Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಪ್ರತಿಪಕ್ಷಗಳ ಸಭೆ : ಯಾರೆಲ್ಲಾ ಭಾಗಿಯಾಗುವರು ಗೊತ್ತೇ?

ಪ್ರತಿಪಕ್ಷಗಳ ಸಭೆ : ಯಾರೆಲ್ಲಾ ಭಾಗಿಯಾಗುವರು ಗೊತ್ತೇ?

0

2024 ರ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿ ಇಟ್ಟು ಇಂದು (ಜುಲೈ 17) ಮತ್ತು ನಾಳೆ (ಜುಲೈ 18) ನಡೆಯುತ್ತಿರುವ ಪ್ರತಿಪಕ್ಷಗಳ ಸಭೆಗೆ ಈಗಾಗಲೇ ಒಟ್ಟು 23 ಪಕ್ಷಗಳ ನಾಯಕರುಗಳು ಬೆಂಗಳೂರಿಗೆ ಬಂದಿಳಿದಿದ್ದಾರೆ. ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಹಾಗೂ ಬಿಜೆಪಿ ಓಟವನ್ನು ತಗ್ಗಿಸಲು ಹೊರಟಿರುವ ಇಂದು ಮತ್ತು ನಾಳೆಯ ಸಭೆ ಹಲವು ಮಹತ್ವಗಳನ್ನು ಪಡೆದಿದೆ.

ಈ ಮೊದಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ಬಿಹಾರ ರಾಜಧಾನಿ ಪಟ್ನಾದಲ್ಲಿ ಮೊದಲ ಸಭೆಯ ನೇತೃತ್ವ ವಹಿಸಿ ಒಗ್ಗಟ್ಟಿನ ಮಂತ್ರ ಪಠಿಸಿದ್ದವು. ದೇಶದ 15 ವಿರೋಧ ಪಕ್ಷದ ನಾಯಕರು ಈ ಸಭೆಯಲ್ಲಿ ಭಾಗವಹಿಸಿದ್ದರು. ಅಂದಿನ ಸಭೆಯಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟಿನ ವಿಚಾರವಾಗಿ ಹಾಗೂ ಇನ್ನಷ್ಟು ವಿರೋಧ ಪಕ್ಷಗಳನ್ನು ಒಟ್ಟಾಗಿ ತಗೆದುಕೊಂಡು ಹೋಗುವ ಬಗ್ಗೆ ಮಹತ್ವದ ಮಾತುಕತೆ ನಡೆದಿತ್ತು.

ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಸಭೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಸಿದ್ಧತೆಯ ಸಂಪೂರ್ಣ ಉಸ್ತುವಾರಿ ವಹಿಸಲಾಗಿದೆ. ಬೆಂಗಳೂರಿನ ತಾಜ್ ವೆಸ್ಟೆಂಡ್ ನಲ್ಲಿ ನಡೆಯುವ ಸಭೆಗೆ ಈಗಾಗಲೇ 23 ಪಕ್ಷಗಳ 49 ಮಂದಿ ಘಟಾನುಘಟಿ ನಾಯಕರು ಬಂದಿಳಿದಿದ್ದಾರೆ. ಸಭೆಯಲ್ಲಿ ಪ್ರಮುಖವಾಗಿ ಬಿಜೆಪಿ ಪಕ್ಷವನ್ನು ದೇಶದಲ್ಲಿ ಕಟ್ಟಿ ಹಾಕುವ ಬಗ್ಗೆ, ಲೋಕಸಭೆ ಚುನಾವಣೆಯಲ್ಲಿ ಸೂಕ್ಷ್ಮ ಕ್ಷೇತ್ರಗಳಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ಹಾಗೂ ಮುಂದಿನ ಕಾರ್ಯತಂತ್ರದ ವಿಚಾರದಲ್ಲಿ ಯಾವೆಲ್ಲ ಪಕ್ಷಗಳು ಯಾವ ಹೆಜ್ಜೆ ಇಡಲಿವೆ ಎಂಬ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಯಾರೆಲ್ಲಾ ಹಾಜರು, ಯಾರೆಲ್ಲಾ ಗೈರು
ಬೆಂಗಳೂರಿನಲ್ಲಿ ನಡೆಯುತ್ತಿರುವ 2 ದಿನಗಳ ಸಭೆಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಉಸ್ತುವಾರಿ ವಹಿಸಿದೆ. ಈ ಬಾರಿ ಖುದ್ದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಭಾಗವಹಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್ ಭಾಗವಹಿಸಲಿದ್ದಾರೆ.

ಕಾಂಗ್ರೆಸ್ ನ ಹೊರತಾಗಿ ತೃಣಮೂಲ ಕಾಂಗ್ರೆಸ್ ನ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಂಸದರಾದ ಅಭಿಷೇಕ್ ಬ್ಯಾನರ್ಜಿ, ದೇರೆಕ್ ಓ ಬೀರೇನ್, CPI ಇಂದ ಮಾಜಿ ಸಂಸದ ಡಿ.ರಾಜ, CPIM ನಿಂದ ಸೀತಾರಾಮ್ ಯೆಚೂರಿ, ಶರದ್ ಪವಾರ್ ನೇತೃತ್ವದ NCP ಯಿಂದ ಶರದ್ ಪವಾರ್, ಜೀತೇಂದ್ರ ಅಹ್ವಾದ್, ಸುಪ್ರಿಯಾ ಸುಲೆ, JDU ನಿಂದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಸಂಸದ ಲಾಲನ್ ಸಿಂಗ್, ಸಚಿವ ಸಂಜಯ್ ಕುಮಾರ್ ಜಾ,  DMK ಇಂದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಸಂಸದ ಟಿ.ಆರ್.ಬಾಲು, ಆಮ್ ಆದ್ಮಿ ಪಕ್ಷದಿಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಜಾರ್ಖಂಡ್ ಮುಕ್ತಿ ಮೋರ್ಚಾದಿಂದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸುರೇನ್,  ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆಯಿಂದ ಉದ್ದವ್ ಠಾಕ್ರೆ, ಆದಿತ್ಯ ಠಾಕ್ರೆ, ಸಂಜಯ್ ರಾವುತ್, ರಾಷ್ಟ್ರೀಯ ಜನತಾ ದಳದಿಂದ ಲಾಲೂ ಪ್ರಸಾದ್ ಯಾದವ್, ತೇಜಸ್ವಿ ಯಾದವ್, ಮನೋಜ್ ಜಾ, ಸಂಜಯ್ ಯಾದವ್, ಸಮಾಜವಾದಿ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ರಾಮ್ ಗೋಪಾಲ್ ಯಾದವ್, ಜಾವೇದ್ ಅಲಿ ಖಾನ್, ಲಾಲ್ ಜಿ ವರ್ಮಾ, ಲಾಲ್ ಅಚಲ್ ರಾಜಬರ್, ಆಶಿಶ್ ಯಾದವ್, J&KNC ಪಕ್ಷದಿಂದ ಉಮರ್ ಅಬ್ದುಲ್ಲಾ, J&K PDP ಯಿಂದ ಮೆಹಬೂಬಾ ಮುಫ್ತಿ ಈಗಾಗಲೇ ಬೆಂಗಳೂರು ಬಂದಿದ್ದಾರೆ.

ಅಷ್ಟೇ ಅಲ್ಲದೆ CPI (ML) ಪಕ್ಷದಿಂದ ದೀಪಾಂಕರ್ ಭಟ್ಟಾಚಾರ್ಯ, RLD ಯಿಂದ ಸಂಸದ ಜಯಂತ್ ಸಿಂಗ್ ಚೌಧರಿ, IUML ನಿಂದ ಕೆ.ಎಂ.ಖಾದರ್ ಮೋಹಿದ್ದಿನ್, ಮಾಜಿ ಸಂಸದ ಪಿ.ಕೆ.ಕುನಾಲ್ ಕುಟ್ಟಿ, ಕೇರಳ ಕಾಂಗ್ರೆಸ್ (M) ನಿಂದ ಜೋಸ್ ಕೆ ಮಣಿ, MDMK ಪಕ್ಷದಿಂದ ಸಂಸದ ತಿರು ವೈಕೋ, ಜಿ.ರೇಣುಗಾ ದೇವಿ, VCK ಪಕ್ಷದಿಂದ ತಿರು ತೋಳ್ ತಿರುಮಾವಲವನ್, ಸಂಸದ ರವಿಕುಮಾರ್, RSP ಪಕ್ಷದಿಂದ ಸಂಸದ ಎನ್.ಕೆ.ಪ್ರೇಮಚಂದ್ರನ್, ಕೇರಳ ಕಾಂಗ್ರೆಸ್ ನಿಂದ ಪಿ.ಜೆ.ಜೋಸೆಫ್, ಫ್ರಾನ್ಸಿಸ್ ಜಾರ್ಜ್, KMDK ಯಿಂದ ತಿರು ಈ.ಆರ್.ಈಶ್ವರನ್, ಹಾಗೂ AIFBಪಕ್ಷದಿಂದ ಎಕೆಪಿ ಚಿನ್ ರಾಜ್, ಜಿ ದೇವರಾಜನ್ ಈಗಾಗಲೆ ಬೆಂಗಳೂರಿಗೆ ಬಂದಿಳಿದಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆದರೆ, ಸಭೆಯ ಒಟ್ಟಾರೆ ತೀರ್ಮಾನಕ್ಕೆ ಒಮ್ಮತ ಬಂದರೆ ಇಂದಿನ ಸಭೆಯಲ್ಲಿ ಈ ಮೈತ್ರಿಕೂಟಕ್ಕೆ ಒಂದು ಹೆಸರು ಇಡುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟಾರೆ 2024 ರ ಲೋಕಸಭೆ ಅಖಾಡಕ್ಕೆ ಬೆಂಗಳೂರಿನ ಈ ಸಭೆ ಬಹಳ ಮಹತ್ವ ಪಡೆದುಕೊಂಡಿದೆ. ಇಂದು ಸೇರುವ ಪ್ರತೀ ಪಕ್ಷಗಳಿಗೂ ಸಹ ಬಿಜೆಪಿಯೇ ಪ್ರಮುಖ ವಿರೋಧಿಯಾಗಿದ್ದು ಈ ಒಂದು ಒಗ್ಗಟ್ಟು ಅನಿವಾರ್ಯ ಎಂಬಂತಾಗಿದೆ.

2023 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ದೊಡ್ಡ ದೊಡ್ಡ ಘಟಾನುಘಟಿಗಳೂ ಬಂದು ಕರ್ನಾಟಕದಲ್ಲಿ ಬೀಡು ಬಿಟ್ಟರೂ ಕಾಂಗ್ರೆಸ್ ಭರ್ಜರಿ ಜಯ ದಾಖಲಿಸಿದ್ದೂ ಸಹ ಪ್ರತಿಪಕ್ಷಗಳಿಗೆ ದೊಡ್ಡ ಮಟ್ಟದ ಹುಮ್ಮಸ್ಸು ಬಂದಂತಾಗಿದೆ.

ಈ ಸಭೆಯ ಬೆನ್ನಲ್ಲೇ ಇನ್ನೊಂದು ಕಡೆ ಬಿಜೆಪಿ ಕೂಡಾ ತನ್ನ ಹಳೆಯ ಮಿತ್ರರನ್ನೆಲ್ಲಾ ಒಟ್ಟುಗೂಡಿಸುವ ಪ್ರಯತ್ನ ಮಾಡಿ ಸಭೆ ಕರೆದಿದೆ. ಈಗಾಗಲೇ ಬಿಜೆಪಿ ಜೊತೆಗೆ ಮುನಿಸಿಕೊಂಡು ದೂರ ಇದ್ದ NDA ಮಿತ್ರಪಕ್ಷಗಳಿಗೆ ಬಿಜೆಪಿ ಮತ್ತೆ ತನ್ನತ್ತ ಸೆಳೆಯುವ ತಂತ್ರಗಾರಿಕೆ ರೂಪಿಸಿದೆ. ಅದರಲ್ಲಿ ಕರ್ನಾಟಕದ ಜಾತ್ಯತೀತ ಜನತಾದಳ ಕೂಡ ಈ ಬಾರಿ ಬಹಿರಂಗವಾಗಿ ಬಿಜೆಪಿ ಬೆಂಬಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

You cannot copy content of this page

Exit mobile version