Home ದೇಶ ನರಬಲಿ ಪ್ರಕರಣ : ಕೇರಳ ಸರ್ಕಾರಕ್ಕೆ ನೋಟಿಸ್

ನರಬಲಿ ಪ್ರಕರಣ : ಕೇರಳ ಸರ್ಕಾರಕ್ಕೆ ನೋಟಿಸ್

0

ಕೇರಳ : ಕೇರಳದಲ್ಲಿ ನಡೆದ ನರಬಲಿ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕೇರಳ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ಅಮಾಯಕ ಹೆಣ್ಣು ಮಕ್ಕಳನ್ನು ಹಣ ಆಸೆಯಿಂದ ಭರವಸೆ ಹುಟ್ಟಿಸಿ ವಂಚಿಸುವ ಕೃತ್ಯಗಳು ಕೇರಳದಲ್ಲಿ ದಿನದಿಂದ ದಿನದಿನಕ್ಕೆ ಹೆಚ್ಚಾಗುತ್ತಿದ್ದೆ. ಇತ್ತೀಚೆಗಷ್ಟೇ ನಡೆದ ಕೇರಳದ ನರಬಲಿಯಿಂದ ಇಬ್ಬರು ಮಹಿಳೆಯರನ್ನು ಕೊಲೆ ಮಾಡಿರುವ ಭೀಕರ ಕೃತ್ಯ ನಡೆದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕಾನೂನಿನ ಭಯವೇ ಇಲ್ಲದೆ ಇಂತಹ ಕೆಲಸಗಳನ್ನು ಮಾಡುವ ಅಮಾಯಕರ ಬದುಕುವ ಹಕ್ಕನ್ನು ಬಲಿಷ್ಟರು ಕಿತ್ತುಕೊಳ್ಳುತ್ತಿದ್ದಾರೆ. ಇದನ್ನು ಗಮನಿಸಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಸ್ವತಃ ಪ್ರಕರಣವನ್ನು ಕೈಗೆತ್ತುಕೊಂಡಿದೆ.

ಈ ಪ್ರಕರಣದ ಕುರಿತು ತನಿಖೆಯ ಸ್ಥಿತಿ ಏನಿದೆ? ಮತ್ತು ಈ ರೀತಿ ಮೋಸ ಹೋಗಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಏನು? ಎಲ್ಲವನ್ನೂ ನಾಲ್ಕು ವಾರಗಳ ಅವಧಿಯಲ್ಲಿ ಕಳುಹಿಸಬೇಕು ಎಂದು ಕೇರಳದ ಪೋಲಿಸ್‌ ಮಹಾನಿರ್ದೇಶಕರು ಹಾಗೂ ಅಲ್ಲಿನ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ನೋಟಿಸ್‌ ನೀಡಿದೆ.

You cannot copy content of this page

Exit mobile version