ಹೊಸದಿಲ್ಲಿ, ಅಕ್ಟೋಬರ್ 29: ಸೈಬರ್ ಅಪರಾಧಿಗಳು ಜನರನ್ನು ವಂಚಿಸಲು ಹೊಸ ಮಾರ್ಗಗಳನ್ನು ಆರಿಸಿಕೊಳ್ಳುತ್ತಿದ್ದಾರೆ.
ಇ-ಚಲನ್ ಹೆಸರಿನಲ್ಲಿ ನಮ್ಮ ಬ್ಯಾಂಕ್ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಅಧಿಕೃತ ಇ-ಚಲನ್ ವೆಬ್ಸೈಟ್ ಅನ್ನು ಹೋಲುವ ನಕಲಿ ವೆಬ್ಸೈಟ್ ರಚಿಸಲಾಗಿದೆ. ‘ನಿಮ್ಮ ವಾಹನಕ್ಕೆ ರೂ.500 ಟ್ರಾಫಿಕ್ ದಂಡ ವಿಧಿಸಲಾಗಿದೆ. ಆನ್ಲೈನ್ ಪಾವತಿ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ’ ಎಂದು ಜನರಿಗೆ ನಕಲಿ ಲಿಂಕ್ನೊಂದಿಗೆ ಎಸ್ಎಂಎಸ್ ಕಳುಹಿಸಲಾಗುತ್ತಿದೆ.
ಈ ಲಿಂಕ್ ತೆರೆದರೆ ಬ್ಯಾಂಕ್ ಖಾತೆಗಳು ಹ್ಯಾಕ್ ಆಗುವ ಅಪಾಯವಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಈ ಚಲನ್ಗೆ ಸಂಬಂಧಿಸಿದಂತೆ ಸರ್ಕಾರದ ಲಿಂಕ್ https://echallan.parivahan.gov.in ಆಗಿರುತ್ತದೆ ಆದರೆ ಸೈಬರ್ ಅಪರಾಧಿಗಳು ನಕಲಿ ಲಿಂಕ್ ಕ್ರಿಯೇಟ್ ಮಾಡಿ (https://echallanparivahan.in) ಅದನ್ನು ಜನರಿಗೆ ಕಳುಹಿಸುತ್ತಿದ್ದಾರೆ. ಇಂತಹ ನಕಲಿ ಲಿಂಕ್ ಗಳನ್ನು ಕ್ಲಿಕ್ ಮಾಡಬೇಡಿ ಎಂದು ಸಲಹೆ ನೀಡಿದೆ.