಪಣೆ ಮಾಡುತ್ತೇನೆ ಎಂದು ಪ್ರದೀಪ್ ಈಶ್ವರ್ ಮಾತು ಶುರು ಮಾಡಿದ್ರು. ಇದೇ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಕೂಡ ಕಿಡಿ ಕಾರಿದ್ದಾರೆ. ಬಿಗ್ ಬಾಸ್ ವಿನ್ನರ್ ಗಿಲ್ಲಿ ಅಲ್ಲ, ಬದಲಾಗಿ ಸಚಿವೆ ನಿರ್ಮಲಾ ಸೀತಾರಾಮನ್. ಯಾಕಂದ್ರೆ ಬಹುಮಾನದ ಮೊತ್ತದ ಶೇ. 50ರಷ್ಟು ಹಣ ನಿರ್ಮಲಾ ಸೀತಾರಾಮನ್ ಪಾಲಾಗುತ್ತಿದೆ. ಕೇವಲ ಶೇ. 48ರಷ್ಟು ಮಾತ್ರ ವಿಜೇತರಿಗೆ ಸಿಗುತ್ತದೆ,ಇದು ತೆರಿಗೆ ಮೋಸ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
