Home Uncategorized ಮುಖ್ಯ ಚುನಾವಣಾ ಆಯುಕ್ತರನ್ನು (ಸಿಇಸಿ) ವಜಾಗೊಳಿಸುವಂತೆ ಮತ್ತೆ ವಿಪಕ್ಷಗಳಿಂದ ನೋಟಿಸ್‌

ಮುಖ್ಯ ಚುನಾವಣಾ ಆಯುಕ್ತರನ್ನು (ಸಿಇಸಿ) ವಜಾಗೊಳಿಸುವಂತೆ ಮತ್ತೆ ವಿಪಕ್ಷಗಳಿಂದ ನೋಟಿಸ್‌

0

ದೆಹಲಿ: ಚುನಾವಣಾ ಆಯೋಗದ ಮುಖ್ಯ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ವಿರೋಧ ಪಕ್ಷದ ಸಂಸದರು ಶುಕ್ರವಾರ ರಾಜ್ಯಸಭೆಯಲ್ಲಿ ನೋಟಿಸ್ ಸಲ್ಲಿಸಿದ್ದಾರೆ. ಈ ನೋಟಿಸ್‌ಗೆ 27 ಮಂದಿ ಕಾಂಗ್ರೆಸ್ ಸಂಸದರು ಸೇರಿದಂತೆ ಒಟ್ಟು 73 ಮಂದಿ ಸಂಸದರು ಸಹಿ ಹಾಕಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತರ ಪೂರ್ವಾಗ್ರಹ ಪೀಡಿತ ಧೋರಣೆಯು ಇನ್ನೂ ಮುಂದುವರಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಪದಚ್ಯುತಗೊಳಿಸಬೇಕೆಂದು ವಿಪಕ್ಷಗಳು ನಿರ್ಧರಿಸಿವೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, “ಸಿಇಸಿ ವಿರುದ್ಧ ಒಂಬತ್ತು ನಿರ್ದಿಷ್ಟ ಆರೋಪಗಳನ್ನು ಒಳಗೊಂಡ ಸಮಗ್ರ ನೋಟಿಸ್ ಅನ್ನು ಸಲ್ಲಿಸಲಾಗಿದೆ. ಈ ಆರೋಪಗಳನ್ನು ತಿರಸ್ಕರಿಸಲು ಅಥವಾ ಮುಚ್ಚಿಹಾಕಲು ಸಾಧ್ಯವಿಲ್ಲದ ರೀತಿಯಲ್ಲಿ ದಾಖಲಿಸಲಾಗಿದೆ” ಎಂದು ಹೇಳಿದ್ದಾರೆ. ಆದರೆ ಆ ಆರೋಪಗಳ ವಿವರಗಳನ್ನು ಅವರು ಬಹಿರಂಗಪಡಿಸಲಿಲ್ಲ.

You cannot copy content of this page

Exit mobile version