Home ರಾಜ್ಯ ಕನ್ನಡ ಹೋರಾಟಗಾರರಿಗೆ ಅಪಮಾನ: ಕ್ಷಮೆ ಕೇಳಿದ ಭೂಮಿಗೆ ಬಂದ ಭಗವಂತ ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್

ಕನ್ನಡ ಹೋರಾಟಗಾರರಿಗೆ ಅಪಮಾನ: ಕ್ಷಮೆ ಕೇಳಿದ ಭೂಮಿಗೆ ಬಂದ ಭಗವಂತ ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್

0

‌ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಭೂಮಿಗೆ ಬಂದ ಭಗವಂತ ಎನ್ನುವ ಕನ್ನಡ ದೈನಿಕ ಧಾರಾವಾಹಿಯಲ್ಲಿ ಕನ್ನಡ ಹೋರಾಟಗಾರರನ್ನು ಅಪಮಾನಿಸುವಂತೆ ಚಿತ್ರಿಸಲಾಗಿತ್ತು ಎನ್ನುವ ಆರೋಪಕ್ಕೆ ಧಾರಾವಾಹಿಯ ನಿರ್ದೇಶಕ ಆರೂರು ಜಗದೀಶ್‌ ಅವರು ಪ್ರತಿಕ್ರಿಯಿಸಿದ್ದ, ಈ ವಿಷಯದ ಕುರಿತಾಗಿ ತಾನು ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ.

https://www.facebook.com/watch/?v=881195176909548&extid=CL-UNK-UNK-UNK-AN_GK0T-GK1C&ref=sharing&mibextid=Nif5oz

ಸದರಿ ಧಾರಾವಾಹಿಯಲ್ಲಿ ಕನ್ನಡ ಹೋರಾಟಗಾರರನ್ನು ಕನ್ನಡ ವರ್ಣಮಾಲೆ ಗೊತ್ತಿಲ್ಲದವರು, ಗೂಂಡಾ ವರ್ತನೆ ತೋರಿಸುವವರು ಇತ್ಯಾದಿಯಾಗಿ ತೋರಿಸಲಾಗಿತ್ತು. ಈ ಧಾರಾವಾಹಿಯ ತುಣುಕೊಂದನ್ನು ಜೀ ಕನ್ನಡ ವಾಹಿನಿ ತನ್ನ ಫೇಸ್ಬುಕ್‌ ಪೇಜಿನಲ್ಲಿ ಪೋಸ್ಟ್‌ ಮಾಡಿತ್ತು. ಅಲ್ಲಿ ಅದು ಪೋಸ್ಟ್‌ ಆಗುತ್ತಿದ್ದಂತೆ ನೆಟ್ಟಿಗರು ಧಾರಾವಾಹಿಯ ನಿರ್ದೇಶಕರು ಮತ್ತು ವಾಹಿನಿಯವರನ್ನು ತರಾಟೆ ತೆಗೆದುಕೊಳ್ಳಲು ಆರಂಭಿಸಿದ್ದಾರೆ.

ಅದರ ನಂತರ ಕನ್ನಡದ ಕುರಿತು ಹೆಮ್ಮೆಯೆನ್ನಿಸುವಂತೆ ಇನ್ನೊಂದು ಕ್ಲಿಪ್ಪನ್ನು ಪೇಜ್‌ ಪ್ರಕಟಿಸಿತಾದರೂ, ಜನರ ಆಕ್ರೋಶ ಈ ವಿಷಯದಲ್ಲಿ ಕಡಿಮೆಯಾಗಿರಲಿಲ್ಲ. ಕನ್ನಡ ಹೋರಾಟಗಾರರನ್ನು ಅಪಮಾನಿಸಿದ್ದಕ್ಕಾಗಿ ಕ್ಷಮೆ ಕೇಳಬೇಕೆಂದು ಹಲವರು ಆಗ್ರಹಿಸಿದ್ದರು.

https://www.facebook.com/watch/?v=1441114830132909&extid=CL-UNK-UNK-UNK-AN_GK0T-GK1C&ref=sharing&mibextid=Nif5oz

ಕೊನೆಗೆ ನಿರ್ದೇಶಕ ಜಗದೀಶ್‌ ಆರೂರು ತಮ್ಮ ಫೇಸ್ಬುಕ್‌ ಖಾತೆಯಲ್ಲಿ ಈ ಕುರಿತು ಒಂದೂವರೆ ನಿಮಿಷದಷ್ಟು ಕಾಲದ ವಿಡಿಯೋ ಮಾಡಿ ಕನ್ನಡವೇ ನಮ್ಮಮ್ಮ, ಕನ್ನಡವೇ ನಮ್ಮ ಉಸಿರು, ಕನ್ನಡ ಹೋರಾಟಗಾರರೇ ನಮ್ಮ ಆಸ್ತಿ ಎನ್ನುವ ಕ್ಯಾಪ್ಷನ್‌ ಕೊಟ್ಟಿದ್ದಾರೆ. ಆ ವಿಡಿಯೋದಲ್ಲಿ ವಿಷಯವನ್ನು ಮನವರಿಕೆ ಮಾಡಿಸಲು ಪ್ರಯತ್ನಿಸುವುದರ ಜೊತೆಗೆ ಇದರಿಂದ ಯಾರಿಗಾದರೂ ನೋವಾಗಿದ್ದಲ್ಲಿ ಕ್ಷಮೆ ಕೇಳುವುದಾಗಿಯೂ ತಿಳಿಸಿದ್ದಾರೆ.

ಜೊತೆಗೆ ನವೀನ್‌ ಕೃಷ್ಣ ಕೂಡಾ ಈ ವಿಷಯದ ಕುರಿತು ಕ್ಷಮೆ ಕೇಳಿದ್ದಾರೆ. ಅವರು ಈ ಧಾರಾವಾಹಿಯ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಅವರು ತಮ್ಮ ವಿಡಿಯೋದಲ್ಲಿ, “ನಮ್ಮ ಧಾರಾವಾಹಿಯ ಮೂಲಕ ಕನ್ನಡದ ಕುರಿತಾಗಿ ಅರಿವು ಮೂಡಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿತ್ತು. ಯಾರನ್ನೂ ದೂಷಿಸುವ, ಅಥವಾ ನೋಯಿಸುವ ಉದ್ದೇಶವಿರಲಿಲ್ಲ. ಈ ಸಂಚಿಕೆಯಿಂದ ಮನಸ್ಸಿಗೆ ನೋವಾಗಿದ್ದಲ್ಲಿ ಕ್ಷಮೆಯಿರಲಿ. ನಿಮ್ಮ ಹೋರಾಟದಲ್ಲಿ ನಾವು ಭಾಗಿಯಾಗುತ್ತೇವೆ” ಎಂದು ಹೇಳಿದ್ದಾರೆ.

You cannot copy content of this page

Exit mobile version