ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಸಂಸ್ಥೆಯಾಗಿರುವ ಎಂಪೈರ್ ಹೋಟೆಲ್ ಗೆ ಆಹಾರ ಇಲಾಖೆಯು ನೋಟೀಸ್ ಜಾರಿ ಮಾಡಿದೆ. ಆಹಾರದ ಅಸುರಕ್ಷತೆ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಿದ್ದು ಮೂವತ್ತು ದಿನಗಳೊಳಗೆ ಉತ್ತರಿಸಲು ಗಡುವು ನೀಡಿದೆ.
ಬೆಂಗಳೂರಿನ ಎಂಪೈರ್ ರೆಸ್ಟೋರೆಂಟ್ ನಲ್ಲಿ ಸಿಗುವ ಕಬಾಬ್ ಅಸುರಕ್ಷಿತ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ವರದಿಯ್ಲಲಿ ದೃಢಪಟ್ಟಿದೆ. ಬೆಂಗಳೂರಿನ ಶಿವಾಜಿನಗರ, ಗಾಂಧಿನಗರ, ಮಹದೇವಪುರ, ಬೊಮ್ಮನಹಳ್ಳಿ, ಬಸವನಗುಡಿ, ಹೆಬ್ಬಾಳದಲ್ಲಿ ಇರುವ ಎಂಪೈರ್ ರೆಸ್ಟೋರೆಂಟ್‌ಗಳಲ್ಲಿ ಕಬಾಬ್ ಸ್ಯಾಂಪಲ್ ಗಳನ್ನು ತೆಗೆದುಕೊಂಡು ಪರೀಕ್ಷೆ ಮಾಡಿದ ನಂತರದ ವರದಿಯಲ್ಲಿ ಅಸುರಕ್ಷಿತ ಎಂದು ದೃಢಪಟ್ಟಿದೆ.
ಕಬಾಬ್ ಮಾದರಿ ಪರೀಕ್ಷೆಯಲ್ಲಿ ಅಸುರಕ್ಷಿತ ಎಂದು ವರದಿ ಬಂದ ಹಿನ್ನೆಲೆಯಲ್ಲಿ ಎಂಪೈರ್ ರೆಸ್ಟೋರೆಂಟ್ ಗೆ ಆಹಾ ಇಲಾಖೆಯು ನೋಟಿಸ್ ಜಾರಿ ಮಾಡಿದೆ. 30 ದಿನಗಳ ಕಾಲಾವಕಾಶ ನೀಡಿದೆ.