Home ಸಿನಿಮಾ ತ್ರಿಶಾ ಕೃಷ್ಣನ್ ಕುರಿತ ಮನ್ಸೂರ್ ಅಲಿ ಖಾನ್ ಹೇಳಿಕೆ: ಪ್ರಕರಣ ದಾಖಲಿಸುವಂತೆ ತಮಿಳುನಾಡು ಡಿಜಿಪಿಗೆ ಎನ್‌ಸಿಡಬ್ಲ್ಯು...

ತ್ರಿಶಾ ಕೃಷ್ಣನ್ ಕುರಿತ ಮನ್ಸೂರ್ ಅಲಿ ಖಾನ್ ಹೇಳಿಕೆ: ಪ್ರಕರಣ ದಾಖಲಿಸುವಂತೆ ತಮಿಳುನಾಡು ಡಿಜಿಪಿಗೆ ಎನ್‌ಸಿಡಬ್ಲ್ಯು ನಿರ್ದೇಶನ

0

ಚೆನ್ನೈ: ತಮಿಳು ನಟ ಮನ್ಸೂರ್ ಅಲಿ ಖಾನ್ ಸಹ ನಟಿ ತ್ರಿಶಾ ಕೃಷ್ಣನ್ ಅವರ ಲೈಂಗಿಕ ಟೀಕೆಗಳ ವಿವಾದದ ನಂತರ, ರಾಷ್ಟ್ರೀಯ ಮಹಿಳಾ ಆಯೋಗ (NCW) ಸೋಮವಾರ ಪ್ರಕರಣದಲ್ಲಿ ಸ್ವಯಂಪ್ರೇರಿತ ಕ್ರಮ ಕೈಗೊಂಡಿದ್ದು, ಸಹನಟಿಯ ಕುರಿತು ಅಸಹ್ಯಕರ ಹೇಳಿಕೆ ನೀಡಿದ ಮನ್ಸೂರ್ ವಿರುದ್ಧ ಪ್ರಕರಣ ದಾಖಲಿಸುವಂತೆ ತಮಿಳುನಾಡು ಪೊಲೀಸರಿಗೆ ಸೂಚಿಸಿದೆ.

ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 509 ಬಿ ಮತ್ತು ಇತರ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ NCW ತನ್ನ ಪತ್ರದಲ್ಲಿ ತಮಿಳುನಾಡು ಡಿಜಿಪಿಗೆ ಸೂಚಿಸಿದೆ.

“ನಟ ಮನ್ಸೂರ್ ಅಲಿ ಖಾನ್ ಅವರು ನಟಿ ತ್ರಿಷಾ ಕೃಷ್ಣ ಅವರ ಬಗ್ಗೆ ನೀಡಿದ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗವು ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ವಿಷಯದಲ್ಲಿ ನಾವು ಸ್ವಯಂ ಪ್ರೇರಿತರಾಗಿ IPC ಸೆಕ್ಷನ್ 509 B ಮತ್ತು ಇತರ ಸಂಬಂಧಿತ ಕಾನೂನುಗಳಡಿ ಕ್ರಮ ಕೈಗೊಳ್ಳಲು DGPಗೆ ನಿರ್ದೇಶಿಸುತ್ತೇವೆ. ಇಂತಹ ಹೇಳಿಕೆಗಳು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಸಾಮಾನ್ಯಗೊಳಿಸುತ್ತವೆ ಮತ್ತು ಇದನ್ನು ಖಂಡಿಸಬೇಕು ಎಂದು ಮಹಿಳಾ ಆಯೋಗವು ತನ್ನ ಸಾಮಾಜಿಕ ಮಾಧ್ಯಮ ಖಾತೆಯ ಪೋಸ್ಟ್‌ನಲ್ಲಿ ತಿಳಿಸಿದೆ.

ಏತನ್ಮಧ್ಯೆ, ನಡಿಗರ್ ಸಂಗಮ್ ಎಂದು ಕರೆಯಲ್ಪಡುವ ದಕ್ಷಿಣ ಭಾರತೀಯ ಕಲಾವಿದರ ಸಂಘ (SIAA), ನಟ ಮನ್ಸೂರ್ ಅಲಿ ಖಾನ್ ಅವರ ಅವಹೇಳನಕಾರಿ ‌ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ ಮತ್ತು ನಟಿ ತ್ರಿಷಾ ಬಳಿ ಸಾರ್ವಜನಿಕ ಕ್ಷಮೆಯಾಚಿಸುವಂತೆ ಒತ್ತಾಯಿಸಿದೆ. ಖಾನ್ ಅವರು ಕ್ಷಮೆಯಾಚಿಸುವ ತನಕ ಅವರ ಸದಸ್ಯತ್ವವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸುವ ಬಗ್ಗೆ ಪರಿಗಣಿಸುವುದಾಗಿ ಸಂಘಟನೆ ಹೇಳಿದೆ. ಜೊತೆಗೆ ಕಲಾವಿದರ ವೇದಿಕೆ ಕೂಡ ನಟಿ ತ್ರಿಷಾಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದೆ.

You cannot copy content of this page

Exit mobile version