ಉತ್ತರಾಖಾಂಡ : ಪ್ರಧಾನಿ ನರೇಂದ್ರ ಮೋದಿಯವರು ನಾಳೆ ಕೇದಾರನಾಥ ಮತ್ತು ಬದರಿನಾಥಕ್ಕೆ ಭೇಟಿ ನೀಡಲಿದ್ದು, ಕೇದಾರನಾಥನ ದರ್ಶನ ಪಡೆದು ಪೂಜಾಕಾರ್ಯಕ್ರಮವನ್ನು ಸಲ್ಲಿಸಲಿದ್ದಾರೆ. ಮತ್ತು ಅಲ್ಲಿನ ಅಭಿವೃದ್ದಿ ಯೋಜನೆಗಳನ್ನು ಪರಿಶೀಲಿಸಲಿದ್ದಾರೆ.
ಅಕ್ಟೋಬರ್ 21 ರಂದು ಪ್ರಧಾನಿ ಮೋದಿ ಕೇದಾರನಾಥಕ್ಕೆ ತೆರಳಲಿದ್ದು, ದೇವರ ದರ್ಶನ ಪಡೆಯಲಿದ್ದಾರೆ. ನಂತರ ಕೇದಾರನಾಥ ರೋಪ್ ವೇ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ, ಆದಿ ಗುರು ಶಂಕರಾಚಾರ್ಯ ಸಮಾಧಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.
ಆನಂತರ ಬದರಿನಾಥದಲ್ಲಿನ ರಿವರ್‌ಫ್ರಂಟ್ ಅಭಿವೃದ್ದಿ ಕಾರ್ಯಗಳ ಪ್ರಗತಿ, ಪ್ಲಾಜಾ ಮತ್ತು ಕೆರೆಗಳ ಅಭಿವೃದ್ದಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ. 2430 ಕೋಟಿ ವೆಚ್ಚದಲ್ಲಿ ಕೇದಾರನಾಥ ರೋಪ್ ವೇ ಯೋಜನೆಯ ಶಂಕುಸ್ಥಾಪನೆ ನಡೆಸಲಿದ್ದಾರೆ.