Home ದೇಶ ನಕ್ಸಲಿಸಂ ತೊಡೆದು ಹಾಕಲು ಬರುತ್ತಿದೆ “ಬಸ್ತರಿಯಾ ಬೆಟಾಲಿಯನ್‌”: CRPC

ನಕ್ಸಲಿಸಂ ತೊಡೆದು ಹಾಕಲು ಬರುತ್ತಿದೆ “ಬಸ್ತರಿಯಾ ಬೆಟಾಲಿಯನ್‌”: CRPC

0

ದೆಹಲಿ : ದೇಶದಲ್ಲಿ ನಕ್ಸಲಿಸಂ ತೊಡೆದು ಹಾಕಲು ಹೊಸ ಕ್ರಮವಾಗಿ ʼಬಸ್ತರಿಯಾ ಬೆಟಾಲಿಯನ್‌ʼ ನೇಮಕಾತಿ ಮಾಡಿಕೊಳ್ಳಲು CRPC  ಅಕ್ಟೋಬರ್‌ 10ರಿಂದ ಹತ್ತು ದಿನಗಳ ಪ್ರಯಾಣ ಬೆಳೆಸಲಿದೆ.

ಹಿಂದೆ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿಹೆಚ್ಚಿನ ಸಂಖ್ಯೆಯಲ್ಲಿ ಭೂಗತರಾಗಿದ್ದ ನಕ್ಸಲ್‌ ಪಡೆ,  ಚಿಕ್ಕಮಗಳೂರಿನಲ್ಲಿ  ನಕ್ಸಲ್‌ ನಿಗ್ರಹ ದಳ ಬಂದ  ಹುಟ್ಟಿಕೊಂಡ ಬಳಿಕ ರಾಜ್ಯದಿಂದಲೇ ಜಾಗ ಕಾಲಿ ಮಾಡಿಕ, ಕೇರಳ , ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ,ಒಡಿಶಾ ಸೇರಿದಂತೆ ದೇಶದ ಹಲವೆಡೆ ನಕ್ಸಲ್‌ ಪಡೆ ಬೇರೂರಿ ಯುವಕ-ಯುವತಿಯರನ್ನು ಸೆಳೆದಿದ್ದು ದೇಶದಲ್ಲಿ ದಿನ ಕಳೆದ ಹಾಗೆ ನಕ್ಸಲಿಸಂ ಹೆಚ್ಚಾಗಿದೆ. ಆದರೆ ಇದೀಗ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ತೊಡೆದುಹಾಕಲು ಕೇಂದ್ರ ಪೊಲೀಸ್‌ ಪಡೆಯು ಹೊಸ ಕ್ರಮ ಕೈಗೊಳ್ಳುತ್ತಿದೆ.

ಈ ಹಿನ್ನಲೆಯಲ್ಲಿ ಕೇಂದ್ರದ ಮಾನದಂಡಗಳನ್ನು ಸರಾಗಗೊಳಿಸಿದ ನಂತರ ನಕ್ಸಲಿಸಂ ತೊಡೆದು ಹಾಕಲು CRPC(Central Reserve Police Force)  ಮೊದಲ ಬಾರಿಗೆ “ಬಸ್ತರಿಯಾ ಬೆಟಾಲಿಯನ್‌” ಅನ್ನು ನೇಮಕಾತಿಯ ಚಾಲನೆ ಮಾಡಿದೆ. ಈ ಬೆಟಾಲಿಯನ್‌ಗೆ ಛತ್ತೀಸ್ ಗಢದ ದಕ್ಷಿಣ ಭಾಗದ ಬಿಜಾಪುರ, ದಂತೀವಾಡ  ಮತ್ತು ಸುಕ್ಮಾ ಈ ಮೂರು ಜಿಲ್ಲೆಗಳಿಂದ ಸುಮಾರು 400 ಜನರಿಗೆ ನೇಮಕಾತಿಯಲ್ಲಿ ಅವಕಾಶವಿದೆ. ಕಾಡಿನ ಯುದ್ಧ ತಂತ್ರಗಳನ್ನು ತಿಳಿದಿರುವವರಿಗೆ ಈ ಬೆಟಾಲಿಯನ್‌ ನಲ್ಲಿ ಅವಕಾಶ ನೀಡಲಾಗುತ್ತಿದೆ. ನೇಮಕಾತಿ ಪ್ರಕ್ರಿಯೆಯು ಅಕ್ಟೋಬರ್‌ 10 ರಿಂದ ಅಕ್ಟೋಬರ್‌ 20 ರ ವರೆಗೆ ನಡೆಯಲಿದೆ. ಈ ನೇಮಕಾತಿಗಾಗಿ ಕೇಂದ್ರ ಪೊಲೀಸ್‌ ಪಡೆಯು 10 ದಿನಗಳ ಪ್ರಯಾಣ ಬೆಳೆಸಲಿದೆ.

ಇದನ್ನೂ ನೋಡಿ : ಹೆಣ್ಣು ಜೀವಕ್ಕೆ ಎಲ್ಲಿ ನೆಲೆ? ಎಲ್ಲಿ ಬೆಲೆ?

ಅಕ್ಟೋಬರ್ 11 ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನ. ವಿಶ್ವದಾದ್ಯಂತ ಆಚರಿಸಲ್ಪಡುವ ಈ ದಿನದ ನೆನಪಿನಲ್ಲಿ ಹೆಣ್ಣು ಮಕ್ಕಳ ಹಕ್ಕು, ಅವಕಾಶಗಳ ಬಗ್ಗೆ ಮಾತನಾಡಿದ್ದಾರೆ ಚಿಂತಕಿ ಡಾ. ಶುಭಾ ಮರವಂತೆ.

You cannot copy content of this page

Exit mobile version